Yuzvendra Chahal: ಭಾರತ-ಆಫ್ರಿಕಾ ಪಂದ್ಯದ ವೇಳೆ ಅಂಪೈರ್ ಮೇಲೆ ‘ಹಲ್ಲೆ’ ನಡೆಸಿದ ಚಹಾಲ್! ವಿಡಿಯೋ ನೋಡಿ

ಇಂಡೋ ಆಫ್ರಿಕಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ರೋಹಿತ್ ಮತ್ತು ರಾಹುಲ್ ನೆರವಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇನ್ನು ಆರಂಭದಲ್ಲಿಯೇ ಕೆ ಎಲ್ ರಾಹುಲ್ ಗೆ ಬಾಲ್ ತಗುಲಿ ಗಾಯವಾಗಿತ್ತು.

Written by - Bhavishya Shetty | Last Updated : Oct 30, 2022, 07:15 PM IST
    • ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭಿಕ ಆಘಾತ
    • ಇಷ್ಟೆಲ್ಲಾ ಸಂಕಷ್ಟದ ನಡುವೆ ಯುಜುವೇಂದ್ರ ಚಹಾಲ್ ಕಾಮಿಡಿ
    • ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯ್ತು ವಿಡಿಯೋ
Yuzvendra Chahal: ಭಾರತ-ಆಫ್ರಿಕಾ ಪಂದ್ಯದ ವೇಳೆ ಅಂಪೈರ್ ಮೇಲೆ ‘ಹಲ್ಲೆ’ ನಡೆಸಿದ ಚಹಾಲ್! ವಿಡಿಯೋ ನೋಡಿ title=
Yuzvendra Chahal

ಆಸ್ಟ್ರೇಲಿಯಾದ ಪರ್ತ್ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ವಿಶ್ವಕಪ್ ಟಿ20 ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿತ್ತು. ಈ ಆಟದಲ್ಲಿ ಉಭಯ ತಂಡಗಳು ರೋಚಕ ಪಂದ್ಯವನ್ನಾಡಿದೆ. ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಇಷ್ಟೆಲ್ಲಾ ಸಂಕಷ್ಟದ ನಡುವೆ ಯುಜುವೇಂದ್ರ ಚಹಾಲ್ ಮಾಡಿರುವ ಕೆಲಸ ಎಲ್ಲರನ್ನೂ ಶಾಕ್ ಗೆ ಗುರಿ ಮಾಡಿದೆ.

ಇದನ್ನೂ ಓದಿ: Virat Kohli: T20 ವಿಶ್ವಕಪ್ ನಲ್ಲಿ ಕಿಂಗ್ ಕೊಹ್ಲಿ ಬೃಹತ್ ದಾಖಲೆ: ವಿಂಡೀಸ್ ದೈತ್ಯ ಕ್ರಿಸ್ ಗೇಲ್ ರೆಕಾರ್ಡ್ ಕೂಡ ಪುಡಿ ಪುಡಿ

ಇಂಡೋ ಆಫ್ರಿಕಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ರೋಹಿತ್ ಮತ್ತು ರಾಹುಲ್ ನೆರವಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇನ್ನು ಆರಂಭದಲ್ಲಿಯೇ ಕೆ ಎಲ್ ರಾಹುಲ್ ಗೆ ಬಾಲ್ ತಗುಲಿ ಗಾಯವಾಗಿತ್ತು. ಈ ಸಂದರ್ಭದಲ್ಲಿ ಚಿಕಿತ್ಸೆ ನೀಡಲೆಂದು ಮೈದಾನ ವೈದ್ಯರ ಜೊತೆ ಆಗಮಿಸಿದ್ದ ಎಕ್ಸ್ಟ್ರಾ ಪ್ಲೇಯರ್ ಆಗಿದ್ದ ರಿಷಬ್ ಪಂತ್ ಹಾಗೂ ಯುಜ್ವೇಂದ್ರ ಚಾಹಲ್ ಆಟಗಾರರ ಜೊತೆ ಮಾತುಕತೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಚಾಹಲ್ ಅಂಪೈರ್ ಬಳಿ ಹೋಗಿ ಅವರ ಮೇಲೆ ಕೈ ಮಾಡುತ್ತಾರೆ.

 

 

ಇದನ್ನೂ ಓದಿ: Virat Kohli Sand Art: ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್! ಏನದು ನೀವೇ ನೋಡಿ

ಹೌದು ಇದರ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಆದರೆ ಇದು ತಮಾಷೆಗೆ ನಡೆದಿರುವ ವಿಡಿಯೋ. ಫೀಲ್ಡ್ ಅಂಪೈರ್ ಗೆ ಗುದ್ದಿದಂತೆ ಮಾಡುತ್ತಿರುವ ಚಾಹಲ್ ಅಲ್ಲಿಯೂ ಸಹ ತನ್ನ ಚೇಷ್ಟೆಯನ್ನು ತೋರಿಸುತ್ತಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ಲೈಕ್ ನೀಡಿದ್ದು, ಅನೇಕ ಮಂದಿ ವೀಕ್ಷಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News