INDvsSA T20 World Cup: ಟೀಂ ಇಂಡಿಯಾ ಎದುರು ಗೆದ್ದು ಬೀಗಿದ ಹರಿಣಗಳು: ಭಾರತಕ್ಕೆ ಸೋಲು
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಬೇಕಾಯಿತು. ಮೊದಲ 10 ಓವರ್ ಮುಗಿಯುವಷ್ಟರಲ್ಲಿ ಟೀಂ ಇಂಡಿಯಾ ತನ್ನ ಐದು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಸಂಪೂರ್ಣ ನೆರವಾಗಿದ್ದು ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್.
ಆಸ್ಟ್ರೇಲಿಯಾದ ಪರ್ತ್ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಶ್ವಕಪ್ ಟಿ20 ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿತ್ತು. ಈ ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆದ್ದುಕೊಂಡಿದೆ. ಈ ಮೂಲಕ ಭಾರತದ ಸೆಮೀಸ್ ಕನಸು ಸಂಕಷ್ಟದ ಹಾದಿ ಹಿಡಿದಿದೆ.
ಇದನ್ನೂ ಓದಿ: Yuzvendra Chahal: ಭಾರತ-ಆಫ್ರಿಕಾ ಪಂದ್ಯದ ವೇಳೆ ಅಂಪೈರ್ ಮೇಲೆ ‘ಹಲ್ಲೆ’ ನಡೆಸಿದ ಚಹಾಲ್! ವಿಡಿಯೋ ನೋಡಿ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಬೇಕಾಯಿತು. ಮೊದಲ 10 ಓವರ್ ಮುಗಿಯುವಷ್ಟರಲ್ಲಿ ಟೀಂ ಇಂಡಿಯಾ ತನ್ನ ಐದು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಸಂಪೂರ್ಣ ನೆರವಾಗಿದ್ದು ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್.
ಇವರ ಅದ್ಭುತ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ನೂರಂಕಿ ದಾಟುವಂತಾಯಿತು. ಇನ್ನೊಂದೆಡೆ ಈ ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯದಲ್ಲಿ 900ಕ್ಕೂ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯ ಪಾತ್ರರಾದರು.
ಇನ್ನು ಟೀಂ ಇಂಡಿಯಾ ಪರ ಕೆ ಎಲ್ ರಾಹುಲ್ 9 ರನ್, ರೋಹಿತ್ ಶರ್ಮಾ 15 ರನ್, ವಿರಾಟ್ ಕೊಹ್ಲಿ 12, ಸೂರ್ಯ ಕುಮಾರ್ ಯಾದವ್ 68 ರನ್, ದೀಪಕ್ ಹೂಡಾ 0, ಹಾರ್ದಿಕ್ ಪಾಂಡ್ಯ 2ರನ್, ದಿನೇಶ್ ಕಾರ್ತಿಕ್ 6ರನ್, ರವಿಚಂದ್ರನ್ ಅಶ್ವಿನ್ 7, ಭುವನೇಶ್ವರ್ ಔಟಾಗದೆ 4ರನ್, ಮೊಹಮ್ಮದ್ ಶಮಿ ಶೂನ್ಯ, ಅರ್ಷದೀಪ್ ಸಿಂಗ್ 2 ರನ್ ಬಾರಿಸಿದರು.
ಇನ್ನು ದಕ್ಷಿಣ ಆಫ್ರಿಕಾದ ಪರ ಲುಂಗಿ ಎನ್ಗಿಡಿ 4 ವಿಕೆಟ್ ಕಬಳಿಸಿದರೆ, ವೇನ್ ಪಾರ್ನೆಲ್ ಮೂರು ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ: Virat Kohli: T20 ವಿಶ್ವಕಪ್ ನಲ್ಲಿ ಕಿಂಗ್ ಕೊಹ್ಲಿ ಬೃಹತ್ ದಾಖಲೆ: ವಿಂಡೀಸ್ ದೈತ್ಯ ಕ್ರಿಸ್ ಗೇಲ್ ರೆಕಾರ್ಡ್ ಕೂಡ ಪುಡಿ ಪುಡಿ
ಇನ್ನೊಂದೆಡೆ ವಿರಾಟ್ ಕೊಹ್ಲಿಯೂ ಬೃಹತ್ ದಾಖಲೆ ನಿರ್ಮಿಸಿದ್ದು, ಟಿ20 ವಿಶ್ವಕಪ್ ನಲ್ಲಿ 1000 ರನ್ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ