Suryakumar Yadav Record: ಕಳೆದ ಪಂದ್ಯದಲ್ಲಿ ನೆದರ್‌ಲ್ಯಾಂಡ್ ವಿರುದ್ಧ ಸ್ಫೋಟಕ ಅರ್ಧಶತಕ ಗಳಿಸಿದ ಟೀಂ ಇಂಡಿಯಾ ಮಿ.360 ಸೂರ್ಯಕುಮಾರ್ ಯಾದವ್ ಹೊಸ ದಾಖಲೆಯನ್ನು ಮಾಡಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ದಾಖಲೆಯನ್ನು ಸರಿಗಟ್ಟಿರುವ ಯಾದವ್ ಈ ವರ್ಷದಲ್ಲಿ ಅತಿಹೆಚ್ಚು ರನ್‌ ಗಳಿಸಿದ ಮೊದಲ ಆಟಗಾರ ಎನ್ನಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Mithali Raj: ಭಾರತ-ದ.ಆಫ್ರಿಕಾ ಪಂದ್ಯಕ್ಕಿಂದು ಹೊಸ ಮೆರುಗು: ಮೊದಲ ಬಾರಿಗೆ ಕಾಮೆಂಟರಿ ಮಾಡಲಿರುವ ‘ಮಿಥಾಲಿ’


ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ T20 ಸರಣಿಯಲ್ಲೂ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದು, ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ 780 ರೇಟಿಂಗ್ಸ್ ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದ್ದರು. ಇದರ ಜೊತೆಗೆ 573 ಎಸೆತಗಳಲ್ಲಿ ವೇಗವಾಗಿ 1 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಖ್ಯಾತಿಗೂ ಒಳಪಟ್ಟಿದ್ದರು.


IND vs SA: ಟೀಂ ಇಂಡಿಯಾದಲ್ಲಿ ಆಗುತ್ತಾ ಬದಲಾವಣೆ? ಅಥವಾ ದೆಹಲಿಯ ಈ ಆಟಗಾರನಿಗೆ ಸಿಗುತ್ತಾ ಅವಕಾಶ!


ಇನ್ನು ಇಂದು ಪರ್ತ್ ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಭರ್ಜರಿ ಆಟ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಉತ್ತಮ ಲಯದಲ್ಲಿರುವ ಸೂರ್ಯ ಕುಮಾರ್ ಯಾದವ್, ಹರಿಣಗಳನ್ನು ಬಗ್ಗುಬಡಿಯಲು ಕಾತುರರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ