ನವದೆಹಲಿ: ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ಏಕದಿನ ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ವರ್ಷ ವಿರಾಟ್ ಈಗಾಗಲೇ ಏಕದಿನ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಆದರೆ ಈ ನಡುವೆ ಏಕದಿನ ತಂಡದ ನಾಯಕತ್ವವನ್ನು ತೊರೆಯಲು ವಿರಾಟ್ ಗೆ ಇಷ್ಟವಿರಲಿಲ್ಲ. ಆದರೆ ಬಿಸಿಸಿಐ (BCCI) ಬಲವಂತವಾಗಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವವನ್ನು ಕಸಿದುಕೊಂಡಿದೆ ಎಂಬ ವಿಚಾರ ಗ ಬೆಳಕಿಗೆ ಬಂದಿದೆ.  


4 ವರ್ಷಗಳ ಹಿಂದೆ 2017 ರಲ್ಲಿ ಕೊಹ್ಲಿ (Virat Kohli) ಎಂಎಸ್ ಧೋನಿ ಬಳಿಕ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಟಿ-20 ನಂತರ ವಿರಾಟ್ ಕೊಹ್ಲಿ ಇನ್ನು ಮುಂದೆ ಏಕದಿನ ತಂಡದ ನಾಯಕರಾಗಿರುವುದಿಲ್ಲ. ಅವರ ಜವಾಬ್ದಾರಿಯನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸಲಾಗಿದೆ. ಟಿ20 (T-20) ಮತ್ತು ಓಡಿಐ (ODI) ಎರಡೂ ತಂಡದ ನಾಯಕತ್ವವನ್ನು ತ್ಯಜಿಸಬೇಕೆಂದು ವಿರಾಟ್ ಕೊಹ್ಲಿಗೆ ಬಿಸಿಸಿಐ ಬಹಳ ಹಿಂದೆಯೇ ಸೂಚಿಸಿತ್ತೆನ್ನಲಾಗಿದೆ. 


 


ನಾಯಕನ ಪಟ್ಟ ತೊರೆಯಲು ನಿರಾಕರಿಸಿದ್ದ ವಿರಾಟ್ ಕೊಹ್ಲಿ, ಬಲವಂತವಾಗಿ ನಾಯಕತ್ವ ಕಸಿದುಕೊಂಡ ಬಿಸಿಸಿಐ


ವಿಶ್ವಕಪ್‌ನಲ್ಲಿನ (World Cup) ನಿರಾಶಾದಾಯಕ ಪ್ರದರ್ಶನದ ಬಳಿಕ ಹೀಗಾಗುತ್ತದೆ ಎನ್ನುವುದನ್ನು ನಿರೀಕ್ಷಿಸಲಾಗಿತ್ತು. ಬುಧವಾರ, ಬಿಸಿಸಿಐ (BCCI)ವಿರಾಟ್ ಕೊಹ್ಲಿಯನ್ನು ಭಾರತದ ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿದೆ. ಇದು ಸದ್ಯ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. 


ಈ ಬಗ್ಗೆ ಟ್ವಿಟರ್ ನಲ್ಲಿ #ShameOnBcci ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಹಲವಾರು ಜನ BCCI ನಿರ್ಧಾರ ವಿರೋಧಿಸಿ ಟ್ವೀಟ್ ಮಾಡಿದ್ದಾರೆ. 


ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಟೀಂ ಇಂಡಿಯಾ 95 ಪಂದ್ಯಗಳಲ್ಲಿ 65 ಪಂದ್ಯಗಳನ್ನು ಗೆದ್ದಿದೆ ಮತ್ತು ತಂಡವು ಕೇವಲ 27 ರಲ್ಲಿ ಸೋಲನುಭವಿಸಿದೆ.