ಬಾಲಿವುಡ್ ಖ್ಯಾತ ರ‍್ಯಾಪರ್ ಗೆ ರಿಷಭ್ ಪಂತ್ ಹೋಲಿಸಿದ ಹಿಟ್ ಮ್ಯಾನ್..!
‘ನಮ್ಮ ಅತ್ಯಂತ ಸ್ವಂತ ಚಾಚಾ ನೆಹರೂ’ ಎಂದ ಕ್ರಿಕೆಟರ್ ಕೇದಾರ್ ಜಾಧವ್.
ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ರಿಷಬ್ ಪಂತ್(Rishabh Pant) ಅವರನ್ನು ಬಾಲಿವುಡ್ ನ ಖ್ಯಾತ ರ‍್ಯಾಪರ್ ಬಾದ್‌ಶಾ ಜೊತೆ ಹೋಲಿಕೆ ಮಾಡಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಫೋಟೋ ಹಂಚಿಕೊಂಡಿದ್ದಾರೆ.
ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಮೈದಾನದ ಒಳಗೂ ಮತ್ತು ಹೊರಗೆ ಅಭಿಮಾನಿಗಳ ನೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಕಳೆದ 2 ತಿಂಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಆಕರ್ಷಕ ಫಾರ್ಮ್‌ನಲ್ಲಿದ್ದು, ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ.
23 ವರ್ಷದ ಯುವ ಬ್ಯಾಟ್ಸ್ ಮನ್ ಪಂತ್ ಅವರನ್ನು ಬಾಲಿವುಡ್ ನ ಜನಪ್ರಿಯ ರ‍್ಯಾಪರ್ ಬಾದ್‌ಶಾ(Badshah)ಗೆ ಹೋಲಿಸಲಾಗಿದೆ. ಪಂತ್ ಬಿಳಿ ಟೀ ಶರ್ಟ್, ಬೆಳ್ಳಿಯ ಚೈನ್ ಮತ್ತು ಹಳದಿ ಸನ್ ಗ್ಲಾಸ್ ಹಾಕಿಕೊಂಡು (ಬಾದ್‌ಶಾ)ನಂತೆಯೇ ಇರುವ ಉಡುಪನ್ನು ಧರಿಸಿದ್ದರು. ಈ ಫೋಟೋವನ್ನು ಟೀಮ್ ಇಂಡಿಯಾ ಓಪನರ್ ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಾವು ಇಲ್ಲಿ ನಮ್ಮದೇ ಬಾದ್‌ಶಾನನ್ನು ಹೊಂದಿದ್ದೇವೆ’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
Tokyo Olympics 2020: ಚಿನ್ನದ ಪದಕ ಗೆಲ್ಲುವ ಹಾಕಿ ಆಟಗಾರರಿಗೆ 2.25 ಕೋಟಿ ರೂ. ಬಹುಮಾನ
ಈ ತಿಂಗಳ ಆರಂಭದಲ್ಲಿ ಪಂತ್ ಅವರಿಗೆ ಕೋವಿಡ್ -19(COVID-19) ಸೋಂಕು ದೃಢಪಟ್ಟಿತ್ತು. ನಂತರ ಅವರು ಪ್ರತ್ಯೇಕವಾಗಿ ಹೋಮ್ ಐಸೋಲೇಷನ್ ಆಗಿದ್ದರು. ಸದ್ಯ ಪಂತ್ ಕೊರೊನಾ ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ. ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್ ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ