IPL 2021: ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಾಯಿದ್ದಾರೆ 'ಸನ್ ರೈಸರ್ ಹೈದರಾಬಾದ್' ಒಡತಿ!

ಗೆಲುವಿನ ನಂತರ ಎಸ್‌ಆರ್‌ಹೆಚ್ ಟೀಂ ಸಿಇಒ ಕವಿಯಾ ಮಾರನ್ ತುಂಬಾ ಖುಷಿ ಪಟ್ಟಿದ್ದಾರೆ

Last Updated : Apr 22, 2021, 04:06 PM IST
  • ಸೀಸನ್ 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವು ಅಂತಿಮವಾಗಿ ತಮ್ಮ ಗೆಲುವಿನ ಖಾತೆ
  • ಗೆಲುವಿನ ನಂತರ ಎಸ್‌ಆರ್‌ಹೆಚ್ ಟೀಂ ಸಿಇಒ ಕವಿಯಾ ಮಾರನ್ ತುಂಬಾ ಖುಷಿ ಪಟ್ಟಿದ್ದಾರೆ
  • ಕವಿಯಾ ಮಾರನ್ ಅವರ ಖುಷಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಾಯಿದೆ.
IPL 2021: ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಾಯಿದ್ದಾರೆ 'ಸನ್ ರೈಸರ್ ಹೈದರಾಬಾದ್' ಒಡತಿ! title=

ಚೆನೈ: ಐಪಿಎಲ್ ಸೀಸನ್ 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಅಂತಿಮವಾಗಿ ತಮ್ಮ ಗೆಲುವಿನ ಖಾತೆಯನ್ನು ಬುಧವಾರ ತೆರೆಯಿತು, ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ ಗಳ ಜಯ ತನ್ನದಾಗಿಸಿಕೊಂಡಿದ್ದೆ. ಈ ಗೆಲುವಿನ ನಂತರ ಎಸ್‌ಆರ್‌ಹೆಚ್ ಟೀಂ ಸಿಇಒ ಕವಿಯಾ ಮಾರನ್ ತುಂಬಾ ಖುಷಿ ಪಟ್ಟಿದ್ದಾರೆ. ಕವಿಯಾ ಮಾರನ್ ಅವರ ಖುಷಿ ಸೋಶಿಯಲ್ ಮೀಡಿಯಾದಲ್ಲಿ  ಸಖತ್ ಸೌಂಡ್ ಮಾಡ್ತಾಯಿದೆ. 

ಕವಿಯಾ ಮಾರನ್ ಎಸ್‌ಆರ್‌ಹೆಚ್ ಮಾಲೀಕರ ಮಗಳು:

ಕವಿಯಾ ಮಾರನ್ ಸನ್ ಗ್ರೂಪ್ ಮಾಲೀಕ ಕಲಾನಿತಿ ಮಾರನ್(Kalanithi Maran) ಅವರ ಪುತ್ರಿ. ಸಧ್ಯ ನಡೆಯುತ್ತಿರುವ ಐಪಿಎಲ್ ನಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಮಾಲೀಕರಾಗಿದ್ದಾರೆ.  ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರ ಸೋದರ ಸೊಸೆ. 28 ವರ್ಷದ ಕವಿಯಾ ಮಾರನ್ ಸ್ವತಃ ಸನ್ ಮ್ಯೂಸಿಕ್‌ ನಲ್ಲಿ ಕೂಡ ಪಾಲುದಾರಿಕೆ ಹೊಂದಿದ್ದಾರೆ. ಕವಿಯಾ ಅವರು 2018 ಐಪಿಎಲ್ ನಲ್ಲಿ ತಮ್ಮ ಟೀಂ ಎಸ್‌ಆರ್‌ಎಚ್ ಅನ್ನು ಹುರಿದುಂಬಿಸುವ ಮೂಲಕ ಮೊದಲ ಭಾರಿ ಟಿವಿಯಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ : Kolkata vs Chennai: ರಸೆಲ್, ಕಮಿನ್ಸ್ ಟಕ್ಕರ್ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ ಗೆ ರೋಚಕ ಗೆಲುವು

ಎಂಬಿಎ ನಂತರ ತಂದೆಯ ವ್ಯವಹಾರ ಸೇರಿಕೊಂಡ ಕವಿಯಾ:

ಕವಿಯಾ ಮಾರನ್ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಟೀಂನ ಸಿಇಒ ಆಗಿದ್ದಾರೆ. ಎಂಬಿಎ ಮುಗಿಸಿದ ನಂತರ, ಕವಿಯಾ(Kaviya Maran) ತಂದೆ ಕಲಾನಿತಿ ಮಾರನ್ ಅವರ ವ್ಯವಹಾರದೊಂದಿಗೆ ಕೈಜೋಡಿಸಿದ್ದಾರೆ. ಕವಿಯಾ ಬಿಸಿನೆಸ್ ಅಲ್ಲಿ ಯಾವುದೇ ಅನುಭವವಿಲ್ಲದ ಕಾರಣ ತಮ್ಮದೇ ಕಂಪನಿಯಾದ ಸನ್ ಟಿವಿ ನೆಟ್‌ವರ್ಕ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದರು. ಕವಿಯಾ ಪ್ರಸ್ತುತ ಸನ್ ಟಿವಿ ನೆಟ್‌ವರ್ಕ್‌ನ ಒಟಿಟಿ ಪ್ಲಾಟ್‌ಫಾರ್ಮ್ ಸನ್ ನೆಕ್ಸ್ಟ್ ಸನ್ ಎನ್‌ಎಕ್ಸ್‌ಟಿಯ ಮುಖ್ಯಸ್ಥರಾಗಿದ್ದಾರೆ.

ಇದನ್ನೂ ಓದಿ : Punjab vs Hyderabad: ಸನ್ ರೈಸರ್ಸ್ ಹೈದರಾಬಾದ್ ಗೆ 9 ವಿಕೆಟ್ ಗಳ ಜಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News