Team India Number 3 Batting Order: ಇಂದೋರ್‌’ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 99 ರನ್‌’ಗಳಿಂದ ಸೋಲಿಸಿತು. ಭಾನುವಾರ ನಡೆದ ಈ ಪಂದ್ಯದಲ್ಲಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಒಂದು ಪ್ರಯೋಗ ಮಾಡಿ ಶ್ರೇಯಸ್ ಅಯ್ಯರ್ ಅವರನ್ನು ನಂಬರ್-3ನೇ ಕ್ರಮಾಂಕದಲ್ಲಿ ಇಳಿಸಿತು. ಕೊನೆಗೂ ತಂಡದ ಪ್ರಯತ್ನ ವಿಫಲವಾಗಲಿಲ್ಲ. ಅಯ್ಯರ್ ಈ ಪಂದ್ಯದಲ್ಲಿ ಅಗ್ರ ಸ್ಕೋರರ್ ಆಗಿ ಹೊರ ಹೊಮ್ಮಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಾಯಕ ರೋಹಿತ್ ಶರ್ಮಾರ ಅತ್ಯಂತ ನೆಚ್ಚಿನ ಓಪನಿಂಗ್ ಬ್ಯಾಟ್ಸ್’ಮನ್ ಯಾರು ಗೊತ್ತಾ?


ಆಸ್ಟ್ರೇಲಿಯ ವಿರುದ್ಧದ ಸರಣಿಯ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 5 ವಿಕೆಟ್‌’ಗೆ 399 ರನ್‌’ಗಳ ಬೃಹತ್ ಸ್ಕೋರ್ ಕಲೆ ಹಾಕಿತ್ತು. ಆರಂಭಿಕರಾದ ಶುಭಮನ್ ಗಿಲ್ (104), ಶ್ರೇಯಸ್ ಅಯ್ಯರ್ (105) ಶತಕ ಗಳಿಸಿದರು. ನಂತರ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 72 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಹಂಗಾಮಿ ನಾಯಕ ಕೆಎಲ್ ರಾಹುಲ್ 52 ರನ್ ಕೊಡುಗೆ ನೀಡಿದರು. ಇದಾದ ಬಳಿಕ ಮಳೆಯಿಂದಾಗಿ 33 ಓವರ್‌.ಗಳಲ್ಲಿ 317 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 28.2 ಓವರ್‌’ಗಳಲ್ಲಿ 217 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 53 ರನ್ ಹಾಗೂ ಸೀನ್ ಅಬಾಟ್ 54 ರನ್ ಗಳಿಸಿದರು. ಭಾರತ ಪರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರು.


ಈ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 3ನೇ ಸ್ಥಾನಕ್ಕೆ ಬ್ಯಾಟಿಂಗ್’ಗೆ ಆಗಮಿಸಿ ಅದ್ಭುತ ಪ್ರದರ್ಶನ ನೀಡಿದರು. ODI ಅಂತರಾಷ್ಟ್ರೀಯ ವೃತ್ತಿಜೀವನದ ಮೂರನೇ ಶತಕವನ್ನು ಗಳಿಸಿದರು.


ಅಂದಹಾಗೆ ಮುಂಬರುವ ವಿಶ್ವಕಪ್‌’ಗೆ ಭಾರತ ಆತಿಥ್ಯ ವಹಿಸಬೇಕಿದೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾದ ವಿಶ್ವಕಪ್ ಕನಸು ನನಸು ಮಾಡಿಕೊಳ್ಳುವ ಎಲ್ಲಾ ತಯಾರಿಯಲ್ಲಿ ತಂಡ ತೊಡಗಿಸಿಕೊಂಡಿದೆ.


ಇನ್ನು ಪಂದ್ಯದ ನಂತರ 28 ವರ್ಷದ ಶ್ರೇಯಸ್ ಮಾತನಾಡಿ, “ಇದು ರೋಲರ್ ಕೋಸ್ಟರ್ ರೈಡ್. ಏಷ್ಯಾಕಪ್ ಸಮಯದಲ್ಲಿ, ನನ್ನ ಸಹ ಆಟಗಾರರು, ಸ್ನೇಹಿತರು ಮತ್ತು ಕುಟುಂಬದವರು ನನಗೆ ಬೆಂಬಲ ನೀಡಿದ್ದರು. ನಾನು ಟಿವಿಯಲ್ಲಿ ಪಂದ್ಯವನ್ನು ನೋಡುತ್ತಿದ್ದೆ, ನಾನು ಅಲ್ಲಿಗೆ ಹೋಗಿ ಪಂದ್ಯವನ್ನು ಆಡಬೇಕೆಂದು ಬಯಸಿದ್ದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನೋವು ಇತ್ತು, ಆದರೆ ನನ್ನ ಗುರಿ ಏನೆಂದು ನನಗೆ ತಿಳಿದಿತ್ತು. ಇಂದು ನನ್ನ ಯೋಜನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ ಎಂದು ಸಂತೋಷವಾಗಿದೆ” ಎಂದರು.


ಇದನ್ನೂ ಓದಿ: ಅಶ್ವಿನ್ ಎದುರು ಅತೀ ಬುದ್ದಿವಂತಿಕೆ ತೋರಿಸಲು ಬಂದ ಡೇವಿಡ್ ವಾರ್ನರ್! ಬೆಪ್ಪಾಗಿ ಔಟ್ ಆಗಿದ್ದು ಹೀಗೆ


“ನಾನು ಬ್ಯಾಟಿಂಗ್‌ಗೆ ಬಂದಾಗ, ನಾನು ವಿಷಯಗಳನ್ನು ಸರಳವಾಗಿಡಲು ಬಯಸಿದ್ದೆ. ಅವು ನನಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ತಂಡಕ್ಕಾಗಿ ನಾನು ಯಾವುದೇ ಸ್ಥಾನದಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಲು ಸಿದ್ಧ. ವಿರಾಟ್ ಶ್ರೇಷ್ಠ ಆಟಗಾರರಲ್ಲಿ ಒಬ್ಬರು, ಅವರಿಂದ ಆ (ಸಂಖ್ಯೆ 3) ಸ್ಥಾನವನ್ನು ಕಸಿದುಕೊಳ್ಳುವ ಸಾಧ್ಯತೆಯಿಲ್ಲ. ನಾನು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ ರನ್ ಗಳಿಸುವತ್ತ ಯೋಚಿಸುತ್ತೇನೆ” ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ