ಇಂದು ವಿಶ್ವನಾಥನ್ ಆನಂದ್ ಹುಟ್ಟುಹಬ್ಬ...ನೀವು ತಿಳಿಯಬೇಕಾಗಿರುವ ಕುತೂಹಲಕರ ಸಂಗತಿಗಳು
ಇಂದು ಚೆಸ್ ಸಾಮ್ರಾಟ್ ವಿಶ್ವನಾಥನ್ ಅವರ ಜನ್ಮದಿನ. ಈ ಹಿನ್ನಲೆಯಲ್ಲಿ ಅವರ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಕುತೂಹಲಕರ ಸಂಗತಿಗಳು ಇಲ್ಲಿವೆ.
ನವದೆಹಲಿ: ಇಂದು ಚೆಸ್ ಸಾಮ್ರಾಟ್ ವಿಶ್ವನಾಥನ್ ಅವರ ಜನ್ಮದಿನ. ಈ ಹಿನ್ನಲೆಯಲ್ಲಿ ಅವರ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಕೂತುಹಲಕರ ಸಂಗತಿಗಳು ಇಲ್ಲಿವೆ.
-ವಿಶ್ವನಾಥನ್ ಆನಂದ್ 1969 ರ ಡಿಸೆಂಬರ್ 11 ರಂದು ತಮಿಳುನಾಡಿನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
-ಆನಂದ್ ಅವರ ತಾಯಿ ಸುಶೀಲಾ ಗೃಹಿಣಿ ಮತ್ತು ತಂದೆ ವಿಶ್ವನಾಥನ್ ಅಯ್ಯರ್ ಅವರು ದಕ್ಷಿಣ ರೈಲ್ವೆಯಲ್ಲಿ ಕಾರ್ಯನಿರ್ವಹಿಸಿದರು,
-ಅವರ ತಾಯಿ ಚೆಸ್ ಕ್ರೀಡೆಯ ಅತಿ ದೊಡ್ಡ ಅಭಿಮಾನಿಯಾಗಿದ್ದರು ಆದ್ದರಿಂದ ವಿಶ್ವನಾಥನ್ ಆನಂದ್ ಕೇವಲ ಐದು ವರ್ಷದವನಾಗಿದ್ದಾಗ ಅವರಿಗೆ ಚೆಸ್ ಆಟವನ್ನು ಕಲಿಸಿದರು. ಇದೆ ಕಾರಣದಿಂದ ಮುಂದೆ ಚೆಸ್ ನಲ್ಲಿ ವೃತ್ತಿಪರ ಆಟಗಾರನನ್ನಾಗಿ ರೂಪಿಸಲು ಸಹಾಯ ಮಾಡಿತು.
-14 ನೇ ವಯಸ್ಸಿನಲ್ಲಿ ಅವರು 1983 ರಲ್ಲಿ ರಾಷ್ಟ್ರೀಯ ಸಬ್ ಜೂನಿಯರ್ ಚೆಸ್ ಚಾಂಪಿಯನ್ಶಿಪ್ ಗೆದ್ದರು ಮತ್ತು 16 ನೇ ವಯಸ್ಸಿನಲ್ಲಿ ಅವರು ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿದ್ದರು.
-1987 ರಲ್ಲಿ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ಷಿಪ್ ಗೆದ್ದ ಮೊದಲ ಭಾರತೀಯರಾದರು.1988 ರಲ್ಲಿ 18 ವರ್ಷದವರಾಗಿದ್ದಾಗ ಭಾರತದ ಮೊದಲ ಗ್ರಾಂಡ್ ಮಾಸ್ಟರ್ ಆದರು.
-ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ಸೇರುವ ಮೊದಲು ಅವರು ಡಾನ್ ಬಾಸ್ಕೊ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಅಧ್ಯಯನ ಮಾಡಿದ್ದರು.
-ಆನಂದ್ ಅವರು ಟೆಹ್ರಾನ್ ನಲ್ಲಿ ಅಲೆಕ್ಸಿ ಶಿಯ್ರೊರನ್ನು ಸೋಲಿಸಿ 2000 ದಲ್ಲಿ ಮೊದಲ ಬಾರಿಗೆ ಫಿಡೆ ವಿಶ್ವ ಚೆಸ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎನ್ನುವ ಖ್ಯಾತಿ ಪಡೆದರು.
-ವಿಶ್ವನಾಥನ್ ಆನಂದ್ ಆರಂಭಿಕ ದಿನಗಳಲ್ಲಿ ಚೆಸ್ ನ ಪೂರ್ತಿ ಕ್ಲಾಸಿಕಲ್ ಗೇಮ್ ನ್ನು ಕೇವಲ 15-25 ನಿಮಿಷಗಳಲ್ಲಿ ಆಡುತ್ತಿದ್ದರು ಆದರೆ ಅವರ ಸಮಕಾಲೀನರು 2-3 ಗಂಟೆಗಳವರೆಗೆ ಆಡುತ್ತಿದ್ದರು
-ಆನಂದ್ ಅವರ ಪುಸ್ತಕ 'ಮೈ ಬೆಸ್ಟ್ ಗೇಮ್ಸ್ ಆಫ್ ಚೆಸ್' 1998 ರಲ್ಲಿ ಬ್ರಿಟಿಷ್ ಚೆಸ್ ಫೆಡರೇಶನ್ 'ಬುಕ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಪಡೆದುಕೊಂಡಿದೆ.
-ಆನಂದ್ 1987 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.
-ಅವರು 1991-1992ರಲ್ಲಿ ಭಾರತದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಮೊದಲ ಸ್ವೀಕರಿದ ಮೊದಲ ಆಟಗಾರ ಎನ್ನುವ ಖ್ಯಾತಿ ಪಡೆದರು
-2007 ರಲ್ಲಿ ಅವರು ಭಾರತದ ಎರಡನೇ ಉನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ಪಡೆದುಕೊಂಡರು
-ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಭಾರತದ ಏಕೈಕ ಚೆಸ್ ಆಟಗಾರರಾಗಿದ್ದಾರೆ.