IPL 2021: ಧೋನಿ ಸಿಎಸ್ಕೆ ಟೀಮ್ ಗೆ ದೆಹಲಿ ಕ್ಯಾಪಿಟಲ್ಸ್ ನ ಯಂಗ್ ಟರ್ಕ್ ಸವಾಲು

ಶನಿವಾರದಂದು ನಡೆಯಲಿರುವ ಐಪಿಎಲ್ ಪಂದ್ಯವೊಂದರಲ್ಲಿ ರಿಷಭ್ ಪಂತ್ ಅವರ ದೆಹಲಿ ಕ್ಯಾಪಿಟಲ್ಸ್ ತಂಡವು ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿದೆ.

Last Updated : Apr 10, 2021, 06:31 PM IST
  • ವಿಶೇಷವೆಂದರೆ ಯಂಗ್ ಟರ್ಕ್ ಗಳನ್ನು ಹೊಂದಿರುವ ದೆಹಲಿ ಕ್ಯಾಪಿಟಲ್ಸ್ ತಂಡವು ಗೆಲ್ಲುವ ಉತ್ಸಾಹದಲ್ಲಿದೆ. ಕಳೆದ ಬಾರಿ ರನ್ನರ್ ಅಪ್ ಗೆ ತೃಪ್ತಿಪಟ್ಟಿಕೊಂಡಿದ್ದ ದೆಹಲಿ ತಂಡವು ಈ ಬಾರಿಯೂ ಕೂಡ IPL 2021 ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
IPL 2021: ಧೋನಿ ಸಿಎಸ್ಕೆ ಟೀಮ್ ಗೆ ದೆಹಲಿ ಕ್ಯಾಪಿಟಲ್ಸ್ ನ ಯಂಗ್ ಟರ್ಕ್ ಸವಾಲು title=
ಸಾಂದರ್ಭಿಕ ಚಿತ್ರ

ನವದೆಹಲಿ: ಶನಿವಾರದಂದು ನಡೆಯಲಿರುವ ಐಪಿಎಲ್ ಪಂದ್ಯವೊಂದರಲ್ಲಿ ರಿಷಭ್ ಪಂತ್ ಅವರ ದೆಹಲಿ ಕ್ಯಾಪಿಟಲ್ಸ್ ತಂಡವು ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ: IPL 2022: ಎರಡು ಹೊಸ ತಂಡಗಳಿಗೆ ಬಿಸಿಸಿಐ ಅನುಮೋದನೆ

ವಿಶೇಷವೆಂದರೆ ಯಂಗ್ ಟರ್ಕ್ ಗಳನ್ನು ಹೊಂದಿರುವ ದೆಹಲಿ ಕ್ಯಾಪಿಟಲ್ಸ್ ತಂಡವು ಗೆಲ್ಲುವ ಉತ್ಸಾಹದಲ್ಲಿದೆ. ಕಳೆದ ಬಾರಿ ರನ್ನರ್ ಅಪ್ ಗೆ ತೃಪ್ತಿಪಟ್ಟಿಕೊಂಡಿದ್ದ ದೆಹಲಿ ತಂಡವು ಈ ಬಾರಿಯೂ ಕೂಡ IPL 2021 ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.ಇನ್ನೊಂದೆಡೆಗೆ ಮಾಜಿ ಚಾಂಪಿಯನ್ ಚೆನ್ನೈ ತಂಡವು ಕಳೆದ ಭಾರಿ ಕಳಪೆ ಪ್ರದರ್ಶನ ನೀಡುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು.ಈ ಬಾರಿ ಆರಂಭದಲ್ಲಿಯೇ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಹೊಂದಿದೆ.

ಇದನ್ನೂ ಓದಿ: ಐಪಿಎಲ್ 2021ರ ಆವೃತ್ತಿಯಿಂದ ಡೇಲ್ ಸ್ಟೇನ್ ಹೊರಕ್ಕೆ

ಈಗ ಗಾಯಗೊಂಡಿರುವ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿರುವ ರಿಷಬ್ ಪಂತ್ ಚೆನ್ನೈ ತಂಡವನ್ನು ಎದುರಿಸಲಿದ್ದಾರೆ."ನಾಯಕನಾಗಿ ನನ್ನ ಮೊದಲ ಪಂದ್ಯ ಮಹೀ ಭಾಯ್ (ಎಂ.ಎಸ್. ಧೋನಿ) ವಿರುದ್ಧ ನಡೆಯಲಿದೆ. ನಾನು ಅವರಿಂದ ಸಾಕಷ್ಟು ಕಲಿತಿದ್ದರಿಂದ ಇದು ನನಗೆ ಉತ್ತಮ ಅನುಭವವಾಗಿರುತ್ತದೆ.ನನ್ನ ಸ್ವಂತ ಅನುಭವವನ್ನು ಮತ್ತು ಅವರಿಂದ ಕಲಿಯುವುದನ್ನು ನಾನು ಅನ್ವಯಿಸುತ್ತೇನೆ" ಎಂದು ಪಂತ್ ಇತ್ತೀಚೆಗೆ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News