IPL ಹರಾಜಿನಲ್ಲಿ 333 ಆಟಗಾರರು ! ಇವರ ಮೇಲೆ ಫ್ರಾಂಚೈಸಿಗಳ ಕಣ್ಣು ! ಹಣದ ಹೊಳೆ ಹರಿಯುವುದು ಗ್ಯಾರಂಟಿ

IPL 2024 Auction Players List:ಮುಂಬರುವ ಐಪಿಎಲ್ ಸೀಸನ್‌ಗಾಗಿ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.  

Written by - Ranjitha R K | Last Updated : Dec 12, 2023, 10:28 AM IST
  • ಡಿಸೆಂಬರ್ 19 ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ
  • 214 ಭಾರತೀಯ ಮತ್ತು 119 ವಿದೇಶಿ ಆಟಗಾರರು ಹರಾಜಿನಲ್ಲಿ
  • ಈ ಆಟಗಾರರ ಮೇಲೆ ಫ್ರಾಂಚೈಸಿಗಳು ಕಣ್ಣು
IPL ಹರಾಜಿನಲ್ಲಿ 333 ಆಟಗಾರರು ! ಇವರ ಮೇಲೆ ಫ್ರಾಂಚೈಸಿಗಳ  ಕಣ್ಣು ! ಹಣದ ಹೊಳೆ ಹರಿಯುವುದು ಗ್ಯಾರಂಟಿ    title=

IPL 2024 Auction Players List : ಮುಂಬರುವ ಐಪಿಎಲ್ ಸೀಸನ್‌ಗಾಗಿ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಹರಾಜಿನಲ್ಲಿ ಒಟ್ಟು 333 ಆಟಗಾರರು ಭಾಗಿಯಾಗಲಿದ್ದಾರೆ. ಇದರಲ್ಲಿ ಭಾರತೀಯ ವೇಗದ ಬೌಲರ್‌ಗಳಾದ ಉಮೇಶ್ ಯಾದವ್, ಹರ್ಷಲ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಕೂಡಾ ಸೇರಿದ್ದಾರೆ. ಇವರನ್ನು 2 ಕೋಟಿ ರೂ.ಗಳ ಅತ್ಯಧಿಕ ಮೂಲ ಬೆಲೆ ವಿಭಾಗದಲ್ಲಿ ಇರಿಸಲಾಗಿದೆ. ಎರಡು ವರ್ಷಗಳ ಹಿಂದೆ ಐಪಿಎಲ್ ಹರಾಜಿನಲ್ಲಿ 10.75 ಕೋಟಿ ರೂಪಾಯಿಗೆ ಹರ್ಷಲ್ ಅವರನ್ನು ಖರೀದಿಸಲಾಗಿತ್ತು.  

214 ಭಾರತೀಯ ಮತ್ತು 119 ವಿದೇಶಿ ಆಟಗಾರರು  : 
ಐಪಿಎಲ್ ಆಡಳಿತ ಮಂಡಳಿ 1166 ಆಟಗಾರರ ಪಟ್ಟಿಯನ್ನು ಫ್ರಾಂಚೈಸಿಗಳಿಗೆ ಸಲ್ಲಿಸಿತ್ತು. ಫ್ರಾಂಚೈಸಿಯ ಸಲಹೆಯ ನಂತರ, ಈ ಆಟಗಾರರ ಸಂಖ್ಯೆಯನ್ನು 333 ಕ್ಕೆ ಇಳಿಸಲಾಯಿತು. ಇವರಲ್ಲಿ 214 ಭಾರತೀಯ ಹಾಗೂ 119 ವಿದೇಶಿ ಆಟಗಾರರು ಸೇರಿದ್ದಾರೆ. 116 ಕ್ಯಾಪ್ಡ್ ಮತ್ತು 215 ಅನ್‌ಕ್ಯಾಪ್ಡ್ ಆಟಗಾರರು ಈ ಹರಾಜಿನಲ್ಲಿ ಸೇರಿಕೊಳ್ಳಲಿದ್ದಾರೆ. ಇಬ್ಬರು ಆಟಗಾರರು ಅಸೋಸಿಯೇಟ್ ದೇಶಗಳವರಾಗಿದ್ದಾರೆ. ಈ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಒಟ್ಟು 262.95 ಕೋಟಿ ರೂ. ಯನ್ನು ಖರ್ಚು ಮಾಡುವ ಸಾಧ್ಯತೆ ಇದೆ. 

ಇದನ್ನೂ ಓದಿ : ENG vs IND Test Squad: ಇಂಗ್ಲೆಂಡ್ ಟೆಸ್ಟ್ ಸರಣಿಗೆ ತಂಡ ಪ್ರಕಟ, 19 ವರ್ಷದ ಆಟಗಾರನಿಗೆ ಖುಲಾಯಿಸಿದ ಅದೃಷ್ಟ

ಪಟ್ಟಿಯಲ್ಲಿದ್ದಾರೆ ಈ ಆಟಗಾರರು : 
ಹರಾಜು ಪಟ್ಟಿಯಲ್ಲಿ ಹಲವು ಆಟಗಾರರ ಹೆಸರುಗಳು ಸೇರಿವೆ. ಈ ಕ್ರಿಕೆಟಿಗರ ಮೇಲೆ ಹಣದ ಸುರಿ ಮಳೆಯಾಗಬಹುದು. ಆಸ್ಟ್ರೇಲಿಯಾದ ಆಟಗಾರರು ಹೆಚ್ಚಿನ ಬೇಡಿಕೆಯಲ್ಲಿರಬಹುದೆಂದು ನಿರೀಕ್ಷಿಸಲಾಗಿದೆ. ಏಕೆಂದರೆ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮ್ಮಿನ್ಸ್, ವಿಶ್ವಕಪ್ ಫೈನಲ್ ಹೀರೋ ಟ್ರಾವಿಸ್ ಹೆಡ್, ವಿಕೆಟ್ ಕೀಪರ್ ಜೋಶ್ ಇಂಗ್ಲಿಷ್ ಮತ್ತು ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು  2 ಕೋಟಿ ರೂ.  ಮೂಲ ಬೆಲೆ ವಿಭಾಗದಲ್ಲಿ ಇರಿಸಲಾಗಿದೆ. 

ಈ ಆಟಗಾರರ ಮೇಲೆ ಫ್ರಾಂಚೈಸಿಗಳು ಕಣ್ಣು : 
ಎಲ್ಲರ ದೃಷ್ಟಿ ನೆಟ್ಟಿರುವ ಆಟಗಾರರ ಪೈಕಿ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಕೂಡಾ ಸೇರಿದ್ದಾರೆ. ಅವರ ಮೂಲ ಬೆಲೆ 50 ಲಕ್ಷ ರೂ. ದಕ್ಷಿಣ ಆಫ್ರಿಕಾದ ಆಟಗಾರರಲ್ಲಿ ವೇಗದ ಬೌಲರ್ ಜೆರಾಲ್ಡ್ ಕೊಯೆಟ್ಜಿ ಮತ್ತು ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಫ್ರಾಂಚೈಸಿಯ ಗಮನವನ್ನು ಸೆಳೆಯಬಲ್ಲರು. ಕೆಲವು ಅಪರಿಚಿತ ಆಟಗಾರರು ಫ್ರಾಂಚೈಸಿಯ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದು. ಇವರಲ್ಲಿ ಇಂಗ್ಲೆಂಡ್‌ನ ಟಾಮ್ ಕೊಹ್ಲರ್ ಕಾಡ್ಮೋರ್ ಕೂಡಾ ಸೇರಿದ್ದು, ಅವರ ಮೂಲ ಬೆಲೆ 40 ಲಕ್ಷ ರೂ. ಈ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. 

ಭಾರತೀಯ ಆಟಗಾರರ ಮೇಲೂ ಕಣ್ಣು : 
ಶ್ರೀಲಂಕಾದ ವನಿಂದು ಹಸರಂಗಾ ಮೂಲ ಬೆಲೆ 1.5 ಕೋಟಿ ರೂ. ಇವರಲ್ಲದೆ ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕ ಕೂಡಾ ಉತ್ತಮ ಬೆಲೆ ಪಡೆಯಬಹುದು. ಐಪಿಎಲ್‌ನಲ್ಲಿ ಹೆಚ್ಚಾಗಿ ಆಡುವ ಭಾರತೀಯ ವೇಗದ ಬೌಲರ್‌ಗಳಾದ ಶಿವಂ ಮಾವಿ, ಕಾರ್ತಿಕ್ ತ್ಯಾಗಿ ಮತ್ತು ಕಮಲೇಶ್ ನಾಗರಕೋಟಿ ಮೂಲ ಬೆಲೆ  20 ರಿಂದ 30 ಲಕ್ಷ ರೂ. ವಿಭಾಗದಲ್ಲಿದ್ದಾರೆ.  

ಇದನ್ನೂ ಓದಿ : ಟೀಂ ಇಂಡಿಯಾಗೆ ಸಿಕ್ಕೇಬಿಟ್ರು ಜೂ. ಯುವರಾಜ್ ಸಿಂಗ್! ಈತನ ಬ್ಯಾಟಿಂಗ್ ಮೋಡಿಗೆ ಫ್ಯಾನ್ ಆಗ್ಬಿಟ್ಟೆ ಎಂದ ಗವಾಸ್ಕರ್

 ಯಾವ ತಂಡದಲ್ಲಿ ಎಷ್ಟು ಮೊತ್ತ : 
ಗುಜರಾತ್ ಟೈಟಾನ್ಸ್ (ಜಿಟಿ)  -  38.15 ಕೋಟಿ 
ಸನ್ ರೈಸರ್ಸ್ ಹೈದರಾಬಾದ್ (SRH)  -  34 ಕೋಟಿ 
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)  -  32.7 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್ (CSK)  -  31.4 ಕೋಟಿ ರೂ
ಪಂಜಾಬ್ ಕಿಂಗ್ಸ್ (PBKS)  -  29.1 ಕೋಟಿ
ದೆಹಲಿ ಕ್ಯಾಪಿಟಲ್ಸ್ (DC)  -  28.95 ಕೋಟಿಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)  -  23.25 ಕೋಟಿ ರೂ
ಮುಂಬೈ ಇಂಡಿಯನ್ಸ್ (MI)  -  17.75 ಕೋಟಿ
ರಾಜಸ್ಥಾನ್ ರಾಯಲ್ಸ್ (RR)  -  14.5 ಕೋಟಿ
ಲಕ್ನೋ ಸೂಪರ್ ಜೈಂಟ್ಸ್ (LSG)  -  13.15 ಕೋಟಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News