Virat Kohli: T20 ವಿಶ್ವಕಪ್ ನಲ್ಲಿ ಕಿಂಗ್ ಕೊಹ್ಲಿ ಬೃಹತ್ ದಾಖಲೆ: ವಿಂಡೀಸ್ ದೈತ್ಯ ಕ್ರಿಸ್ ಗೇಲ್ ರೆಕಾರ್ಡ್ ಕೂಡ ಪುಡಿ ಪುಡಿ

22 ಇನ್ನಿಂಗ್ಸ್‌ಗಳ 24 ಪಂದ್ಯಗಳಲ್ಲಿ, ವಿರಾಟ್ 83.41 ಸರಾಸರಿಯಲ್ಲಿ 1,001 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಅವರ ಗರಿಷ್ಠ ಸ್ಕೋರ್ 89* ಆಗಿದೆ. ಈಗಾಗಲೇ ಹನ್ನೆರಡು ಅರ್ಧಶತಕಗಳು ಬಾರಿಸಿದ್ದಾರೆ. 31 ಪಂದ್ಯಗಳಲ್ಲಿ 39.07 ಸರಾಸರಿಯಲ್ಲಿ 1,016 ರನ್ ಗಳಿಸಿರುವ ಶ್ರೀಲಂಕಾದ ಶ್ರೇಷ್ಠ ಆಟಗಾರ ಮಹೇಲಾ ಜಯವರ್ಧನೆ ಪಂದ್ಯಾವಳಿಯ ಸಾರ್ವಕಾಲಿಕ ಗರಿಷ್ಠ ಸ್ಕೋರರ್ ಆಗಿದ್ದಾರೆ.

Written by - Bhavishya Shetty | Last Updated : Oct 30, 2022, 06:19 PM IST
    • ಐಸಿಸಿ ಟಿ 20 ವಿಶ್ವಕಪ್ ಈವೆಂಟ್‌ಗಳಲ್ಲಿ 1,000 ರನ್ ಪೂರೈಸಿದ ವಿರಾಟ್ ಕೊಹ್ಲಿ
    • ಈ ಸಾಧನೆ ಮಾಡಿದ ಎರಡನೇ ಆಟಗಾರರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ
    • ಪರ್ತ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಪಂದ್ಯದ ವೇಳೆ ಈ ದಾಖಲೆ ನಿರ್ಮಾಣ
Virat Kohli: T20 ವಿಶ್ವಕಪ್ ನಲ್ಲಿ ಕಿಂಗ್ ಕೊಹ್ಲಿ ಬೃಹತ್ ದಾಖಲೆ: ವಿಂಡೀಸ್ ದೈತ್ಯ ಕ್ರಿಸ್ ಗೇಲ್ ರೆಕಾರ್ಡ್ ಕೂಡ ಪುಡಿ ಪುಡಿ title=
Virat Kohli

Virat Kohli World Record: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾನುವಾರ ಐಸಿಸಿ ಟಿ 20 ವಿಶ್ವಕಪ್ ಈವೆಂಟ್‌ಗಳಲ್ಲಿ 1,000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಎರಡನೇ ಆಟಗಾರರು ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಪರ್ತ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಪಂದ್ಯದ ವೇಳೆ ಕೊಹ್ಲಿ ಈ ಹೆಗ್ಗುರುತನ್ನು ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ 11 ಎಸೆತಗಳಲ್ಲಿ ಎರಡು ಬೌಂಡರಿ ಒಳಗೊಂಡ 12 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ವೇಗಿ ಲುಂಗಿ ಎನ್‌ಗಿಡಿ ಬೌಲಿಂಗ್ ಗೆ ಕೊಹ್ಲಿ ಔಟ್ ಆದರು.

ಇದನ್ನೂ ಓದಿ: Virat Kohli Sand Art: ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್! ಏನದು ನೀವೇ ನೋಡಿ

22 ಇನ್ನಿಂಗ್ಸ್‌ಗಳ 24 ಪಂದ್ಯಗಳಲ್ಲಿ, ವಿರಾಟ್ 83.41 ಸರಾಸರಿಯಲ್ಲಿ 1,001 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಅವರ ಗರಿಷ್ಠ ಸ್ಕೋರ್ 89* ಆಗಿದೆ. ಈಗಾಗಲೇ ಹನ್ನೆರಡು ಅರ್ಧಶತಕಗಳು ಬಾರಿಸಿದ್ದಾರೆ. 31 ಪಂದ್ಯಗಳಲ್ಲಿ 39.07 ಸರಾಸರಿಯಲ್ಲಿ 1,016 ರನ್ ಗಳಿಸಿರುವ ಶ್ರೀಲಂಕಾದ ಶ್ರೇಷ್ಠ ಆಟಗಾರ ಮಹೇಲಾ ಜಯವರ್ಧನೆ ಪಂದ್ಯಾವಳಿಯ ಸಾರ್ವಕಾಲಿಕ ಗರಿಷ್ಠ ಸ್ಕೋರರ್ ಆಗಿದ್ದಾರೆ. ಅವರ ಬ್ಯಾಟ್‌ನಿಂದ ಒಂದು ಶತಕ ಮತ್ತು ಆರು ಅರ್ಧಶತಕಗಳು ಬಂದಿದ್ದು, ಅತ್ಯುತ್ತಮ ವೈಯಕ್ತಿಕ ಸ್ಕೋರ್ 100 ಆಗಿದೆ.

 

ಟೂರ್ನಿಯಲ್ಲಿ ಪ್ರಮುಖ ರನ್ ಗಳಿಸಿದವರ ಪಟ್ಟಿಯಲ್ಲಿರುವ ಇತರರು: ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ (965), ಭಾರತದ ನಾಯಕ ರೋಹಿತ್ ಶರ್ಮಾ (919) ಮತ್ತು ಶ್ರೀಲಂಕಾದ ಶ್ರೇಷ್ಠ ಆಟಗಾರ ತಿಲಕರತ್ನೆ ದಿಲ್ಶನ್ (897).

ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಮತ್ತೊಂದು ದಾಖಲೆ: ಪಾಕ್ ನಾಯಕನನ್ನು ಹಿಂದಿಕ್ಕಿದ ಟೀಂ ಇಂಡಿಯಾದ ‘ಮಿಸ್ಟರ್ 360’

ಸದ್ಯ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಆಟವಾಡುತ್ತಿದ್ದು, ಆರಂಭಿಕ ಆಆಘಾತ ಕಂಡಿದೆ. ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿದ್ದು ಟೀಂ ಇಂಡಿಯಾ ಸಂಕಷ್ಟ ಅನುಭವಿಸುವಂತಾಗಿದೆ. ಆ ಬಳಿಕ ಸೂರ್ಯ ಕುಮಾರ್ ಯಾದವ್ ಮತ್ತು ದಿನೇಶ್ ಕಾರ್ತಿಕ್ ಜೊತೆಯಾಟ ಟೀಂ ಇಂಡಿಯಾಗೆ ಕೊಂಚ ನೆಮ್ಮದಿ ನೀಡಿದೆ ಎನ್ನಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News