Shabad Khan: ಜಿಂಬಾಬ್ವೆ ವಿರುದ್ಧ ಸೋಲು ಕಾಣುತ್ತಿದ್ದಂತೆ ಮಂಡಿಯೂರಿ ಕಣ್ಣೀರಿಟ್ಟ ಪಾಕ್ ಆಟಗಾರ!

ನಾಯಕ ಬಾಬರ್ ಅಜಮ್ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಬೇಗನೆ ಔಟಾದರು. ಅಷ್ಟೇ ಅಲ್ಲದೆ ಪಾಕಿಸ್ತಾನದ ಮಧ್ಯಮ ಕ್ರಮಾಂಕವೂ ಸಹ ಉತ್ತಮ ಫಲಿತಾಂಶ ನೀಡಲಿಲ್ಲ. ಈ ಸಂದರ್ಭದಲ್ಲಿ ಶಾನ್ ಮಸೂದ್ ರನ್ ಕಲೆ ಹಾಕಲು ಪ್ರಯತ್ನಿಸಿದರು. ಶಾದಾಬ್ ಖಾನ್ (17) 4ನೇ ವಿಕೆಟ್‌ಗೆ 52 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಹಂಚಿಕೊಂಡರು, ಇದು ಪಾಕಿಸ್ತಾನವನ್ನು ಬಹುತೇಕ ಗೆಲುವಿನ ಬಾಗಿಲಿಗೆ ಕೊಂಡೊಯ್ದಿತು.

Written by - Bhavishya Shetty | Last Updated : Oct 29, 2022, 05:32 PM IST
    • ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಕಂಡ ಸೋಲು ಪಾಕ್ ಕ್ರಿಕೆಟ್ ಪ್ರಿಯರಿಗೆ ನುಂಗಲಾರದ ತುಪ್ಪವಾಗಿದೆ
    • ಪಾಕಿಸ್ತಾನದ ಆಟಗಾರ ಶಾಬಾದ್ ಖಾನ್ ನೆಲಕ್ಕೆ ಬಿದ್ದು ಕಣ್ಣೀರು ಹಾಕಿದ್ದಾರೆ
    • ಪಾಕಿಸ್ತಾನದ ಆಟಗಾರರು ಮತ್ತು ಅಭಿಮಾನಿಗಳ ಮುಖದಲ್ಲಿ ನಿರಾಶೆ ಇತ್ತು
Shabad Khan: ಜಿಂಬಾಬ್ವೆ ವಿರುದ್ಧ ಸೋಲು ಕಾಣುತ್ತಿದ್ದಂತೆ ಮಂಡಿಯೂರಿ ಕಣ್ಣೀರಿಟ್ಟ ಪಾಕ್ ಆಟಗಾರ! title=
shabaz khan

ಗುರುವಾರ ಪರ್ತ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಗ್ರೂಪ್ 2ರ ರೋಚಕ ಹಣಾಹಣಿಯಲ್ಲಿ ಪಾಕಿಸ್ತಾನವನ್ನು ಜಿಂಬಾಬ್ವೆ 1 ರನ್‌ಗಳ ಅಂತರದಿಂದ ಸೋಲಿಸಿತು. ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಕಂಡ ಸೋಲು ಪಾಕ್ ಕ್ರಿಕೆಟ್ ಪ್ರಿಯರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ಇದನ್ನೂ ಓದಿ: Virat Kohli: ವಿಶ್ವದಾಖಲೆ ಹೊಸ್ತಿಲಲ್ಲಿ ವಿರಾಟ್: ಈ ರೆಕಾರ್ಡ್ ಮಾಡಲು ಬೇಕಾಗಿರೋದು ಕೇವಲ 27 ರನ್!

ನಾಯಕ ಬಾಬರ್ ಅಜಮ್ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಬೇಗನೆ ಔಟಾದರು. ಅಷ್ಟೇ ಅಲ್ಲದೆ ಪಾಕಿಸ್ತಾನದ ಮಧ್ಯಮ ಕ್ರಮಾಂಕವೂ ಸಹ ಉತ್ತಮ ಫಲಿತಾಂಶ ನೀಡಲಿಲ್ಲ. ಈ ಸಂದರ್ಭದಲ್ಲಿ ಶಾನ್ ಮಸೂದ್ ರನ್ ಕಲೆ ಹಾಕಲು ಪ್ರಯತ್ನಿಸಿದರು. ಶಾದಾಬ್ ಖಾನ್ (17) 4ನೇ ವಿಕೆಟ್‌ಗೆ 52 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಹಂಚಿಕೊಂಡರು, ಇದು ಪಾಕಿಸ್ತಾನವನ್ನು ಬಹುತೇಕ ಗೆಲುವಿನ ಬಾಗಿಲಿಗೆ ಕೊಂಡೊಯ್ದಿತು.

ಆದರೆ ಬಿಗಿಯಾದ ಓವರ್‌ಗಳು ಮತ್ತು ನಿಯಮಿತ ವಿಕೆಟ್‌ಗಳು ಜಿಂಬಾಬ್ವೆಗೆ ನೆರವಾದವು. ಅಂತಿಮವಾಗಿ ಜಿಂಬಾಬ್ವೆ ಗೆಲುವು ಸಾಧಿಸಿತು. ಎಲ್ಲಾ ಪಾಕಿಸ್ತಾನದ ಆಟಗಾರರು ಮತ್ತು ಅಭಿಮಾನಿಗಳ ಮುಖದಲ್ಲಿ ನಿರಾಶೆ ಇತ್ತು.

ಆದರೆ ಈ ಸೋಲನ್ನು ಕಂಡ ಪಾಕಿಸ್ತಾನದ ಆಟಗಾರ ಶಾಬಾದ್ ಖಾನ್ ನೆಲಕ್ಕೆ ಬಿದ್ದು ಕಣ್ಣೀರು ಹಾಕಿದ್ದಾರೆ. ಇದರ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ “ಕ್ರಿಕೆಟ್ ಕೆಲವೊಮ್ಮೆ ತುಂಬಾ ಕ್ರೂರವಾಗಿರಬಹುದು” ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬರು ತೆಗೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಇದನ್ನೂ ಓದಿ: Babar Azam Troll: ಬಾಬರ್ ಅಜಂ ಇಂಗ್ಲೀಷ್ ಕೇಳಿದ್ರೆ ತಲೆ ತಿರುಗೋದು ಖಂಡಿತ: ಮತ್ತೆ ಟ್ರೋಲ್ ಗೆ ಆಹಾರವಾದ ಪಾಕ್ ನಾಯಕ

ಪಾಕಿಸ್ತಾನವು ಈಗ ಉಳಿದಿರುವ ಮೂರು ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಲೇಬೇಕು. ಇಲ್ಲವಾದಲ್ಲಿ ಸೆಮಿ ಕನಸು ಭಗ್ನವಾಗಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News