ರೋಹಿತ್, ಹಾರ್ದಿಕ್ ಬದಲು ಈ ಕಿಲಾಡಿ ಬ್ಯಾಟ್ಸ್’ಮನ್’ಗೆ ಟಿ20 ವಿಶ್ವಕಪ್ ನಾಯಕತ್ವ!?
Suryakumar Yadav, T20 World Cup: ಹಿಂದೆಯೂ ತಂಡವನ್ನು ಮುನ್ನಡೆಸಿರುವ ಸೂರ್ಯ ಅವರಿಗೆ ನಾಯಕತ್ವ ಹೊಸದೇನಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸೂರ್ಯ ಹೇಗೆ ಪ್ರಗತಿ ಸಾಧಿಸಿದ್ದಾರೆ ಮತ್ತು ಮುಂದಿನ ವರ್ಷ 2024ರ T20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾದ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು ಎನ್ನಲು ಕಾರಣವೇನು ಎಂಬುದನ್ನು ತಿಳಿಯೋಣ
Suryakumar Yadav, T20 World Cup: ಭಾರತ ಕ್ರಿಕೆಟ್ ತಂಡದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಸತತವಾಗಿ ಯಶಸ್ಸಿನ ಮೆಟ್ಟಿಲು ಏರುತ್ತಿದ್ದಾರೆ. ಸೂರ್ಯ ನಾಯಕತ್ವದಲ್ಲಿ, ಭಾರತ ತಂಡ ಇತ್ತೀಚೆಗೆ ತವರಿನಲ್ಲಿ ನಡೆದ 5 ಪಂದ್ಯಗಳ T20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 4-1 ಅಂತರದಿಂದ ಸೋಲಿಸಿತು. ಇದೀಗ ತಂಡದೊಂದಿಗೆ ದಕ್ಷಿಣ ಆಫ್ರಿಕಾ ತಲುಪಿದ್ದು, ಭಾರತ ತಂಡ ಆತಿಥೇಯರೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಹಿಂದೆಯೂ ತಂಡವನ್ನು ಮುನ್ನಡೆಸಿರುವ ಸೂರ್ಯ ಅವರಿಗೆ ನಾಯಕತ್ವ ಹೊಸದೇನಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸೂರ್ಯ ಹೇಗೆ ಪ್ರಗತಿ ಸಾಧಿಸಿದ್ದಾರೆ ಮತ್ತು ಮುಂದಿನ ವರ್ಷ 2024ರ T20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾದ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು ಎನ್ನಲು ಕಾರಣವೇನು ಎಂಬುದನ್ನು ತಿಳಿಯೋಣ
ಇದನ್ನೂ ಓದಿ: IPL ಹರಾಜಿನಲ್ಲಿ 333 ಆಟಗಾರರು ! ಇವರ ಮೇಲೆ ಫ್ರಾಂಚೈಸಿಗಳ ಕಣ್ಣು ! ಹಣದ ಹೊಳೆ ಹರಿಯುವುದು ಗ್ಯಾರಂಟಿ
ಇನ್ನೇನು 6 ತಿಂಗಳಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಸೂರ್ಯಕುಮಾರ್ ನಾಯಕನಾಗಿ ಆಯ್ಕೆಯಾಗಬಹುದು. ಹಾರ್ದಿಕ್ ಪಾಂಡ್ಯ ಕೆಲ ಸಮಯದಿಂದ ಟಿ20ಯಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದರೂ, ಸದ್ಯ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ.
ವಿಶ್ವಕಪ್’ನಲ್ಲಿ ರೋಹಿತ್’ಗೆ ಕಮಾಂಡ್ ನೀಡಲು ಬಿಸಿಸಿಐ ಮುಂದಾಗಿದೆ. ಆದರೆ 2022ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಈ ಸ್ವರೂಪದಿಂದ ದೂರ ಉಳಿದಿದ್ದಾರೆ. ಹೀಗಿರುವಾಗ ಮತ್ತೊಮ್ಮೆ ಟಿ20ಯಲ್ಲಿ ನಾಯಕತ್ವಕ್ಕೆ ಒಪ್ಪುವ ಸಾಧ್ಯತೆ ಕಡಿಮೆ. ಬಿಸಿಸಿಐಗೆ ಉಳಿದಿರುವ ಏಕೈಕ ಆಯ್ಕೆ ಸೂರ್ಯ ಎಂದೇ ಹೇಳಬಹುದು. ಸತತ ಎರಡನೇ ಟಿ20 ಸರಣಿಯಲ್ಲಿ ಸೂರ್ಯ ಅವರಿಗೆ ಅವಕಾಶ ನೀಡುವ ಮೂಲಕ ಭಾರತೀಯ ಮಂಡಳಿ ಬಹುಶಃ ಅವರನ್ನು ವಿಶ್ವಕಪ್’ಗೆ ಸಿದ್ಧಪಡಿಸುತ್ತಿದೆ.
ಟಿ20ಯಲ್ಲಿ ಬ್ಯಾಟ್ಸ್’ಮನ್ ಆಗಿ ಸೂರ್ಯ ಅವರ ದಾಖಲೆ ಅತ್ಯುತ್ತಮವಾಗಿದೆ. ನಾಯಕನಾಗಿ ಅಂತಾರಾಷ್ಟ್ರೀಯ ಚೊಚ್ಚಲ ಸರಣಿಯಲ್ಲೂ ಯಶಸ್ವಿಯಾಗಿದ್ದರು. ಇದಕ್ಕೂ ಮುನ್ನ 2013ರಲ್ಲಿ ಎಸಿಸಿ ಅಂಡರ್-23 ಎಮರ್ಜಿಂಗ್ ತಂಡದ ನಾಯಕರಾಗಿದ್ದರು. ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕರೂ ಆಗಿದ್ದಾರೆ. 2015ರಲ್ಲಿ ಸೂರ್ಯ ಮುಂಬೈ ತಂಡದ ನಾಯಕತ್ವ ತೊರೆದಿದ್ದರು.
ನಾಯಕನಾಗಿ ಸೂರ್ಯ ತುಂಬಾ ಪ್ರಬುದ್ಧರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಟಿ20 ಸರಣಿಯಲ್ಲಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರೆ, ಪಾಂಡ್ಯ ಅನುಪಸ್ಥಿತಿಯಲ್ಲಿ ಬಿಸಿಸಿಐ ನಾಯಕತ್ವವನ್ನು ಸೂರ್ಯಗೆ ಹಸ್ತಾಂತರಿಸುವ ಎಲ್ಲಾ ಸಾಧ್ಯತೆ ಇದೆ.
ಬ್ಯಾಟ್ಸ್’ಮನ್ ಆಗಿ, ಟಿ20ಯಂತೆ ಏಕದಿನ ಪಂದ್ಯಗಳಲ್ಲಿ ಸೂರ್ಯ ತನ್ನ ಛಾಪು ಮೂಡಿಸಲು ವಿಫಲರಾಗಿದ್ದಾರೆ. 58 T20 ಪಂದ್ಯಗಳಲ್ಲಿ 171.71 ಸ್ಟ್ರೈಕ್ ರೇಟ್‌ನಲ್ಲಿ 1985 ರನ್ ಗಳಿಸಿದ್ದಾರೆ, ಇದರಲ್ಲಿ 3 ಶತಕಗಳು ಮತ್ತು 16 ಅರ್ಧ ಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ 117 ರನ್.
ಇದನ್ನೂ ಓದಿ: ENG vs IND Test Squad: ಇಂಗ್ಲೆಂಡ್ ಟೆಸ್ಟ್ ಸರಣಿಗೆ ತಂಡ ಪ್ರಕಟ, 19 ವರ್ಷದ ಆಟಗಾರನಿಗೆ ಖುಲಾಯಿಸಿದ ಅದೃಷ್ಟ
ಏಕದಿನದ 37 ಪಂದ್ಯಗಳಲ್ಲಿ 4 ಅರ್ಧ ಶತಕಗಳನ್ನು ಒಳಗೊಂಡಂತೆ 773 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಅವರ ಅತ್ಯುತ್ತಮ ಸ್ಕೋರ್ ಅಜೇಯ 72. ಅವರು ಇಲ್ಲಿಯವರೆಗೆ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಸೂರ್ಯ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ಸರಣಿ ಗೆದ್ದರೆ ಇತಿಹಾಸ ಸೃಷ್ಟಿ ಗ್ಯಾರಂಟಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ