Yuvraj singh biopic: ಕಳೆದ ಕೆಲವು ವರ್ಷಗಳಲ್ಲಿ ಬಯೋಪಿಕ್‌ಗಳ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ಈ ರೀತಿಯ ಚಿತ್ರಗಳನ್ನೇ ಪ್ರೇಕ್ಷಕರು ಎಷ್ಟು ಇಷ್ಟಪಡುತ್ತಿದ್ದಾರೆ. ಅದು ರಾಜಕೀಯವಾಗಲಿ, ಕ್ರೀಡೆಯಾಗಲಿ ಅಥವಾ ಅಂತಹ ಯಾವುದೇ ಕಾರ್ಯಕ್ರಮವಾಗಲಿ, ಅದು ಹೊಸ ರೀತಿಯಲ್ಲಿ ಜನರನ್ನು ತಲುಪಬೇಕು. ಈ ಕಾರಣದಿಂದಲೇ ಸಿನಿಮಾ ಮಾಡುವಾಗ ಕೆಲ ವಿಷಯಗಳ ಬಗ್ಗೆ ತಯಾರಕರು ಗಮನ ನೀಡುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ಸಾರಾ ನನ್ನ ಹೆಂಡತಿ"- ಸಚಿನ್‌ ತೆಂಡೂಲ್ಕರ್‌ ಮಗಳಿಗೆ ಮದ್ವೆ ಆಗಿದ್ಯಾ? ಪತ್ನಿ ಅಂತಿರೋ ʼಆʼ ವ್ಯಕ್ತಿ ಯಾರು?


2011 ರ ವಿಶ್ವಕಪ್ ವಿಜೇತ ಹೀರೋ ಯುವರಾಜ್ ಸಿಂಗ್ ಅವರ ಬಯೋಪಿಕ್ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ 2011 ರ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದರು. ಬ್ಯಾಟ್ ಮಾತ್ರವಲ್ಲದೆ ಚೆಂಡಿನಲ್ಲೂ ತಮ್ಮ ತಂಡಕ್ಕೆ ಸಂಪೂರ್ಣ ಕೊಡುಗೆ ನೀಡಿದವರು ಯುವಿ.


ಇನ್ನು ಯುವಿ ಭಾರತದ ಗೆಲುವಿನ ಹೀರೋ ಮಾತ್ರವಲ್ಲ, ನಿಜ ಜೀವನದ ಹೀರೋ ಕೂಡ ಹೌದು. ವಿಶ್ವಕಪ್ ಗೆಲುವಿನ ನಂತರ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಬಹಿರಂಗವಾಗಿತ್ತು. ಈ ಸುದ್ದಿ ಕೇಳಿ ಎಲ್ಲರೂ ಬೆಚ್ಚಿಬಿದ್ದರು. ಅದಾದ ಬಳಿಕ ಯಶಸ್ವಿ ಚಿಕಿತ್ಸೆ ಪಡೆದ ಯುವಿ ಈಗ ಆರಾಮದಾಯಕ ಜೀವನ ನಡೆಸಿತ್ತೊದ್ದಾರೆ.


ಅಂದಹಾಗೆ ನಿರ್ಮಾಣ ಕಂಪನಿ ಟಿ-ಸೀರೀಸ್‌ ಮಾಲೀಕ ಭೂಷಣ್ ಕುಮಾರ್ ಇತ್ತೀಚೆಗೆ ಯುವರಾಜ್ ಸಿಂಗ್ ಅವರ ಜೀವನಚರಿತ್ರೆಯನ್ನು ಘೋಷಿಸಿದ್ದಾರೆ. ರವಿ ಭಾಗಚಂಡಕ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.


ಇದನ್ನೂ ಓದಿ: 1 ಓವರ್‌ʼನಲ್ಲಿ 39 ರನ್‌ ಚಚ್ಚಿ ಅಬ್ಬರಿಸಿದ ಸ್ಟಾರ್ ದಾಂಡಿಗ! 17 ವರ್ಷ ಹಳೆಯ ಯುವಿ ದಾಖಲೆ ಉಡೀಸ್


ಯುವರಾಜ್ ಸಿಂಗ್ ಅವರ ಜೀವನವು ಗೆಲುವು ಮತ್ತು ಉತ್ಸಾಹದ ಕಥೆಯಾಗಿದೆ ಎಂದು ಭೂಷಣ್ ಕುಮಾರ್ ಹೇಳಿದ್ದಾರೆ. "ಭರವಸೆಯ ಕ್ರಿಕೆಟಿಗನಿಂದ ಕ್ರಿಕೆಟ್ ಹೀರೋ ಆಗಿ ನಂತರ ನಿಜ ಜೀವನದಲ್ಲಿ ಹೀರೋ ಆಗುವ ಅವರ ಪಯಣ ಸಾಕಷ್ಟು ಸ್ಪೂರ್ತಿದಾಯಕವಾಗಿದೆ" ಎಂದಿದ್ದಾರೆ. ಇನ್ನು ಸದ್ಯದಲ್ಲೇ ಚಿತ್ರದ ಕೆಲಸ ಶುರುವಾಗಲಿದೆ. ಆದರೆ, ಚಿತ್ರದಲ್ಲಿ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಇನ್ನೂ ಪ್ರಕಟವಾಗಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ