ಶ್ರೇಷ್ಠ ದಾಖಲೆ ಬರೆದ ಶಿವಂ ದುಬೆ… ಕೊಹ್ಲಿ-ಯುವರಾಜ್ ಅವರಿದ್ದ ಈ ವಿಶೇಷ ಕ್ಲಬ್ ಪ್ರವೇಶಿಸಿದ ಧೋನಿಯ ಅಪ್ಪಟ ಶಿಷ್ಯ
Shivam Dube Elite Club: ಶಿವಂ ದುಬೆ ಭಾರತ ಪರ ಆಡುತ್ತಿರುವಾಗ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅರ್ಧಶತಕ ಹಾಗೂ ಒಂದು ವಿಕೆಟ್ ಪಡೆದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
Shivam Dube Elite Club: ಮೊಹಾಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್’ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಶಿವಂ ದುಬೆ ಅಜೇಯ ಅರ್ಧಶತಕ ಗಳಿಸಿದ್ದು, ಬೌಲಿಂಗ್’ನಲ್ಲಿ 1 ವಿಕೆಟ್ ಕೂಡ ಪಡೆದಿದ್ದಾರೆ. ಈ ಅದ್ಭುತ ಪ್ರದರ್ಶನದೊಂದಿಗೆ, ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಅವರಿದ್ದ ವಿಶೇಷ ಕ್ಲಬ್’ಗೆ ಶಿವಂ ದುಬೆ ಸೇರಿಕೊಂಡಿದ್ದಾರೆ.
ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಮೊಹಮ್ಮದ್ ನಬಿ ಅವರ 42 ರನ್ ಮತ್ತು ಒಮರ್ಜಾಯ್ ಅವರ 29 ರನ್’ಗಳ ನೆರವಿನಿಂದ ಅಫ್ಘಾನಿಸ್ತಾನ ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ ತಂಡ ಶಿವಂ ದುಬೆ ಅವರ 60 ರನ್’ಗಳಿಂದ 17.3 ಓವರ್’ಗಳಲ್ಲಿ 159 ರನ್ ಗಳಿಸಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಪರೀಕ್ಷೆ ಬರೆಯೋಕೆ ಇಷ್ಟವಿಲ್ಲದೆ ನಟನೆಯತ್ತ ಬಂದ ಸಂಗೀತಾ ಶೃಂಗೇರಿ ನಿಜವಾದ ವಿದ್ಯಾರ್ಹತೆ ಏನು?
ಈ ಪಂದ್ಯದಲ್ಲಿ ದುಬೆ 40 ಎಸೆತಗಳನ್ನು ಎದುರಿಸಿ ಅಜೇಯ 60 ರನ್ ಗಳಿಸಿದರು. ದುಬೆ ಅವರ ಈ ಇನ್ನಿಂಗ್ಸ್’ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್’ಗಳು ಸೇರಿದ್ದವು. 150 ಸ್ಟ್ರೈಕ್ ರೇಟ್’ನಲ್ಲಿ ರನ್ ಗಳಿಸಿದರು.
ಶಿವಂ ದುಬೆ ಭಾರತ ಪರ ಆಡುತ್ತಿರುವಾಗ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅರ್ಧಶತಕ ಹಾಗೂ ಒಂದು ವಿಕೆಟ್ ಪಡೆದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಯುವರಾಜ್ ಸಿಂಗ್ 3 ಬಾರಿ, ವಿರಾಟ್ ಕೊಹ್ಲಿ 2 ಬಾರಿ ಮತ್ತು ಹಾರ್ದಿಕ್ ಪಾಂಡ್ಯ 1 ಬಾರಿ ಈ ಸಾಧನೆ ಮಾಡಿದ್ದಾರೆ.
ಶಿವಂ ದುಬೆ ಅವರ ಅದ್ಭುತ ಪ್ರದರ್ಶನದಿಂದಾಗಿ ಪಂದ್ಯ ಶ್ರೇಷ್ಠ ಆಟಗಾರರಾಗಿ ಆಯ್ಕೆಯಾದರು. ಏಷ್ಯನ್ ಗೇಮ್ಸ್ 2023 ರ ನಂತರ ದುಬೆ ಅವರ ಮೊದಲ ಟಿ 20 ಅಂತರರಾಷ್ಟ್ರೀಯ ಪಂದ್ಯ ಇದು.
ಇದನ್ನೂ ಓದಿ: IND vs AFG: ಮೊದಲ ಟಿ20 ಪಂದ್ಯ ಗೆದ್ದ ಭಾರತ… ಈ ಆಟಗಾರನ ಎಂಟ್ರಿಯಿಂದಲೇ ಗೆಲುವು ಕಂಡ ಟೀಂ ಇಂಡಿಯಾ!
ಪಂದ್ಯದ ನಂತರ ತಮ್ಮ ಪ್ರದರ್ಶನದ ಕುರಿತು ಮಾತನಾಡಿದ ದುಬೆ, 'ಇದು ನಿಜವಾಗಿಯೂ ಆಹ್ಲಾದಕರವಾಗಿತ್ತು. ನಾನು ಈ ಮೈದಾನದಲ್ಲಿ ಆಡುವುದನ್ನು ಆನಂದಿಸಿದೆ. ಬಹಳ ಸಮಯದ ನಂತರ ಆಡಿದ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ನನ್ನ ಮೇಲೆ ಸ್ವಲ್ಪ ಒತ್ತಡವಿತ್ತು. ಇದೇ ವೇಳೆ ನಾನು ನನ್ನ ಆಟವನ್ನು ಆಡಬೇಕು ಎಂದು ನನ್ನ ಮನಸ್ಸಿನಲ್ಲಿ ಇತ್ತು. ಮೊದಲ 2-3 ಎಸೆತಗಳಲ್ಲಿ ನಾನು ಸ್ವಲ್ಪ ಒತ್ತಡವನ್ನು ಅನುಭವಿಸಿದೆ. ಟಿ20ಯಲ್ಲಿ ನಾನು ಹೇಗೆ ಬ್ಯಾಟಿಂಗ್ ಮಾಡುತ್ತೇನೆ ಎಂಬುದು ನನಗೆ ಗೊತ್ತು. ನಾನು ದೊಡ್ಡ ಸಿಕ್ಸರ್’ಗಳನ್ನು ಬಾರಿಸಬಲ್ಲೆ ಎಂದು ನನಗೆ ತಿಳಿದಿದೆ” ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ