ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly)ಜೀವನಚರಿತ್ರೆ ಕುರಿತ ಸಿನಿಮಾ ನಿರ್ಮಾಣವಾಗಲಿದೆ. ‘ದಾದಾ’ ಜೀವನದ ಬಗ್ಗೆ ಬಾಲಿವುಡ್ ನಲ್ಲಿ ಇದುವರೆಗೂ ಯಾರೂ ಸಿನಿಮಾ ನಿರ್ಮಿಸಲು ಮುಂದೆ ಬಂದಿರಲಿಲ್ಲ. ರಿಯಲ್ ಲೈಫ್ ನಲ್ಲಿ ಅವರ ಆಕ್ರಮಣಕಾರಿ ಆಟ, ನಾಯಕನಾಗಿ ಭಾರತೀಯ ಕ್ರಿಕೆಟ್ ಗೆ ಅವರು ಜೀವ ತುಂಬಿದ ರೀತಿಯನ್ನು ತೆರೆಮೇಲೆ ಕಾಣಬೇಕೆಂಬುದು ಅವರ ಅಭಿಮಾನಿಗಳ ಅಭಿಲಾಷೆಯಾಗಿದೆ.


COMMERCIAL BREAK
SCROLL TO CONTINUE READING

ಗಂಗೂಲಿ 1996ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರಿಂದ ಹಿಡಿದು, ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡು ತಂಡವನ್ನು ಮುನ್ನೆಡೆಸಿದ್ದು, ಮಾಜಿ ಕೋಚ್ ಗ್ರೆಗ್ ಚಾಪೆಲ್ ರೊಂದಿಗಿನ ವಿವಾದ ಸೇರಿದಂತೆ ಅನೇಕ ಮಹತ್ವದ ಘಟನೆಗಳಿಗೆ ಕ್ರಿಕೆಟ್ ಇತಿಹಾಸ ಸಾಕ್ಷಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್(International Cricket) ಜರ್ನಿಯಲ್ಲಿ ಗಂಗೂಲಿ ಜೀವನ ರೋಮಾಂಚನಕಾರಿ ಅನುಭವ ನೀಡುತ್ತದೆ. ಇದೀಗ ಅವರ ಬಯೋಪಿಕ್ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧವಾಗಿದೆ.


ಇದನ್ನೂ ಓದಿ: Yashpal Sharma: ಭಾರತದ ಮಾಜಿ ಕ್ರಿಕೆಟಿಗ ಯಶ್ಪಾಲ್ ಶರ್ಮಾ ನಿಧನ


2002ರಲ್ಲಿ ಇಂಗ್ಲೆಂಡ್ ವಿರುದ್ಧದ ನ್ಯಾಟ್‌ವೆಸ್ಟ್ ಟ್ರೋಫಿ ನಾಯಕನಾಗಿ ಗಂಗೂಲಿಯವರು ಸಾಧಿಸಿದ ಅತಿದೊಡ್ಡ ಗೆಲುವಾಗಿದೆ. ಇದರ ವಿಜಯೋತ್ಸವದ 19ನೇ ವಾರ್ಷಿಕೋತ್ಸದಂದು ‘ದಾದಾ’ ಜೀವನಚರಿತ್ರೆ(Sourav Ganguly Biopic)ಯನ್ನು ದೊಡ್ಡ ಪ್ರೊಡಕ್ಸನ್ ಹೌಸ್ ನ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ ಸುದ್ದಿ ಹೊರಬಿದ್ದಿದೆ. ಅಲ್ಲದೆ ಇದು ದೊಡ್ಡ ಬಜೆಟ್ ನಲ್ಲಿ ಮೂಡಿಬರಲಿರುವ ಬಾಲಿವುಡ್ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ಮೂಲಗಳ ಪ್ರಕಾರ ಸುಮಾರು 200 ರಿಂದ 250 ಕೋಟಿ ರೂ. ವೆಚ್ಚದಲ್ಲಿ ಬಯೋಪಿಕ್ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ.


‘ಹೌದು, ನನ್ನ ಬಯೋಪಿಕ್ ನಿರ್ಮಾಣಕ್ಕೆ ನನ್ನ ಒಪ್ಪಿಗೆ ಇದೆ. ಅದು ಹಿಂದಿ ಭಾಷೆಯಲ್ಲಿ ತಯಾರಾಗಲಿದ್ದು, ಸದ್ಯಕ್ಕೆ ಚಿತ್ರದ ನಿರ್ದೇಶಕರು ಯಾರು ಎಂದು ಹೇಳಲು ಸಾಧ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗುತ್ತದೆ’ ಎಂದು ಗಂಗೂಲಿ ಹೇಳಿದ್ದಾರೆ. ಸಿನಿಮಾ ನಿರ್ಮಿಸುತ್ತಿರುವ ಪ್ರೊಡಕ್ಷನ್ ಹೌಸ್ ಈಗಾಗಲೇ ಗಂಗೂಲಿಯವರ ಜೊತೆ ಅನೇಕ ಸಭೆಗಳನ್ನು ನಡೆಸಿ ಮಾತುಕತೆ ನಡೆಸಿದ್ದು, ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ.


ಇದನ್ನೂ ಓದಿ: Universe Boss: ಟಿ-20ಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕ್ರಿಸ್ ಗೇಲ್!


‘ದಾದಾ’ ಬಯೋಪಿಕ್ ತಯಾರಾಗುತ್ತಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ‘ಕೋಲ್ಕತ್ತಾ ಕಿಂಗ್’ನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆಂಬ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ನಟ ರಣ್‌ಬೀರ್ ಕಪೂರ್(Ranbir Kapoor) ‘ದಾದಾ’ ಪಾತ್ರಕ್ಕೆ ಜೀವ  ತುಂಬಲಿದ್ದಾರೆಂದು ಹೇಳಲಾಗುತ್ತಿದೆ. ಈ ಹಿಂದೆ ತಮ್ಮ ಬಯೋಪಿಕ್ ಕುರಿತ ಸುದ್ದಿಗಳನ್ನು ತಳ್ಳಿಹಾಕುತ್ತಿದ್ದ ಗಂಗೂಲಿ ಒಂದು ವೇಳೆ ಏನಾದರೂ ತಮ್ಮ ಜೀವನಚರಿತ್ರೆ ನಿರ್ಮಾಣವಾದರೆ ರಣ್‌ಬೀರ್ ಕಪೂರ್ ಅವರೇ ಮುಖ್ಯಪಾತ್ರದಲ್ಲಿ ನಟಿಸುತ್ತಾರೆಂದು ಹೇಳಿದ್ದರು.


ಟೀಂ ಇಂಡಿಯಾದ ಮಾಜಿ ನಾಯಕರ ಎಂ.ಎಸ್.ಧೋನಿ(MS Dhoni), ಮೊಹಮ್ಮದ್ ಅಜರುದ್ದೀನ್ ಮತ್ತು ಸಚಿನ್ ತೆಂಡೂಲ್ಕರ್ ನಂತರ ಇದೀಗ ಸೌರವ್ ಗಂಗೂಲಿ ಬಯೋಪಿಕ್ ಕೂಡ ಸೆಟ್ಟೇರಲು ಸಿದ್ಧವಾಗಿದೆ. ವರದಿಗಳ ಪ್ರಕಾರ ಮುಂದಿನ ವರ್ಷ ಗಂಗೂಲಿಯವರ 50ನೇ ಹುಟ್ಟುಹಬ್ಬಕ್ಕೂ ಮೊದಲು ಸಿನಿಮಾ ಬಿಡುಗಡೆಯಾಗಬಹುದು ಎಂದು ಊಹಿಸಲಾಗಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.