MS Dhoni : ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ಎಂಎಸ್ ಧೋನಿ : ಈ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ!

ಈ  ಸ್ಟೈಲ್ ಅನ್ನ ಖ್ಯಾತ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಹೊಸ ಹೇರ್ ಸ್ಟೈಲ್ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Written by - Channabasava A Kashinakunti | Last Updated : Jul 30, 2021, 03:55 PM IST
  • ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೊಸ ಹೇರ್ ಸ್ಟೈಲ್
  • ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಧೋನಿ ಹೊಸ ಹೇರ್ ಸ್ಟೈಲ್ ಫೋಟೋ ಹಂಚಿಕೊಂಡಿದ್ದಾರೆ
  • ಲೆಜೆಂಡ್ ಧೋನಿ ಸ್ಪೋರ್ಟ್ಸ್ ಎ ಡ್ಯಾಶಿಂಗ್ ಲುಕ್ ನಮ್ಮ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ
MS Dhoni : ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ಎಂಎಸ್ ಧೋನಿ : ಈ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ! title=

ನವದೆಹಲಿ : ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೊಸ ಹೇರ್ ಸ್ಟೈಲ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಹೆಬ್ಬಿಸಿದ್ದಾರೆ. ಈ ಹೊಸ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಕೆಲವರು ಇದನ್ನು ಮುದ್ದಾಗಿದೆ ಮತ್ತೆ ಈ  ಸ್ಟೈಲ್ ಅನ್ನ ಖ್ಯಾತ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಹೊಸ ಹೇರ್ ಸ್ಟೈಲ್ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಹೆಬ್ಬಿಸಿದ ಫೋಟೋಗಳು : 

ಕಳೆದ ವರ್ಷ ಆಗಸ್ಟ್‌ನಲ್ಲಿ ಧೋನಿ(MS Dhoni) ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. 2004 ರಲ್ಲಿ ಏಕದಿನಕ್ಕೆ ಪಾದಾರ್ಪಣೆ ಮಾಡಿದ ರಾಂಚಿ ಬಾಯ್, ತನ್ನ ಶಾಂತ ವರ್ತನೆ, ಆಟದ ಬಗ್ಗೆ ತೀಕ್ಷ್ಣವಾದ ತಿಳುವಳಿಕೆ ಮತ್ತು ಚುರುಕಾದ ನಾಯಕತ್ವದ ಗುಣಗಳಿಂದ ಭಾರತೀಯ ಕ್ರಿಕೆಟ್‌ನ ಲುಕ್ ಆನ್ ಬದಲಿಸಿದ್ದಾರೆ.

ಇದನ್ನೂ ಓದಿ : Tokyo Olympics: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಬಾಕ್ಸರ್ ಲೊವ್ಲಿನಾ

ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಧೋನಿ ಯುಎಇ ಐಪಿಎಲ್ 2021 ಸೆಪ್ಟೆಂಬರ್‌ನಲ್ಲಿ ಪುನರಾರಂಭವಾಗಲಿದೆ. ಮುಂಬೈ ಇಂಡಿಯನ್ಸ್ ಮೊದಲ ಪಂದ್ಯ ಸೆಪ್ಟೆಂಬರ್ 19 ರಂದು ಸಿಎಸ್‌ಕೆ ಜೊತೆ ನಡೆಯಲಿದೆ.

"ಲೆಜೆಂಡ್ ಧೋನಿ ಸ್ಪೋರ್ಟ್ಸ್ ಎ ಡ್ಯಾಶಿಂಗ್ ಲುಕ್ ನಮ್ಮ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿಗಾಗಿ ಈ ಹೇರ್ ಮತ್ತು ಗಡ್ಡದ ಸ್ಟೈಲ್ ಮಾಡುವುದನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ ಎಂದು ಧೋನಿ ಅವರ ಫೋಟೋಗಳನ್ನು ಹಂಚಿಕೊಂಡು ಆಲಿಮ್(Aalim Hakim) ಬರೆದಿದ್ದಾರೆ.

ಅವರು ಹೊಸ ಕೇಸ್ಟೈಲ್ ಫೋಟೋಗಳಲ್ಲಿ ನೋಡಬಹುದು. ಮಂಗಳವಾರ ಮುಂಜಾನೆ, ಮಾಜಿ ಕ್ಯಾಪ್ಟನ್ ಜಾಹೀರಾತು ಚಿತ್ರೀಕರಣದ ನಂತರ ರೆಟ್ರೊ ಜರ್ಸಿಯಲ್ಲಿರುವ ಅವರ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಪ್ರಸಿದ್ಧಿ ಪಡೆದರು. ಚಲನಚಿತ್ರ ನಿರ್ಮಾಪಕಿ ಫರಾಹ್ ಖಾನ್(Farah Khan) ಧೋನಿ ಅವರ ಜಾಹೀರಾತು ಅನ್ನು ನಿರ್ದೇಶಿಸಿದ್ದಾರೆ ಮತ್ತು ಕೆಲವು ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೆಲವೆ ಕ್ಷಣಗಳಲ್ಲಿ ಭಾರಿ ವೈರಲ್ ಆಗಿವೆ.

ಇದನ್ನೂ ಓದಿ : Tokyo Olympics: ಭಾರತಕ್ಕೆ ಮತ್ತೊಂದು ದೊಡ್ಡ ಯಶಸ್ಸು, ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದ ದೀಪಿಕಾ ಕುಮಾರಿ

ಇನ್‌ಸ್ಟಾಗ್ರಾಮ್‌ನಲ್ಲಿ ಫರಾ ಖಾನ್ ಅವರು ತಮ್ಮ ಚಿತ್ರೀಕರಣದ ಸೆಟ್ನಿಂದ ಧೋನಿಯೊಂದಿಗಿನ ಚಿತ್ರವನ್ನು ಪೋಸ್ಟ್(Post) ಮಾಡಿದ್ದಾರೆ, ಅದರಲ್ಲಿ ಅವರು ಜರ್ಸಿಯನ್ನು ಧರಿಸಿರುವುದನ್ನು ಕಾಣಬಹುದು. ಅದರ ಜೊತೆಯಲ್ಲಿ, ಧೋನಿ ತನ್ನಿಂದ ಸ್ಪಾಟ್ ಬಾಯ್‌ಗಳವರೆಗೆ ಚಿತ್ರೀಕರಣದಲ್ಲಿ ಹಾಜರಿದ್ದ ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಅವರು ಬಹಿರಂಗಪಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News