14 ನೇ ಆವೃತ್ತಿಯ  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಶುಕ್ರವಾರ (ಏಪ್ರಿಲ್ 9)ದಿಂದ  ಪ್ರಾರಂಭವಾಗಿದೆ. ವಿಶ್ವದ ಎಲ್ಲ ಸ್ಟಾರ್ ಕ್ರಿಕೆಟಿಗರು ಈ ಟಿ 20 ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಐಪಿಎಲ್ ಫ್ರಾಂಚೈಸಿಗಳು ತಮ್ಮ ಪರವಾಗಿ ಆಡಲು ಕ್ರಿಕೆಟಿಗರಿಗೆ ದೊಡ್ಡ ಮೊತ್ತದ ಹಣವನ್ನ ನೀಡಿ ಕೊಂಡಿದುಕೊಳ್ಳುತ್ತವೆ. ಈ ಪ್ರತಿಷ್ಠಿತ ಐಪಿಎಲ್ ಪಂದ್ಯಾವಳಿಯನ್ನು ಗೆಲ್ಲಲು ಫ್ರ್ಯಾಂಚೈಸ್ ಗಳು ಆಟಗಾರರಿಗೆ ಸಹಾಯ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಆದರೆ, ಆರ್ ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಮತ್ತು ಇತರ ಸ್ಟಾರ್ ಆಟಗಾರರಿಗೆ ತಮ್ಮ ಮೊದಲ ಐಪಿಎಲ್‌ ಪಂದ್ಯದಲ್ಲಿ  ಎಷ್ಟು ಸಂಬಳ ನೀಡಲಾಗಿದೆ ಎಂಬುವುದು ನಿಮಗೆ ಗೊತ್ತಾ? ಇಲ್ಲಿ ಕೆಲವು ಆಟಗಾರರ ಮೊದಲ ಐಪಿಎಲ್ ಪಂದ್ಯದಲ್ಲಿ ಪಡೆದ ಸಂಬಳ ಬಗ್ಗೆ ತಿಳಿಯೋಣ ಬನ್ನಿ..


ಇದನ್ನೂ ಓದಿ : IPL 2021: ಮೊದಲ ಪಂದ್ಯದಲ್ಲೇ ಸೋಲುಂಡ ಬಳಿಕ ಧೋನಿಗೆ ಎದುರಾಯಿತು ಮತ್ತೊಂದು ಕಂಟಕ


1. ವಿರಾಟ್ ಕೊಹ್ಲಿ: 
ಟೈಮ್ಸ್ ನೌ ಪ್ರಕಾರ, ಆರ್‌ಸಿಬಿ(Royal Challengers Bangalore) ನಾಯಕ ವಿರಾಟ್ ಕೊಹ್ಲಿ 2008 ರಲ್ಲಿ ಶುರುವಾದ  ಐಪಿಎಲ್‌ನ ಉದ್ಘಾಟನಾ ಪಂದ್ಯಕ್ಕೆ 12 ಲಕ್ಷ ರೂ.ಗೆ ಆಡಿಡಿದ್ದಾರೆ. ಈ ಸೀಸನ್ ಅತ್ಯಂತ ದುಬಾರಿ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ.


ಇದನ್ನೂ ಓದಿ : ಯಂಗ್ ಟರ್ಕ್ಸ್ ದೆಹಲಿ ಕ್ಯಾಪಿಟಲ್ಸ್ ಆರ್ಭಟಕ್ಕೆ ಮಂಕಾದ ಚೆನ್ನೈ ಸೂಪರ್ ಕಿಂಗ್ಸ್


2. ಎಂ.ಎಸ್.ಧೋನಿ : 
ಟೈಮ್ಸ್ ನೌ ಪ್ರಕಾರ, ಎಂಎಸ್ ಧೋನಿ(MS Dhoni) 2008 ರ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದೆ ಕ್ರಿಕೆಟಿಗರಾಗಿದ್ದಾರೆ. ಈ ಸೀಸನ್ ನಲ್ಲಿ ಸಿಎಸ್ ಕೆ ನಾಯಕ ಧೋನಿ  6 ಕೋಟಿ ರೂ. ಪಡೆದಿದ್ದರೆ. ಅಲ್ಲದೆ 14 ನೇ ಆವೃತ್ತಿ ಅಂದ್ರೆ ಸಧ್ಯ ನಡೆಯುತ್ತಿರುವ ಐಪಿಎಲ್ ಗೆ ಧೋನಿ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.


ಇದನ್ನೂ ಓದಿ : IPL 2021: ಧೋನಿ ಸಿಎಸ್ಕೆ ಟೀಮ್ ಗೆ ದೆಹಲಿ ಕ್ಯಾಪಿಟಲ್ಸ್ ನ ಯಂಗ್ ಟರ್ಕ್ ಸವಾಲು


3. ರೋಹಿತ್ ಶರ್ಮಾ:
 ರೋಹಿತ್ ಶರ್ಮಾ 2011 ರಲ್ಲಿ ಮುಂಬೈ ಇಂಡಿಯನ್ಸ್(Mumbai Indians) ಟೀಂಗೆ ಸೇರಿದರು. ಅದಕ್ಕೂ ಮೊದಲು ರೋಹಿತ್ 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ ಫ್ರ್ಯಾಂಚೈಸ್ ಪರ ಆಡುತ್ತಿದ್ದರು. ಟೈಮ್ಸ್ ನೌ ಪ್ರಕಾರ, ರೋಹಿತ್ 2008 ರ ಮೊದಲ ಪಂದ್ಯಕ್ಕೆ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.


ಇದನ್ನೂ ಓದಿ : IPL 2021: ಕೊನೆಯ ಬಾಲ್‌ವರೆಗೂ ಕುತೂಹಲ, ರೋಮಾಂಚಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವು


4. ಎಬಿ ಡಿವಿಲಿಯರ್ಸ್: 
ಐಪಿಎಲ್‌ನಿಂದ 100 ಕೋಟಿ ರೂ. ಗಳಿಸಿದ ಐದು ಆಟಗಾರರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್(AB de Villiers) ಒಬ್ಬರು. 2008 ರಲ್ಲಿ ದೆಹಲಿ ಡೇರ್‌ಡೆವಿಲ್ಸ್ ಆಡುತ್ತಿದ್ದರು ಸಧ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ನಲ್ಲಿ ಆಡುತ್ತಿದ್ದಾರೆ.  ಐಪಿಎಲ್ ಮೊದಲ ಆವೃತ್ತಿಯಲ್ಲಿ  ಎಬಿಡಿ ಒಟ್ಟು 1.2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.


ಇದನ್ನೂ ಓದಿ : IPL 2021: ಇಂದಿನಿಂದ ಐಪಿಎಲ್ ಉತ್ಸವ, ಇಲ್ಲಿಯವರೆಗಿನ ಅತಿದೊಡ್ಡ ದಾಖಲೆಗಳಿವು


5. ಹಾರ್ದಿಕ್ ಪಾಂಡ್ಯ: 
ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ(Hardik Pandya) ಅವರು 2015 ರಲ್ಲಿ ಐಪಿಎಲ್ ಎಂಬ ಲೋಕಕ್ಕೆ ಕಾಲಿಟ್ಟರು. ಆಗವರು ತಮ್ಮ ಮೂಲ ಬೆಲೆಯಲ್ಲಿ 10 ಲಕ್ಷ ರೂ.ಗಳಲ್ಲಿ ಫ್ರ್ಯಾಂಚೈಸ್ ತಂಡವನ್ನು ಸೇರಿಕೊಂಡರು. ಟೈಮ್ಸ್ ನೌ ವರದಿ ಪ್ರಕಾರ ಸಧ್ಯ ಪಾಂಡ್ಯ 11 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.