SuryaKumar suffering hernia: ಜನವರಿ 11 ರಿಂದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟ20 ಸರಣಿ ಆರಂಭಗೊಳ್ಳಿದೆ. ಮೊದಲ ಪಂದ್ಯವನ್ನು ಪಂಜಾಬ್‌ನ ಬಿಂದ್ರ ಸ್ಟೇಡಿಂನಲ್ಲಿ ಆಯೋಜಿಸಲಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. 


COMMERCIAL BREAK
SCROLL TO CONTINUE READING

ಈ ಸರಣಿಯಿಂದ ಸೂರ್ಯ ಕುಮಾರ್‌ ಯಾದವ್‌ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಟಿ20 ಮಾದರಿಯಲ್ಲಿ ಸೂರ್ಯ ಕುಮಾರ್‌ ಯಾದವ್‌ 887 ಅಂಕಳಿಂದ ಅಗ್ರ ಸ್ಥಾನದಲ್ಲಿದ್ಧಾರೆ. ಆದರೆ ಅವರು ಅಫ್ಘಾನ್‌ ವಿರುದ್ದದ ಟಿ20 ಸರಣಿಯನ್ನು ತಪ್ಪಸಿಕೊಳ್ಳಲಿದ್ಧಾರೆ.


ಇದನ್ನು ಓದಿ-ಟೆಸ್ಟ್‌ ಕ್ರಿಕೆಟ್‌ ಸಂಕಷ್ಟಕ್ಕೆ ಸಿಲುಕಿದೆ, ಇದಕ್ಕೆ ಟಿ20 ಕ್ರಿಕೆಟ್‌ ಕಾರಣ ! ಎಬಿ ಡಿ ವಿಲಿಯರ್ಸ್...


ಸೂರ್ಯ ಕುಮಾರ್‌ ಯಾದವ್‌ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ಧಾರೆ. ಹಾಗಾಗಿ ವೈದ್ಯರು ಶಸ್ತ್ರ ಚಿಕಿತಸೆಯನ್ನು ಮಾಡುವಂತೆ ಸೂಚಿಸಿದ್ಧಾರೆ. ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯದ ಅಗತ್ಯವಿರುವುದರಿಂದ ಸೂರ್ಯ ಕುಮಾರ್‌ ಈ ಸರಣಿಯಿಂದ ಹೊರಗುಳಿದಿದ್ಧಾರೆ. 


ಶಸ್ತ್ರ ಚಿಕಿತ್ಸೆಯಿಂದಾಗಿ ಸೂರ್ಯಾ ಕುಮಾರ್‌ ಈ ಸರಣಿ ತಪ್ಪಿಸಿಕೊಂಡಿದ್ದು ಮುಂಬರುವ ಐಪಿಎಲ್‌(ಇಂಡಿಯನ್‌ ಪ್ರೀಮಿಯರ್‌ ಲೀಗ್‌)ಗೂ ಮುನ್ನ ಸಂಪೂರ್ಣ ಫಿಟ್‌ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐ ಮಾಹಿತಿಯನ್ನು ಹಂಚಿಕೊಂಡಿದೆ. 


ಇದನ್ನು ಓದಿ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಟೀಂ ಇಂಡಿಯಾದ ಈ ವೇಗದ ಬೌಲರ್!


ಭಾರತ ತಂಡವು ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಅಫ್ಘಾನ್‌ ವಿರುದ್ದ ಟಿ20 ಸರಣಿಯನ್ನು ಆಡಲಿದೆ. ಮೊದಲ ಪಂದ್ಯವನ್ನು ಜನವರಿ11 ರಂದು ಬಿಂದ್ರ ಸ್ಟೇಡಿಂನಲ್ಲಿ ಆರಂಭಗೊಳ್ಳಲಿದೆ. 2ನೇ ಪಂದ್ಯವು ಇದೇ ಜನವರಿ 14 ರಂದು ಇಂಡೋರ್‌ನಲ್ಲಿ ನಡೆಯಲಿದ್ದು, 3ನೇ ಪಂದ್ಯವು 17 ರಂದು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆಯೋಜಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.