ನವದೆಹಲಿ: ಶ್ರೀಲಂಕಾ ತಂಡದಲ್ಲಿ ಈಗ ದತ್ತಾಂಶ ವಿಶ್ಲೇಷಕ ಜಿಟಿ ನಿರೋಷನ್ ಮತ್ತು ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲಾವರ್ ಅವರು ಈಗ ಕೊರೊನಾ ಸೋಂಕಿಗೆ ಒಳಗಾಗಿರುವುದು ಈಗ ಆತಂಕವನ್ನು ಸೃಷ್ಟಿಸಿದೆ.ನಿರೋಶನ್ ಪ್ರಸ್ತುತ ವೈದ್ಯಕೀಯ ಪ್ರೋಟೋಕಾಲ್ಗಳ ಪ್ರಕಾರ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಭಾರತದ ವಿರುದ್ಧದ ಸರಣಿಗೂ ಮುನ್ನವೇ ಶ್ರೀಲಂಕಾ ತಂಡದ ಸಿಬ್ಬಂಧಿಗಳಿಗೆ ಕೊರೊನಾ ಧೃಡಪಟ್ಟಿರುವುದು ತಂಡದಲ್ಲಿ ಆತಂಕಕ್ಕೆ ಕಾರಣವಾಗಿದೆ.


ಇದನ್ನೂ ಓದಿ-ಮಕ್ಕಳ ಕಣ್ಣುಗಳ ಮೇಲೆ ಆನ್ಲೈನ್ ಕ್ಲಾಸ್ ನಿಂದ ಪ್ರಭಾವ, ಸ್ಮಾರ್ಟ್ ಫೋನ್ ನಿಂದ ಹೆಚ್ಚು ಹಾನಿ


'ಶ್ರೀಲಂಕಾ ರಾಷ್ಟ್ರೀಯ ತಂಡದ ದತ್ತಾಂಶ ವಿಶ್ಲೇಷಕ ಜಿಟಿ ನಿರೋಷನ್ ಅವರು COVID-19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ" ಎಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಹೇಳಿಕೆಯಲ್ಲಿ ತಿಳಿಸಿದೆ.ಗ್ರಾಂಟ್ ಫ್ಲವರ್ ಗೆ ಕೋವಿಡ್ ಪಾಸಿಟಿವ್ ಧೃಢಪಟ್ಟ ನಂತರ ನಿನ್ನೆ ರಾಷ್ಟ್ರೀಯ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗಳ ನಡುವೆ ನಡೆದ ಪಿಸಿಆರ್ ಪರೀಕ್ಷೆಯ ನಂತರ ಈಗ ಕೊರೊನಾ ಇರುವುದು ಧೃಡಪಟ್ಟಿದೆ.


ಇದನ್ನೂ ಓದಿ-Coronaಗೆ ಬಲಿಯಾದ China Corona Vaccine ಟ್ರಯಲ್ ನ ಪ್ರಮುಖ ವಿಜ್ಞಾನಿ!


ಗುರುವಾರ, ಶ್ರೀಲಂಕಾದ ಬ್ಯಾಟಿಂಗ್ ತರಬೇತುದಾರ ಫ್ಲವರ್ ಅವರಿಗೆ COVID-19 ಇರುವುದು ಧೃಡಪಟ್ಟಿತ್ತು, ಜುಲೈ 13 ರಿಂದ ಆರಂಭವಾಗಲಿರುವ ಆರು ಪಂದ್ಯಗಳ ವೈಟ್-ಬಾಲ್ ಸರಣಿಯಲ್ಲಿ ಶ್ರೀಲಂಕಾ ಭಾರತವನ್ನು ಎದುರಿಸಲು ಸಜ್ಜಾಗಿದೆ. ಈ ಬೆನ್ನಲ್ಲೇ ಈಗ ಕೊರೊನಾದ ಆತಂಕ ಮತ್ತಷ್ಟು ತೀವ್ರಗೊಂಡಿದೆ.ಈಗ ಸಂಪರ್ಕತಡೆಯನ್ನು ಹೊಂದಿರುವ ಇತರ ಎಲ್ಲ ಆಟಗಾರರನ್ನು ಸಹ ಪರೀಕ್ಷಿಸಲಾಗಿದೆ.


ಇದನ್ನೂ ಓದಿ-Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ! 


ಶ್ರೀಲಂಕಾ ತಂಡವು ಬಬಲ್ ವಲಯದಲ್ಲಿ ಭದ್ರವಾಗಿದ್ದರೂ ಕೂಡ ಗ್ರಾಂಟ್ ಫ್ಲಾವರ್ ಗೆ ಅದೇಗೆ ಕೊರೊನಾ ಧೃಢಪಟ್ಟಿತು ಎನ್ನುವ ವಿಚಾರವಾಗಿ ಇನ್ನೂ ಹೆಚ್ಚಿನ ಮಾಹಿತಿ ಬಂದಿಲ್ಲ.ಈಗಾಗಲೇ, ಶ್ರೀಲಂಕಾದ ಮೂವರು ಆಟಗಾರರು ಪ್ರವಾಸದ ಸಮಯದಲ್ಲಿ ಯುಕೆ ನಲ್ಲಿನ COVID-19 ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.