ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂಬರುವ 2020 ರ ಆವೃತ್ತಿಯ ಪ್ರಸಾರ ಸಮಿತಿಯಲ್ಲಿ ದೇಶದ ಅತ್ಯುತ್ತಮ ಕ್ರೀಡಾ ನಿರೂಪಕರಲ್ಲಿ ಒಬ್ಬರಾದ ಮಾಯಂತಿ ಲ್ಯಾಂಗರ್ ಭಾಗವಹಿಸುವುದಿಲ್ಲ.


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ನಡೆಯಲಿರುವ ಐಪಿಎಲ್ ನ 13 ನೇ ಋತುವನ್ನು ಮಾಯಂತಿ ತಪ್ಪಿಸಿಕೊಳ್ಳಲಿದ್ದಾರೆ ಎಂದು ಐಪಿಎಲ್ ಅಧಿಕೃತ ಬ್ರಾಡ್ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ತಿಳಿಸಿದೆ;


ಈ ವರ್ಷದ ಲೀಗ್‌ನಲ್ಲಿ ಮಾಯಂತಿ ಲ್ಯಾಂಗರ್ ಭಾಗವಹಿಸುತ್ತಾರೆಯೇ  ಎಂದು ಟ್ವಿಟರ್ ಬಳಕೆದಾರರೊಬ್ಬರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾರ್ ಸ್ಪೋರ್ಟ್ಸ್ 'ನಮಸ್ತೆ! ಮಾಯಂತಿ ಲ್ಯಾಂಗರ್  ಡ್ರೀಮ್ 11 ಐಪಿಎಲ್ 2020 ರ ಭಾಗವಾಗಿರುವುದಿಲ್ಲ' ಎಂದು ಸ್ಪಷ್ಟಪಡಿಸಿದೆ.


IPL 2020: ಜಸ್ಪ್ರಿತ್ ಬುಮ್ರಾ ಟಿ 20 ಯ ಅತ್ಯುತ್ತಮ ಬೌಲರ್ ಎಂದ ಆಸ್ಟ್ರೇಲಿಯಾ ಕ್ರಿಕೆಟಿಗ


ವಾಸ್ತವವಾಗಿ, ಮುಂಬರುವ ಲಾಭದಾಯಕ ಟಿ 20 ಪಂದ್ಯಾವಳಿಗಾಗಿ ಐಪಿಎಲ್ ಬ್ರಾಡ್ಕಾಸ್ಟರ್ ಮಹಿಳಾ ನಿರೂಪಕರು ಸೇರಿದಂತೆ ನಿರೂಪಕರ ಪೂರ್ಣ ಪ್ರಮಾಣದ ಸಮಿತಿಯನ್ನು ಘೋಷಿಸಿದೆ. ಸುರೇನ್ ಸುಂದರಂ, ಕಿರಾ ನಾರಾಯಣನ್, ಸುಹೇಲ್ ಚಂದೋಕ್, ನ್ಯಾಶ್‌ಪ್ರೀತ್ ಕೌರ್, ಸಂಜನಾ ಗಣೇಶನ್, ಜತಿನ್ ಸಪ್ರು, ತಾನ್ಯಾ ಪುರೋಹಿತ್, ಅನಂತ್ ತ್ಯಾಗಿ, ಧೀರಜ್ ಜುನೇಜಾ, ಭಾವನಾ ಬಾಲಕೃಷ್ಣನ್ (ತಮಿಳು), ರೀನಾ ಡಿಸೋಜಾ, ಮಧು ಮೈಲಂಕ್ ಕೋಡಿ , ಲಿಸಾ ಸ್ಥಾಲೇಕರ್ ಮತ್ತು ನೆರೋಲಿ ಮೆಡೋಸ್ ಪಂದ್ಯಾವಳಿಯನ್ನು ಪ್ರಸ್ತುತಪಡಿಸಲಿದ್ದಾರೆ.


ಸುನಿಲ್ ಗವಾಸ್ಕರ್ ಮತ್ತೊಮ್ಮೆ ತಮ್ಮ ಮಗ ರೋಹನ್ ಗವಾಸ್ಕರ್ ಅವರೊಂದಿಗೆ ಮೈಕ್ ಹಂಚಿಕೊಳ್ಳಲಿದ್ದು, ಮಾಜಿ ಮುಖ್ಯ ಆಯ್ಕೆಗಾರರಾದ ಕ್ರಿಸ್ ಶ್ರೀಕಾಂತ್ ಮತ್ತು ಎಂಎಸ್ಕೆ ಪ್ರಸಾದ್ ಕ್ರಮವಾಗಿ ತಮಿಳು ಮತ್ತು ತೆಲುಗಿನಲ್ಲಿ ಈ ಆಟದ ಬಗ್ಗೆ ಪ್ರತಿಕ್ರಿಯಿಸಲಿದ್ದಾರೆ.


ಮಾಯಂತಿ ಈಗ ಅನೇಕ ವರ್ಷಗಳಿಂದ ಭಾರತೀಯ ಕ್ರೀಡಾ ಪ್ರಸಾರದಲ್ಲಿ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್ ವಿಶ್ವಕಪ್, ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ವಿವಿಧ ಋತುಗಳಲ್ಲಿ ಪ್ರಸ್ತುತಪಡಿಸಿದ್ದಾರೆ.


2020 ರ ಐಪಿಎಲ್ ಮೂಲತಃ ಮಾರ್ಚ್ 29 ರಿಂದ ಮೇ 24 ರವರೆಗೆ ನಡೆಯಬೇಕಿತ್ತು, ಆದರೆ ಭಾರತದಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಎಇಗೆ ಸ್ಥಳಾಂತರಗೊಳ್ಳುವ ಮೊದಲು ಅದನ್ನು ಮುಂದೂಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೊದಲು ನಿರ್ಧರಿಸಿತು.