ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಯಶ್ಪಾಲ್ ಶರ್ಮಾ(66) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ತಮ್ಮ ನೋಯ್ಡಾದ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನನ್ನು ಆಗಲಿದ್ದಾರೆ. ಯಶ್ಪಾಲ್ ಶರ್ಮಾ (Yashpal Sharma) ಅವರಿಗೆ 66 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ವಾಯುವಿಹಾರದಿಂದ ಹಿಂದಿರುಗಿದ ನಂತರ ಅವರಿಗೆ ಹೃದಯಾಘಾತವಾಗಿದ್ದು, ಬೆಳಿಗ್ಗೆ 7.30 ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಯಶ್ಪಾಲ್ ಶರ್ಮಾ (Yashpal Sharma) 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರೂ. ಯಶ್ಪಾಲ್ ಶರ್ಮಾ ಅವರು ಭಾರತ ಪರ 37 ಟೆಸ್ಟ್ ಪಂದ್ಯಗಳಲ್ಲಿ 1606 ರನ್ ಗಳಿಸಿದ್ದಾರೆ. ಅವರು 33.45 ಸರಾಸರಿಯಲ್ಲಿ ಗರಿಷ್ಠ 140 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಅವರು 42 ಪಂದ್ಯಗಳಲ್ಲಿ 28.48 ಸರಾಸರಿಯಲ್ಲಿ 883 ರನ್ ಗಳಿಸಿದ್ದಾರೆ.
1983 ರ ವಿಶ್ವಕಪ್‌ನಲ್ಲಿ (World Cup) ಭಾರತದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದ ಬಲಗೈ ಬ್ಯಾಟ್ಸ್‌ಮನ್ ಯಶ್ಪಾಲ್ ಶರ್ಮಾ ಅವರು ಪಂಜಾಬ್, ಹರಿಯಾಣವನ್ನು ಪ್ರತಿನಿಧಿಸಿ 160 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 8933 ರನ್ ಗಳಿಸಿದ್ದಾರೆ.
ಇದನ್ನೂ ಓದಿ- Prithvi Shaw: ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಪೃಥ್ವಿಯ ಅಬ್ಬರಕ್ಕೆ ಹುಬ್ಬೆರಿಸಿದ ಹಿರಿಯ ಬೌಲರ್‌ಗಳು
ಭಾರತದ 1983 ರ ವಿಶ್ವಕಪ್ ಹೀರೋ ಯಶ್ಪಾಲ್ ಶರ್ಮಾ:
ಭಾರತದ 1983 ರ ವಿಶ್ವಕಪ್ (1983 World Cup) ಹೀರೋ ಯಶ್ಪಾಲ್ ಶರ್ಮಾ (Yashpal Sharma) ನಮ್ಮೊಂದಿಗೆ ಇಲ್ಲ ಎಂಬ ಸುದ್ದಿಯಿಂದ ಆಘಾತವಾಗಿದೆ. ಯಶ್ಪಾಲ್ ಶರ್ಮಾ 2003 ರಿಂದ 2006 ರವರೆಗೆ ಭಾರತೀಯ ತಂಡದ ಆಯ್ಕೆಗಾರರಾಗಿದ್ದರು. ನಂತರ ಯಶ್ಪಾಲ್ ಶರ್ಮಾ ತಂಡದ ಕೋಚ್ ಗ್ರೆಗ್ ಚಾಪೆಲ್ ವಿರುದ್ಧ ಧ್ವನಿ ಎತ್ತಿದರು ಮತ್ತು ಸೌರವ್ ಗಂಗೂಲಿಯನ್ನು ಬೆಂಬಲಿಸಿದರು ಎಂದು ಯಶ್ಪಾಲ್ ಶರ್ಮಾ ಅವರ ಮಾಜಿ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಯಶ್ಪಾಲ್ ಶರ್ಮಾ ಭಾರತದ ರಾಷ್ಟ್ರೀಯ ಆಯ್ಕೆಗಾರರೂ ಆಗಿದ್ದರು:
ಯಶ್ಪಾಲ್ ಶರ್ಮಾ ಅವರು ಯುದ್ಧಶೀಲತೆಗೆ ಹೆಸರುವಾಸಿಯಾಗಿದ್ದಾರೆ. 1983 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳು ಅವರ ಅರ್ಧಶತಕ ಇನ್ನಿಂಗ್ಸ್ ಅನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಯಶ್ಪಾಲ್ ಶರ್ಮಾ ಭಾರತದ ರಾಷ್ಟ್ರೀಯ ಆಯ್ಕೆಗಾರರೂ ಆಗಿದ್ದರು.
ಇದನ್ನೂ ಓದಿ- Universe Boss: ಟಿ-20ಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕ್ರಿಸ್ ಗೇಲ್!
1983ರ ವಿಶ್ವಕಪ್ ವಿಜಯ ತಾರೆಗಳು:
1983 ರಲ್ಲಿ ಭಾರತದ ಮೊದಲ ವಿಶ್ವಕಪ್ (World Cup) ಗೆಲುವಿನ ಸಾಧನೆಗಾಗಿ ಯಶ್ಪಾಲ್ ಶರ್ಮಾ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಮರಿಸಲಾಗುತ್ತದೆ. ನಾಯಕ ಕಪಿಲ್ ದೇವ್ ನಂತರ ಟೂರ್ನಿಯಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಯಶ್ಪಾಲ್ ಶರ್ಮಾ. ವಿಶ್ವಕಪ್‌ನಲ್ಲಿ ಯಶ್‌ಪಾಲ್ 34.28 ಸರಾಸರಿಯಲ್ಲಿ 240 ರನ್ ಗಳಿಸಿದ್ದಾರೆ. 1983 ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಯಶ್ಪಾಲ್ ಶರ್ಮಾ 89 (120 ಎಸೆತಗಳಲ್ಲಿ) ಗಳಿಸಿದರು. ಇದು ವೆಸ್ಟ್ ಇಂಡೀಸ್ ವಿರುದ್ಧದ 34 ರನ್‌ಗಳ ಗೆಲುವಿನಲ್ಲಿ ಭಾರತ 262/8 ರನ್ ಕಲೆಹಾಕಲು ನೆರವಾಯಿತು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಆ ಗೆಲುವು ಭಾರತಕ್ಕೆ ಕ್ರಿಕೆಟ್ ಜಗತ್ತಿನಲ್ಲಿ ಮುಂದುವರಿಯಲು ಮತ್ತು ಪಂದ್ಯಾವಳಿಯನ್ನು ಗೆಲ್ಲುವ ವಿಶ್ವಾಸವನ್ನು ನೀಡಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.