ಇಂಡೊನೆಷ್ಯಾ: China Covid-19 Vaccine Latest News - ಚೀನಾ (China) ಕೊರೊನಾ ವ್ಯಾಕ್ಸಿನ್ (China Corona Vaccine ) ಗಾಳಿಗುಳ್ಳೆ ಒಡೆದುಹೋಗಿದೆ ಹಾಗೂ ಇದೀಗ ಅದರ ಪ್ರಭಾವದ ಕುರಿತು ಕೂಡ ಶಂಕೆ ವ್ಯಕ್ತವಾಗುತ್ತಿದೆ. ಚೀನಾದ ಕರೋನಾ ಲಸಿಕೆ ಪರೀಕ್ಷೆ ನಡೆಸಿದ್ದ ಪ್ರಮುಖ ವಿಜ್ಞಾನಿ (Chief Scientist) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಂಡೋನೇಷ್ಯಾದಲ್ಲಿ (Indonesia) ಚೀನಾದ ಸಿನೋವಾಕ್ ಲಸಿಕೆ ಪ್ರಯೋಗದ ಪ್ರಮುಖ ವಿಜ್ಞಾನಿ (Covid-19 Chief Scientist Death) ಬುಧವಾರ ನಿಧನರಾಗಿದ್ದಾರೆ ಎಂದು ಇಂಡೊನೆಷ್ಯಾ ಮಾಧ್ಯಮಗಳು ವರದಿ ಮಾಡಿದ್ದು, ಕೋವಿಡ್ -19 (Covid-19) ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ವಿಜ್ಞಾನಿಯನ್ನು ನೋವಿಲಿಯಾ ಎಂದು ಗುರುತಿಸಲಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ವಿಜ್ಞಾನಿ ನೋವಿಲಿಯಾ ಸಾವು ಕೊರೊನಾ ವೈರಸ್ (Coronavirus) ಕಾರಣ ಸಂಭವಿಸಿತ್ತು ಎಂದು ಕುಂಪಾರನ್ ನ್ಯೂಸ್ ಸರ್ವಿಸೆಸ್ ಹೇಳಿದೆ. ಇನ್ನೊಂದೆಡೆ ನೋವಿಲಿಯಾ ಮೃತದೇಹವನ್ನು ಕೊವಿಡ್ -19 ಪ್ರೋಟೋಕಾಲ್ (Covid-19 Protocol) ಅಡಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಸರ್ಕಾರಿ ಔಷಧಿ ತಯಾರಕ ಕಂಪನಿ ಬಯೋಫಾರ್ಮ್ ಅಧಿಕಾರಿಯೋಬ್ಬರು ಹೇಳಿದ್ದಾರೆ ಎಂದು ಸಿಂದೋನ್ಯೂಸ್ ಹೇಳಿದೆ.
ಇದನ್ನೂ ಓದಿ- Joe Biden - ಅಮೆರಿಕ ವಾರದ ಅಂತ್ಯದ ವೇಳೆ 160 ಮಿಲಿಯನ್ ಜನರಿಗೆ ಲಸಿಕೆ ಗುರಿ ತಲುಪಲಿದೆ
ಇನ್ನೊಂದೆಡೆ ಇನ್ಸ್ಟಾಗ್ರಾಮ್ (Instagram Post) ಮೇಲೆ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಇಂಡೋನೆಷ್ಯಾ ಕೈಗಾರಿಕಾ ಸಚಿವ ಎರಿಕ್ ಥೋಹಿರ್, ವಿಜ್ಞಾನಿಯ ಸಾವು ಅಪಾರ ಹಾನಿವುಂಟು ಮಾಡಿದೆ ಎಂದು ಹೇಳಿ ಶೋಕ ವ್ಯಕ್ತಪಡಿಸಿದ್ದಾರೆ. ಆದರೆ, ವಿಜ್ಞಾನಿಯ ಸಾವಿಗೆ ಕಾರಣವನ್ನು ಮಾತ್ರ ಅವರು ಹೇಳಿಲ್ಲ. ಆದರೆ, ಅವಳೊಬ್ಬ ವಿಶೇಷ ವಿಜ್ಞಾನಿಯಾಗಿದ್ದಳು ಹಾಗೂ ಬಯೋಫಾರ್ಮ್ (Bioform) ನಡೆಸಿದ್ದ ಹಲವು ಕ್ಲಿನಿಕಲ್ ಟ್ರಯಲ್ ಗೆ (Corona Vaccine Clinical Trail)ಆಕೆ ಮುಖ್ಯಸ್ಥೆಯಾಗಿದ್ದರು. ಈ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಚೀನಾದ ಸಿನೋವ್ಯಾಕ್ ಸಹಯೋಗದಿಂದ ಕೊರೊನಾ ವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಕೂಡ ಶಾಮೀಲಾಗಿತ್ತು.
ಇದನ್ನೂ ಓದಿ-Research On Average Human Life: ಈ ಶತಮಾನದ ಅಂತ್ಯದ ವೇಳೆಗೆ ಮನುಷ್ಯರು 130 ವರ್ಷ ಬದುಕಲು ಸಾಧ್ಯವಾಗಲಿದೆ: ಅಧ್ಯಯನ
ಇಂಡೋನೇಷ್ಯಾದಲ್ಲಿ ಸಿನೋವಾಕ್ ಲಸಿಕೆ ನೀಡುವ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕುಗಳು ಮತ್ತು ಸಾವುಗಳು, ಸಾವನ್ನು ತಡೆಗಟ್ಟುವಲ್ಲಿ ಅದರ ಪರಿಣಾಮಕಾರಿತ್ವದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಜೂನ್‌ನಿಂದ 131 ಆರೋಗ್ಯ ಕಾರ್ಯಕರ್ತರು ಕೊವಿಡ್-19 ನಿಂದ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಚೀನಾದ ಲಸಿಕೆ ಸಿನೋವಾಕ್ ಅನ್ನು ಪಡೆದುಕೊಂಡಿದ್ದರು. ಈ ಲಸಿಕೆ ತೆಗೆದುಕೊಂಡ ನಂತರ ಸಾವನ್ನಪ್ಪಿದವರ ಸಂಖ್ಯೆ ಜುಲೈನಲ್ಲಿ 50 ರಷ್ಟಿತ್ತು ಎಂದು ಸ್ವತಂತ್ರ ದತ್ತಾಂಶ ಸಂಗ್ರಹ ಸಮೂಹ ಲ್ಯಾಪರ್ ಹೇಳಿದೆ.
ಇದನ್ನೂ ಓದಿ- China Rapidly Increasing Its Nuclear Capacity: ವೇಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದೆ ಚೀನಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ