2023 ಟಾಟಾ ಐಪಿಎಲ್ಗೆ ಜಿಯೋ ಸಿನಿಮಾ ಕಾಮೆಂಟರಿ ತಂಡದಲ್ಲಿ ಸೂಪರ್ಸ್ಟಾರ್ ಕ್ರಿಕೆಟಿಗರು
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಭಾರತದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಮತ್ತು ವಿಶ್ವ ನಂ. 1 ಟಿ20 ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಪ್ರಚಾರ ವೇದಿಕೆಗೆ ಕರೆತಂದು ವೀಕ್ಷಕರ ಕಾತರ ಹೆಚ್ಚಿಸಿದ ಬಳಿಕ ಜಿಯೋ ಸಿನಿಮಾ, 2023ರ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವೀಕ್ಷಕ ವಿವರಣೆ ನೀಡಲಿರುವ ಎಕ್ಸ್ಪರ್ಟ್ ಪ್ಯಾನೆಲ್ನಲ್ಲಿ ಕಾಣಿಸಿಕೊಳ್ಳಲಿರುವ ಸೂಪರ್ಸ್ಟಾರ್ ಕ್ರಿಕೆಟಿಗರ ತಂಡವನ್ನು ಇಂದು ಪ್ರಕಟಿಸುತ್ತಿದೆ.
ಮುಂಬೈ, ಮಾರ್ಚ್ 30, 2023: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಭಾರತದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಮತ್ತು ವಿಶ್ವ ನಂ. 1 ಟಿ20 ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಪ್ರಚಾರ ವೇದಿಕೆಗೆ ಕರೆತಂದು ವೀಕ್ಷಕರ ಕಾತರ ಹೆಚ್ಚಿಸಿದ ಬಳಿಕ ಜಿಯೋ ಸಿನಿಮಾ, 2023ರ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವೀಕ್ಷಕ ವಿವರಣೆ ನೀಡಲಿರುವ ಎಕ್ಸ್ಪರ್ಟ್ ಪ್ಯಾನೆಲ್ನಲ್ಲಿ ಕಾಣಿಸಿಕೊಳ್ಳಲಿರುವ ಸೂಪರ್ಸ್ಟಾರ್ ಕ್ರಿಕೆಟಿಗರ ತಂಡವನ್ನು ಇಂದು ಪ್ರಕಟಿಸುತ್ತಿದೆ.
ಭಾರತೀಯ ನೆಚ್ಚಿನ ಕ್ರೀಡಾ ಹಬ್ಬವನ್ನು ಕ್ರಿಕೆಟ್ ಪ್ರೇಮಿಗಳು ಮತ್ತು ವೀಕ್ಷಕರಿಗೆ ಕನ್ನಡ ಸಹಿತ ಒಟ್ಟು 12 ಭಾಷೆಗಳಲ್ಲಿ ಜಿಯೋ ಸಿನಿಮಾ ಒದಗಿಸಿಕೊಡುತ್ತಿದೆ. ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಭೋಜ್ಪುರಿ, ಪಂಜಾಬಿ, ಒರಿಯಾ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ ಈ ಪಟ್ಟಿಯಲ್ಲಿರುವ ಇತರ ಭಾಷೆಗಳಾಗಿವೆ.
ಐಪಿಎಲ್ ಚಾಂಪಿಯನ್ಸ್, ಪ್ರಶಸ್ತಿ ಗೆಲುವಿನ ಮಾರ್ಗದರ್ಶಕರು, ಅಂಕಿ-ಅಂಶಗಳ ಸಾಧಕರು, ಭವಿಷ್ಯದ ಹಾಲ್ ಆಫ್ ಫೇಮರ್ಗಳಾದ ಸುರೇಶ್ ರೈನಾ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಆರ್ಪಿ ಸಿಂಗ್, ಇವೊಯಿನ್ ಮಾರ್ಗನ್, ಪಾರ್ಥಿವ್ ಪಟೇಲ್ ಮತ್ತು ಸ್ಕಾಟ್ ಸ್ಟೈರಿಸ್ ಅವರು ಜಿಯೋ ಸಿನಿಮಾದ ವೀಕ್ಷಕವಿವರಣೆ ತಂಡದಲ್ಲಿರುವ ತಾರಾ ಬಳಗವಾಗಿದ್ದಾರೆ. 2023ರ ಐಪಿಎಲ್ ಆವೃತ್ತಿ ಒಟ್ಟಾರೆ 16 ಫೀಡ್ಗಳಲ್ಲಿ ಪ್ರಸಾರವಾಗಲಿವೆ. ಜಹೀರ್ ಖಾನ್, ಬ್ರೆಟ್ ಲೀ, ಗ್ರೇಮ್ ಸ್ಮಿತ್, ಗ್ರೇಮ್ ಸ್ವಾನ್ ಮುಂತಾದ ತಾರೆಯರೂ ಈ ಎಕ್ಸ್ಪರ್ಟ್ ಪ್ಯಾನೆಲ್ ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ : "ಬಿಜೆಪಿಯಲ್ಲಿ ಇದ್ರೆ ಸೇಫ್, ಇಲ್ಲೆ ಇದ್ದು ಗೆದ್ದು ಸಂತಸದಿಂದ ಮಂತ್ರಿಯಾಗೋದು ಒಳ್ಳೆಯದು"-ಯತ್ನಾಳ್
ಟಾಟಾ ಐಪಿಎಲ್ ವೇಳೆ ಕನ್ನಡದಲ್ಲಿ ವೀಕ್ಷಕವಿವರಣೆ ನೀಡಲಿರುವ ತಂಡದಲ್ಲಿ ಕರ್ನಾಟಕದ ಮಾಜಿ ಕ್ರಿಕೆಟ್ ತಾರೆಯರಾದ ವೆಂಕಟೇಶ್ ಪ್ರಸಾದ್, ಎಸ್. ಅರವಿಂದ್, ಅಮಿತ್ ವರ್ಮ, ಎಚ್. ಶರತ್, ಸುಜಯ್ ಶಾಸ್ತ್ರಿ, ದೀಪಕ್ ಚೌಗಲೆ, ರಾಘವೇಂದ್ರ ರಾಜ್, ಸುಮಂತ್ ಭಟ್, ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ, ರೀನಾ ಡಿಸೋಜಾ, ನಟಿ-ರೂಪದರ್ಶಿ ಹಿತಾ ಚಂದ್ರಶೇಖರ್ ಮತ್ತು ಅಂಕಿತಾ ಅಮರ್ ಕಾಣಿಸಿಕೊಳ್ಳಲಿದ್ದಾರೆ.
'ಹಾಲಿ ವರ್ಷದ ಟಾಟಾ ಐಪಿಎಲ್ಗಾಗಿ ತಜ್ಞರ ದೊಡ್ಡ ಬಳಗ ಮತ್ತು ದಾಖಲೆ ಸಂಖ್ಯೆಯ ಫೀಡ್ಗಳನ್ನು ಒದಗಿಸುವ ಮೂಲಕ ಹಿಂದೆಂದಿಗಿಂತಲೂ ಅಮೋಘವಾದ ರೀತಿಯಲ್ಲಿ ಲೀಗ್ಅನ್ನು ಪ್ರಸ್ತುತಪಡಿಸುವ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದೇವೆ. ಈ ಸ್ಟಾರ್ ವೀಕ್ಷಕವಿವರಣೆಕಾರರು ಲೀಗ್, ಕ್ರೀಡೆ ಮತ್ತು ಅದರಾಚೆಗಿನ ಎಲ್ಲ ವಿಷಯಗಳನ್ನು ವೀಕ್ಷಕರಿಗೆ ಒಂದೇ ಸ್ಥಳದಲ್ಲಿ ಒದಗಿಸಿಕೊಡಲಿದ್ದಾರೆ. ವೀಕ್ಷಕರ ನೆಚ್ಚಿನ ಕ್ರೀಡಾ ಸಂಭ್ರಮಕ್ಕಾಗಿ ಜಿಯೋ ಸಿನಿಮಾ ಒನ್-ಸ್ಟಾಪ್ ಶಾಪ್ ಆಗಿ ರೂಪುಗೊಂಡಿದೆ. ಅಭಿಮಾನಿಗಳು ನಮ್ಮ ಕೊಡುಗೆಗಳ ಹೃದಯ ಭಾಗದಲ್ಲಿದ್ದಾರೆ ಮತ್ತು ಈ ಪ್ಯಾನೆಲ್ ಜಿಯೋ ಸಿನಿಮಾ ನೀಡುವ ಶ್ರೀಮಂತ ಮತ್ತು ಆಕರ್ಷಕವಾದ ಅನುಭವವನ್ನು ವರ್ಧಿಸುತ್ತದೆ. ಈ ವಿಶ್ವದರ್ಜೆಯ ಕ್ರೀಡಾಕೂಟದ ಉತ್ಸಾಹ ಮತ್ತು ಕಾತರವನ್ನು ಇದು ಪ್ರತಿಬಿಂಬಿಸುತ್ತದೆ' ಎಂದು ವಯಾಕಾಮ್18 ಸ್ಪೋರ್ಟ್ಸ್ ಕಂಟೆಂಟ್ ಮುಖ್ಯಸ್ಥ ಸಿದ್ಧಾರ್ಥ್ ಶರ್ಮ ಹೇಳಿದ್ದಾರೆ.
ಇನ್ಸೈಡರ್ಸ್ ಫೀಡ್, ಲೈಫ್ಸ್ಟೈಲ್ ಫೀಡ್, ಫ್ಯಾಂಟಸಿ ಫೀಡ್ ಮತ್ತು ಫ್ಯಾನ್ಝೋನ್ ಫೀಡ್ ಎಂಬ ನಾಲ್ಕು ಹೆಚ್ಚುವರಿ ಫೀಡ್ಗಳನ್ನು ಐಪಿಎಲ್ನ ಅಧಿಕೃತ ಡಿಜಿಟಲ್ ಪ್ರಸಾರ ಪಾಲುದಾರ ಎನಿಸಿರುವ ಜಿಯೋ ಸಿನಿಮಾ ಒದಗಿಸಿಕೊಡುತ್ತಿದೆ. ಈ ಮೂಲಕ ವೀಕ್ಷಕರಿಗೆ ತಮ್ಮ ನೆಚ್ಚಿನ ಕ್ರೀಡೆಯನ್ನು ಆನಂದಿಸುವ ಹೊಸ ಮಾರ್ಗವನ್ನು ನೀಡುತ್ತಿದೆ.
ಜಿಯೋ ಸಿನಿಮಾ ಒಟ್ಟು 12 ಭಾಷೆಗಳಲ್ಲಿ ವೀಕ್ಷಕವಿವರಣೆಯನ್ನು ಒದಗಿಸಲಿದ್ದು, ಈ ಪೈಕಿ ಆರ್ಪಿ ಸಿಂಗ್ (ಹಿಂದಿ), ಜೂಲನ್ ಗೋಸ್ವಾಮಿ (ಬೆಂಗಾಲಿ), ಕೇದಾರ್ ಜಾಧವ್ (ಮರಾಠಿ), ದೇಬಾಶಿಶ್ ಮೊಹಾಂತಿ (ಒರಿಯಾ), ಶರಣ್ದೀಪ್ ಸಿಂಗ್ (ಪಂಜಾಬಿ), ಮನ್ಪ್ರೀತ್ ಜುನೇಜಾ (ಗುಜರಾತಿ), ಸಚಿನ್ ಬೇಬಿ (ಮಲಯಾಳಂ), ಹನುಮ ವಿಹಾರಿ (ತೆಲುಗು), ಅಭಿನವ್ ಮುಕುಂದ್ (ತಮಿಳು), ಮೊಹಮದ್ ಸೈಫ್ (ಭೋಜ್ಪುರಿ) ಆಯಾ ಭಾಷೆಗಳ ಪ್ರಮುಖ ವೀಕ್ಷಕ ವಿವರಣೆಕಾರರಾಗಿದ್ದಾರೆ. ಮೃತನ ತಾಯಿಗೆ ಈಜುಕೊಳ್ಳದ ಮಾಲೀಕರು ಮತ್ತು ವಿಮಾ ಕಂಪನಿಯಿಂದ ಪರಿಹಾರ ಕೊಡಲು ಆಯೋಗದ ಆದೇಶ
ಜಿಯೋ, ಏರ್ಟೆಲ್, ವೀ, ಬಿಎಸ್ಎನ್ಎಲ್ನಲ್ಲಿ ಎಲ್ಲ ಸಬ್ಸ್ಕ್ರೈಬರ್ಗಳಿಗೆ ಜಿಯೋ ಸಿನಿಮಾ ಉಚಿತವಾಗಿ ಲಭ್ಯವಿದೆ. ಮೊದಲ ಆವೃತ್ತಿಯ ಟಾಟಾ ವುಮೆನ್ಸ್ ಪ್ರೀಮಿಯರ್ ಲೀಗ್ನ ಅಂತ್ಯಕ್ಕೆ ದಾಖಲೆಯ ಸಂಖ್ಯೆಯ ವೀಕ್ಷಕರು ಜಿಯೋ ಸಿನಿಮಾದಲ್ಲಿ ನೋಂದಾಯಿತರಾಗಿದ್ದಾರೆ.
ವೀಕ್ಷಕರು ಜಿಯೋ ಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.