"ಇದು T20 ಕ್ರಿಕೆಟ್ ಅನ್ನು ಕಲಾ ಪ್ರಕಾರವಾಗಿ ಕಾನೂನುಬದ್ಧಗೊಳಿಸಿತು"–ಕೊಹ್ಲಿ ಆಟಕ್ಕೆ ಚಾಪೆಲ್ ಮೆಚ್ಚುಗೆ

 ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಐಸಿಸಿ T20 ವಿಶ್ವಕಪ್ 2022 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 82 ರನ್ ಗಳಿಸಿದ ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್  ಕಲಾ ಪ್ರಕಾರವಾಗಿ ಕಾನೂನುಬದ್ಧಗೊಳಿಸಿತು 

Written by - Zee Kannada News Desk | Last Updated : Oct 29, 2022, 05:37 PM IST
  • "ಆಧುನಿಕ ಆಟದಲ್ಲಿನ ಅನೇಕ ಅತ್ಯುತ್ತಮ ಬ್ಯಾಟ್ಸಮನ್ ಗಳು ಈ ರೀತಿ ಆಟವಾಡಿ ವಿಜಯ ಗಳಿಸಿರಬಹುದು
  • ಆದರೆ ಪಾಕಿಸ್ತಾನದ ವಿರುದ್ಧ ಕೊಹ್ಲಿ ಮಾಡಿದ ರೀತಿಯಲ್ಲಿ ಯಾರೂ ಅದನ್ನು ಶುದ್ಧ ಬ್ಯಾಟಿಂಗ್ ಕೌಶಲ್ಯದಿಂದ ಮಾಡಿಲ್ಲ,
  • ಈ ಹಿಂದೆ ಆಡಮ್ ಗಿಲ್‌ಕ್ರಿಸ್ಟ್ ಮಾತ್ರ ಇದರ ಹತ್ತಿರಕ್ಕೆ ಬಂದಿದ್ದಾರೆ,
"ಇದು T20 ಕ್ರಿಕೆಟ್ ಅನ್ನು ಕಲಾ ಪ್ರಕಾರವಾಗಿ ಕಾನೂನುಬದ್ಧಗೊಳಿಸಿತು"–ಕೊಹ್ಲಿ ಆಟಕ್ಕೆ ಚಾಪೆಲ್ ಮೆಚ್ಚುಗೆ title=
Photo Courtsey: Twitter

ಸಿಡ್ನಿ: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಐಸಿಸಿ T20 ವಿಶ್ವಕಪ್ 2022 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 82 ರನ್ ಗಳಿಸಿದ ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್  ಕಲಾ ಪ್ರಕಾರವಾಗಿ ಕಾನೂನುಬದ್ಧಗೊಳಿಸಿತು ಎಂದು ಆಸ್ಟ್ರೇಲಿಯಾದ ದಂತಕಥೆ ಮತ್ತು ಭಾರತದ ಮಾಜಿ ಮುಖ್ಯ ಕೋಚ್ ಗ್ರೆಗ್ ಚಾಪೆಲ್ ಶನಿವಾರದಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ʼಪುನೀತ್ ಉಪಗ್ರಹ ವರ್ಕ್ ಸ್ಟೇಷನ್‌ʼಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

'ನನ್ನ ಜೀವನಮಾನದಲ್ಲಿ ರೀತಿಯ ಬ್ಯಾಟಿಂಗ್ ಪ್ರದರ್ಶನವನ್ನು ನೋಡಿರಲಿಲ್ಲ, ಇದೊಂದು ರೀತಿ  ಟಿ20 ಕ್ರಿಕೆಟ್ ಅನ್ನು ಕಾನೂನುಬದ್ಧಗೊಳಿಸಿದ ಇನ್ನಿಂಗ್ಸ್ ಆಗಿತ್ತು, ಇದೊಂದು ರೀತಿಯ ಕಲಾಪ್ರಕಾರವಾಗಿತ್ತು ಎಂದು ಅವರು ಹೇಳಿದರು. ಇನ್ನು ಮುಂದುವರೆದು ಕಳೆದ 15 ವರ್ಷಗಳಲ್ಲಿ ಈ ರೀತಿಯ ಆಟವನ್ನು ತಾವು ನೋಡಿಲ್ಲ ಎಂದು ಚಾಪೆಲ್ ಹೇಳಿದರು.ಇಂದು ಶೇನ್ ವಾರ್ನ್ ಬದುಕಿದ್ದರೆ ವಿರಾಟ್ ಕೊಹ್ಲಿ ಅವರ ಆಟದ ಬಗ್ಗೆ ಹೆಮ್ಮೆ ಪಡುತ್ತಿದ್ದರು. ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಭರ್ಜರಿ 82 ರನ್ ಗಳ ಇನಿಂಗ್ಸ್ ಪಂದ್ಯದ ಚಿತ್ರಣವನ್ನೇ ಬದಲಿಸಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಬಂದ್ಮೇಲೆ ದ್ವೇಷ ಹೆಚ್ಚಿದೆ, RSS ಕಾನೂನು ಕೈಗೆತ್ತಿಕೊಂಡಿದೆ

"ಆಧುನಿಕ ಆಟದಲ್ಲಿನ ಅನೇಕ ಅತ್ಯುತ್ತಮ ಬ್ಯಾಟ್ಸಮನ್ ಗಳು ಈ ರೀತಿ ಆಟವಾಡಿ ವಿಜಯ ಗಳಿಸಿರಬಹುದು ಆದರೆ ಪಾಕಿಸ್ತಾನದ ವಿರುದ್ಧ ಕೊಹ್ಲಿ ಮಾಡಿದ ರೀತಿಯಲ್ಲಿ ಯಾರೂ ಅದನ್ನು ಶುದ್ಧ ಬ್ಯಾಟಿಂಗ್ ಕೌಶಲ್ಯದಿಂದ ಮಾಡಿಲ್ಲ,ಈ ಹಿಂದೆ ಆಡಮ್ ಗಿಲ್‌ಕ್ರಿಸ್ಟ್ ಮಾತ್ರ ಇದರ ಹತ್ತಿರಕ್ಕೆ ಬಂದಿದ್ದಾರೆ, ಆದರೆ ಇದು ಅವರ ಕೆಲವು ಉತ್ಕೃಷ್ಟ ಪ್ರಯತ್ನಗಳಿಗಿಂತ ಹೆಚ್ಚು ನಿಗೂಢವಾಗಿತ್ತು ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News