ಧಾರವಾಡ: ಮಾರ್ಚ 10, 2020 ರಂದು ನವಲಗುಂದದ ಶಿರಾಜ ಅಣ್ಣಿಗೇರಿ ಅನ್ನುವ 26 ವರ್ಷದ ಯುವಕ ಹುಬ್ಬಳ್ಳಿಗೆ ತನ್ನ ಪಾನ ಅಂಗಡಿಗೆ ಬೇಕಾದ ಸಾಮಾನು ಖರೀದಿಸಲು ಸ್ನೇಹಿತರ ಜೊತೆ ಬಂದಿದ್ದನು. ತನ್ನ ಖರೀದಿ ಕೆಲಸ ಮುಗಿದ ಮೇಲೆ ಸ್ನೇಹಿತರೊಂದಿಗೆ ಶಿರಾಜ ಹುಬ್ಬಳ್ಳಿಯ ಹೊಸ ಕೋರ್ಟರಸ್ತೆ, ಹತ್ತಿರ ಇರುವ ಪ್ಲಾಷ್ ಈಜುಕೊಳ್ಳಕ್ಕೆ ಸಾಯಂಕಾಲ 6:00 ಗಂಟೆ ಸುಮಾರಿಗೆ ಈಜಲು ಹೋಗಿದ್ದರು. ಈಜುಕೊಳ್ಳದಲ್ಲಿ ಹಣ ಸಂದಾಯ ಮಾಡಿಟಿಕೇಟ್ ಖರೀದಿಸಿ ಅವರ ನಿಯಮದಂತೆ ಈ ಜಾಡಲು ಪ್ರಾರಂಭಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷದ 21 ವರ್ಷದ ತ್ರಿವೇಣಿ ಬಳ್ಳಾರಿ ಮೇಯರ್ ಆಗಿ ಆಯ್ಕೆ!
ಆ ರೀತಿ ಈ ಜಾಡುವಾಗ ನೀರಿನಲ್ಲಿ ಮುಳುಗಿ 26 ವರ್ಷದ ಅವಿವಾಹಿತ ಶಿರಾಜ ಮೃತನಾಗಿದ್ದನು. ಈಜುಕೊಳ್ಳದ ಮಾಲೀಕರು ಸರಿಯಾದ ಮುಂಜಾಗರುಕತೆ ತೆಗೆದುಕೊಳ್ಳದ್ದರಿಂದ ಮತ್ತು ನುರಿತ ತರಬೇತುದಾರರನ್ನು ಅಲ್ಲಿ ಇಡದೇಇರುವುದರಿಂದ ತನ್ನ ಮಗ ನೀರಿನಲ್ಲಿ ಮುಳುಗಿ ಸತ್ತಿದ್ದಾನೆ ಕಾರಣ ಈಜುಕೊಳ್ಳದ ಮಾಲೀಕರ ನಿರ್ಲಕ್ಷವೇತನ್ನ ಮಗನ ಸಾವಿಗೆ ಕಾರಣ ಅಂತಾ ದೂರಿದ್ದರು. ಅವರಿಂದ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಮಾಲೀಕರಿಂದ ರೂ.40 ಲಕ್ಷರೂಪಾಯಿ ಪರಿಹಾರಕೊಡಿಸುವಂತೆ ಮೃತರತಾಯಿ ನವಲಗುಂದದ ಮೈಮುನಬಿ ಅಣ್ಣಿಗೇರಿ ಅವರು ಈಜುಕೊಳ್ಳದ ಮಾಲೀಕರ ವಿರುದ್ಧ ಅವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ : "ಬಿಜೆಪಿಯಲ್ಲಿ ಇದ್ರೆ ಸೇಫ್, ಇಲ್ಲೆ ಇದ್ದು ಗೆದ್ದು ಸಂತಸದಿಂದ ಮಂತ್ರಿಯಾಗೋದು ಒಳ್ಳೆಯದು"-ಯತ್ನಾಳ್
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು.ಸಿ.ಹಿರೇಮಠ ಸದಸ್ಯರು, ವಿಚಾರಣೆಯ ಕಾಲಕ್ಕೆ ಈಜುಕೊಳ್ಳದ ಮೇಲೆ ನ್ಯೂಇಂಡಿಯಾ ಅಸುರೆನ್ಸ್ ಕಂಪನಿಯ ವಿಮೆ ಇರುವುದರಿಂದ ಅವರನ್ನು ಎದುರುದಾರರನ್ನಾಗಿ ಮಾಡಿ ವಿಚಾರಣೆ ನಡೆಸಲಾಯಿತು. ಈಜುಕೊಳ್ಳದಲ್ಲಿ ಎಲ್ಲಾ ಮುಂಜಾಗರುಕತೆ ವಹಿಸಿರುವುದಾಗಿ ಮತ್ತು ನೂರಿತ ತರಬೇತುದಾರರನ್ನು ಇಟ್ಟಿರುವುದಾಗಿ ಈಜುಕೊಳ್ಳದ ಮಾಲೀಕರು ತಕರಾರು ಎತ್ತಿದ್ದರು.ಮೃತನ ಮರಣೋತ್ತರ ಪರೀಕ್ಷಾ ವರಧಿಯಲ್ಲಿ ಮಧ್ಯದ ಸೇವನೆಯ ವಾಸನೆ ಕಂಡುಬಂದಿದ್ದರಿಂದ ಮೃತನು ವಿಮಾ ಪಾಲಸಿಯ ಷರತ್ತನ್ನು ಉಲ್ಲಂಘಿಸಿದ್ದಾನೆ ಕಾರಣತಾವು ಪರಿಹಾರಕೊಡಲು ಬದ್ಧರಲ್ಲ ಅಂತಾ ವಿಮಾ ಕಂಪನಿ ಸಹ ಆಕ್ಷೇಪಣೆ ಎತ್ತಿತ್ತು. ಈ ಬಗ್ಗೆ ಕುಲಂಕುಶ ವಿಚಾರಣೆ ನಡೆಸಿದ ಆಯೋಗ ಈಜುಕೊಳ್ಳದ ಮಾಲೀಕರು ಮತ್ತು ವಿಮಾ ಕಂಪನಿಯವರ ಆಕ್ಷೆಪಣೆಗಳನ್ನು ತಳ್ಳಿ ಹಾಕಿ ಈಜುಕೊಳ್ಳದ ಮಾಲೀಕರು ಮತ್ತು ಅದರ ವಿಮಾ ಕಂಪನಿಯವರು ದೂರುದಾರರಿಗೆ ಪರಿಹಾರ ಕೊಡಲು ಬದ್ಧರಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಚಿಕ್ಕ ವಯಸ್ಸಿನ ಒಬ್ಬನೆ ಮಗನನ್ನು ಕಳೆದುಕೊಂಡ ತಾಯಿ, ದೂರುದಾರಳಿಗೆ ಈಜುಕೊಳ್ಳದ ಮಾಲೀಕರು ಮತ್ತು ವಿಮಾ ಕಂಪನಿಯವರು ಜಂಟಿಯಾಗಿ ಒಟ್ಟು 9 ಲಕ್ಷ 74 ಸಾವಿರ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಪರಿಹಾರ ಕೊಡಲು ಆಯೋಗ ತಿಳಿಸಿದೆ.
ಬಂದ ಪರಿಹಾರದಲ್ಲಿ 5 ಲಕ್ಷ ರೂಪಾಯಿಗಳನ್ನು 5 ವರ್ಷದ ಅವಧಿಗೆ ದೂರುದಾರರ ಹೆಸರಿನಲ್ಲಿ ಅವರು ಇಚ್ಚಿಸುವ ರಾಷ್ಟ್ರೀಕೃತ ಬ್ಯಾಂಕು ಅಥವಾ ಅಂಚೆ ಕಛೇರಿಯಲ್ಲಿ ಖಾಯಂ ಠೇವಣಿಯಾಗಿ ಇಡಲು ತಿಳಿಸಿದೆ. ಉಳಿದ ಹಣ ರೂ.4 ಲಕ್ಷ 74 ಸಾವಿರ ರೂಪಾಯಿಗಳನ್ನು ಚೆಕ್ ಮೂಲಕ ದೂರುದಾರರಿಗೆ ಸಂದಾಯ ಮಾಡಲು ತೀರ್ಪಿನಲ್ಲಿ ಆದೇಶಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.