ನವದೆಹಲಿ: ಟೀಂ ಇಂಡಿಯಾಗೆ ಇತ್ತೀಚೆಗೆ ರಾಹುಲ್ ದ್ರಾವಿಡ್(Rahul Dravid) ರೂಪದಲ್ಲಿ ಹೊಸ ಕೋಚ್ ಸಿಕ್ಕಿದ್ದಾರೆ. ಟಿ-20 ವಿಶ್ವಕಪ್ ಮುಗಿದ ಕೂಡಲೇ ರವಿಶಾಸ್ತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೊದಲು ದ್ರಾವಿಡ್ ತಂಡದ ಕೋಚ್ ಆಗಲು ಸಿದ್ಧರಿರಲಿಲ್ಲ, ಆದರೆ ನಂತರ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ(Sourav Ganguly) ಅವರನ್ನು ಒತ್ತಾಯಿಸುವ ಮೂಲಕ ಮನವೊಲಿಸಿದರು. ಏತನ್ಮಧ್ಯೆ ದ್ರಾವಿಡ್‌ಗಿಂತ ಮೊದಲು ಟೀಂ ಇಂಡಿಯಾದ ಕೋಚ್ ಆಗಲು ಬಯಸಿದ್ದ ಇನ್ನೊಬ್ಬ ದಂತಕಥೆ ಇದ್ದರೆಂದು ಗಂಗೂಲಿ ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ದಂತಕಥೆ ಕೋಚ್ ಆಗಲು ಬಯಸಿದ್ದರು


ರಾಹುಲ್ ದ್ರಾವಿಡ್ ಅವರಿಗಿಂತಲೂ ಮೊದಲು ಭಾರತದ ಮಾಜಿ ಬ್ಯಾಟ್ಸ್‌ ಮನ್ ವಿವಿಎಸ್ ಲಕ್ಷ್ಮಣ್(VVS Laxman) ಅವರು ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಲು ಬಯಸಿದ್ದರಂತೆ. ಈ ವಿಷಯವನ್ನು ಸ್ವತಃ ಸೌರವ್ ಗಂಗೂಲಿ ಅವರೇ ಬಹಿರಂಗಪಡಿಸಿದ್ದಾರೆ. ಬೋರಿಯಾ ಮಜುಂದಾರ್ ಅವರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗಂಗೂಲಿ, ‘ವಿವಿಎಸ್ ಲಕ್ಷ್ಮಣ್ ರಾಷ್ಟ್ರೀಯ ತಂಡದೊಂದಿಗೆ ಕೆಲಸ ಮಾಡಲು ಬಯಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ. ಯಾವಾಗಲಾದರೂ ಅವರಿಗೆ ಭಾರತ ತಂಡದ ಕೋಚ್ ಆಗುವ ಅವಕಾಶ ಖಂಡಿತ ಸಿಗುತ್ತದೆ’ ಅಂತಾ ಹೇಳಿದ್ದಾರೆ. ಗಂಗೂಲಿ ಮಾತು ನಿಜವೇ ಆದರೆ ದ್ರಾವಿಡ್ ನಂತರ ಲಕ್ಷ್ಮಣ್ ಭಾರತ ತಂಡದ ಕೋಚ್ ಆಗಲಿದ್ದಾರೆ.


ಇದನ್ನೂ ಓದಿ: Virat Kohli : ಕೊಹ್ಲಿ ನಾಯಕತ್ವ ಟೆಸ್ಟ್ ತಂಡ ಈಗ ಅಪಾಯದಲ್ಲಿ! ಈ 3 ಆಟಗಾರರ ಕಾರ್ಡ್ ಕಟ್ 


ಲಕ್ಷ್ಮಣ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ


ಭಾರತ ತಂಡದ ಕೋಚ್ ಆಗಿ ನೇಮಕಗೊಳ್ಳುವ ಮೊದಲು ರಾಹುಲ್ ದ್ರಾವಿಡ್ ಎನ್‌ಸಿಎ ಮುಖ್ಯಸ್ಥ(NCA President)ರಾಗಿದ್ದರು. ಆದರೆ ಇತ್ತೀಚೆಗೆ ವಿವಿಎಸ್ ಲಕ್ಷ್ಮಣ್ ಅವರು ದ್ರಾವಿಡ್ ಅವರ ಈ ಸ್ಥಾನವನ್ನು ಅಲಂಕರಿಸಿದ್ದಾರೆ. ವಿವಿಎಸ್ ಲಕ್ಷ್ಮಣ್ ಅವರು ಎನ್‌ಸಿಎಯಲ್ಲಿ ಕೆಲಸ ಮಾಡುವ ಬದಲು ಮೊದಲು ರಾಷ್ಟ್ರೀಯ ತಂಡದೊಂದಿಗೆ ಕೆಲಸ ಮಾಡಲು ಬಯಸಿದ್ದರು ಎಂದು ಗಂಗೂಲಿ ಹೇಳಿದ್ದಾರೆ. ದ್ರಾವಿಡ್ ಮತ್ತೆ ಎನ್‌ಸಿಎ ಮುಖ್ಯಸ್ಥ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಗಂಗೂಲಿ ಅವರು ಭಾರತ ತಂಡದ ಕೋಚ್ ಆಗುವಂತೆ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಎನ್‌ಸಿಎ ಮುಖ್ಯಸ್ಥರಾಗಿ ಲಕ್ಷ್ಮಣ್ ಆಯ್ಕೆಯಾದರೆ, ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯನ್ನು ದ್ರಾವಿಡ್ ಅಲಂಕರಿಸಿದರು.


ದ್ರಾವಿಡ್ 2023ರವರೆಗೆ ಕೋಚ್ ಆಗಿದ್ದಾರೆ


ರಾಹುಲ್ ದ್ರಾವಿಡ್ ಅವರನ್ನು 2023ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದ ಕೋಚ್ ಆಗಿ ನೇಮಿಸಲಾಗಿದೆ. ದ್ರಾವಿಡ್ ಕೋಚ್ ಆದ ನಂತರ ಟೀಂ ಇಂಡಿಯಾ(Team India)ದಲ್ಲಿ ಹಲವು ದೊಡ್ಡ ಬದಲಾವಣೆಗಳಾಗಿವೆ. ದ್ರಾವಿಡ್ ಕೋಚ್ ಆದ ನಂತರ ರೋಹಿತ್ ಶರ್ಮಾ ಭಾರತದ ಸೀಮಿತ ಓವರ್‌ಗಳ ನಾಯಕರಾದರು. ದ್ರಾವಿಡ್ ಕೂಡ ತಮ್ಮ ಕೋಚಿಂಗ್ ವೃತ್ತಿಯನ್ನು ಉತ್ತಮ ರೀತಿಯಲ್ಲಿಯೇ ಆರಂಭಿಸಿದ್ದಾರೆ. ದ್ರಾವಿಡ್ ಕೋಚ್ ಆಗುತ್ತಿದ್ದಂತೆಯೇ ಟೀಂ ಇಂಡಿಯಾ ಟಿ-20 ಹಾಗೂ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು.


ಇದನ್ನೂ ಓದಿ: IPL Mega Auction 2022 ಮುನ್ನವೇ ನಿರ್ಧಾರ : ಈ ತಂಡದಲ್ಲಿ ಆಡಲಿದ್ದಾರೆ ಪಾಂಡ್ಯ ಬ್ರದರ್ಸ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.