ನವದೆಹಲಿ: ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ಏಕದಿನ ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ. ಈ ವರ್ಷ ವಿರಾಟ್ ಈಗಾಗಲೇ ಏಕದಿನ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಆದರೆ ಈ ನಡುವೆ ಏಕದಿನ ತಂಡದ ನಾಯಕತ್ವವನ್ನು ತೊರೆಯಲು ವಿರಾಟ್ ಗೆ ಇಷ್ಟವಿರಲಿಲ್ಲ. ಆದರೆ ಬಿಸಿಸಿಐ (BCCI) ಬಲವಂತವಾಗಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವವನ್ನು ಕಸಿದುಕೊಂಡಿದೆ ಎಂಬ ವಿಚಾರ ಗ ಬೆಳಕಿಗೆ ಬಂದಿದೆ.
ವಿರಾಟ್‌ನಿಂದ ನಾಯಕತ್ವ ಕಸಿದುಕೊಂಡ ಬಿಸಿಸಿಐ :
ವಿಶ್ವಕಪ್‌ನಲ್ಲಿನ (World Cup) ನಿರಾಶಾದಾಯಕ ಪ್ರದರ್ಶನದ ಬಳಿಕ ಹೀಗಾಗುತ್ತದೆ ಎನ್ನುವುದನ್ನು ನಿರೀಕ್ಷಿಸಲಾಗಿತ್ತು. ಬುಧವಾರ, ಬಿಸಿಸಿಐ (BCCI)ವಿರಾಟ್ ಕೊಹ್ಲಿಯನ್ನು ಭಾರತದ ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿದೆ. ಈ ಸ್ಥಾನಕ್ಕೆ ರೋಹಿತ್ ಶರ್ಮಾ (Rohit Sharma) ಅವರನ್ನು ಆಯ್ಕೆ ಮಾಡಲಾಗಿದೆ. ಕೊಹ್ಲಿ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಕಳೆದ 48 ಗಂಟೆಗಳ ಕಾಲ ಕಾದಿತ್ತು. ಆದರೆ ಕೊಹ್ಲಿ (Virat Kohli) ತಮ್ಮ ಸ್ಥಾನ ತೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ 49 ನೇ ಗಂಟೆಯಲ್ಲಿ, ಕೊಹ್ಲಿ ಈ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಇದೀಗ ನಾಯಕತ್ವ ಸ್ಥಾನವನ್ನು ರೋಹಿತ್ ಶರ್ಮಾ ಅಲಂಕರಿಸಿದ್ದಾರೆ. ಏಕದಿನ ಮತ್ತು ಟಿ20ಐ ತಂಡಗಳ ನಾಯಕರಾಗಿ ರೋಹಿತ್ ಅವರನ್ನು ನೇಮಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ತನ್ನ ಹೇಳಿಕೆಯಲ್ಲಿ ಕೊಹ್ಲಿ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ.
ಇದನ್ನೂ ಓದಿ : ICC ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಪಡೆದ ಟೀಂ ಇಂಡಿಯಾದ ಈ ಆಟಗಾರ!
2023ರ ವಿಶ್ವಕಪ್‌ಗೆ ನಿರ್ಧಾರ :
2023ರ ಏಕದಿನ ವಿಶ್ವಕಪ್‌ವರೆಗೆ ಹೊಸ ನಾಯಕನನ್ನು ನೇಮಿಸಲು ಬಯಸುತ್ತಿರುವ ಕಾರಣ ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದೆ. ಟಿ20 ವಿಶ್ವಕಪ್‌ನ ಗ್ರೂಪ್ ಹಂತದಿಂದ ಭಾರತ ಹೊರಬಿದ್ದ ಕ್ಷಣ, ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕುವುದು ಬಹುತೇಕ ಖಚಿತವಾಗಿತ್ತು.ಅಂತೆಯೇ ಇದೀಗ, ಕೊಹ್ಲಿ ಸ್ಥಾನಕ್ಕೆ ಹೊಸ ನಾಯಕನ ನೇಮಕವಾಗಿದೆ.
ಕೊಹ್ಲಿಯ ಅದ್ಭುತ ಪಯಣ :
ಕೊಹ್ಲಿಯ ನಾಯಕತ್ವದ ಅವಧಿಯು ಅದ್ಭುತವಾಗಿತ್ತು. ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (Mahendra Sing Dhoni) ಅವರ ನಾಯಕತ್ವದಲ್ಲಿ ಕೊಹ್ಲಿಯನ್ನು ಬೆಳೆಸಿದ್ದರು. ಯಾವಾಗ ಕೊಹ್ಲಿಗೆ ನಾಯಕನ ಜವಾಬ್ದಾರಿ ನೀಡಬಹುದು ಎನ್ನುವುದು ಖಚಿತವಾಯಿಯೋ , ಆಗ ಬಿಳಿ ಚೆಂಡಿನ ಜವಾಬ್ದಾರಿಯನ್ನು ನೀಡಲಾಯಿತು. ಮುಂದಿನ 2 ವರ್ಷಗಳಲ್ಲಿ, ಕೊಹ್ಲಿ ತಮ್ಮದೇ ಆದ ತಂತ್ರಗಳನ್ನು ರೂಪಿಸುವ ಮೂಲಕ , ತಂಡದ ಪ್ರಬಲ ನಾಯಕರಾಗಿ ಹೊರಹೊಮ್ಮಿದರು. ನಂತರ ನಿರ್ವಾಹಕರ ಸಮಿತಿ ಕೂಡಾ, ಅವರ ಪ್ರತಿಯೊಂದು ಬೇಡಿಕೆಯನ್ನು ಪೂರೈಸಿತು. ನಂತರ ಯಶಸ್ವಿ ನಾಯಕತ್ವದ ಬಗ್ಗೆ ತಿಳಿದಿರುವ ಅತ್ಯಂತ ಶಕ್ತಿಶಾಲಿ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರೊಂದಿಗೆ ಸಾಂಪ್ರದಾಯಿಕ ನಿರ್ವಾಹಕರು ಸಮಿತಿಗೆ ಮರಳಿದರು. ಕೊನೆಗೆ ಬಿಳಿ ಚೆಂಡಿನ ಎರಡೂ ಸ್ವರೂಪಗಳಿಗೆ ಇಬ್ಬರು ವಿಭಿನ್ನ ನಾಯಕರ ಅಗತ್ಯವಿಲ್ಲ ಎನ್ನುವುದನ್ನು ನಿರ್ಧರಿಸಲಾಯಿತು.
ಇದನ್ನೂ ಓದಿ : IPL ಮೆಗಾ ಹರಾಜಿಗೂ ಮೊದಲೇ ಈ ತಂಡದ ಪಾಲಾದ KKR ನ ಈ ಆಟಗಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ