ಎಂ.ಎಸ್ ಧೋನಿ ಪೋಷಕರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ಕೋಚ್ ಸ್ಟೀಪನ್ ಫ್ಲೇಮಿಂಗ್
ಎಂ.ಎಸ್ ಧೋನಿಯ ತಂದೆ ಪ್ಯಾನ್ ಸಿಂಗ್ ಮತ್ತು ತಾಯಿ ದೇವಕಿ ದೇವಿ ಇಬ್ಬರೂ COVID-19 ಕೊರೊನಾ ದಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಅವರನ್ನು ರಾಂಚಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ನವದೆಹಲಿ: ಎಂ.ಎಸ್ ಧೋನಿಯ ತಂದೆ ಪ್ಯಾನ್ ಸಿಂಗ್ ಮತ್ತು ತಾಯಿ ದೇವಕಿ ದೇವಿ ಇಬ್ಬರೂ COVID-19 ಕೊರೊನಾ ದಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಅವರನ್ನು ರಾಂಚಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿನ್ನಲೆಯಲಿ ಈಗ ಸಿಎಸ್ಕೆ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ.ಪ್ರಸ್ತುತ ರಾಂಚಿಯ ಪಲ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ಓದಿ: IPL 2021: ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಾಯಿದ್ದಾರೆ 'ಸನ್ ರೈಸರ್ ಹೈದರಾಬಾದ್' ಒಡತಿ!
"ಮ್ಯಾನೇಜ್ಮೆಂಟ್ ದೃಷ್ಟಿಕೋನದಿಂದ, ಅವರ ಕುಟುಂಬದ ಪರಿಸ್ಥಿತಿಯ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಮತ್ತು ಎಂಎಸ್ ಮತ್ತು ಅವರ ಕುಟುಂಬಕ್ಕೆ ಬೆಂಬಲವನ್ನು ನೀಡಲಾಗುತ್ತಿದೆ.ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದೆ ಆದರೆ ಮುಂದಿನ ಕೆಲವೇ ದಿನಗಳಲ್ಲಿ ನಾವು ಅದನ್ನು ಮೇಲ್ವಿಚಾರಣೆ ಮಾಡುತ್ತೇವೆ. ಇದು ಎಲ್ಲರಿಗೂ ಕಠಿಣ ಸಮಯ "ಎಂದು ಫ್ಲೆಮಿಂಗ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ನಂತರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಧೋನಿಯ ಪೋಷಕರ ಆಮ್ಲಜನಕದ ಮಟ್ಟ ಸ್ಥಿರವಾಗಿದೆ ಎಂದು ಬುಧವಾರ ನವೀಕರಣದಲ್ಲಿ ಪಲ್ಸ್ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ತಿಳಿಸಿದೆ.
ಇದನ್ನೂ ಓದಿ: Kolkata vs Chennai: ರಸೆಲ್, ಕಮಿನ್ಸ್ ಟಕ್ಕರ್ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ ಗೆ ರೋಚಕ ಗೆಲುವು
ಕೆಕೆಆರ್ ವಿರುದ್ಧದ ರೋಮಾಂಚಕ ಗೆಲುವಿನ ನಂತರ, ಸಿಎಸ್ಕೆ ಈಗ ಐಪಿಎಲ್ 2021 ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ, ನಾಲ್ಕು ಪಂದ್ಯಗಳಿಂದ ಆರು ಅಂಕಗಳನ್ನು ಗಳಿಸಿದೆ. ಅವರು ಮುಂದಿನ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.