ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಪುರುಷರ ಟಿ-20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಮುಖಾಮುಖಿಯಾಗಲಿದೆ. ಈ ಟಿ-20 ವಿಶ್ವಕಪ್ ಭಾರತದಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಯುಎಇ ಮತ್ತು ಒಮಾನ್ ಗೆ ಸ್ಥಳಾಂತರಿಸಲಾಗಿದೆ.


COMMERCIAL BREAK
SCROLL TO CONTINUE READING

ಬಹುನಿರೀಕ್ಷಿತ ಟಿ-20 ವಿಶ್ವಕಪ್ ಪಂದ್ಯಾವಳಿಯು ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ನೆಡಯಲಿದ್ದು, ಒಟ್ಟು 8 ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಲಿವೆ. ಗ್ರೂಪ್ 1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ , ವೆಸ್ಟ್ ಇಂಡೀಸ್ ತಂಡಗಳು ಇದ್ದರೆ, ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಅಪ್ಘಾನಿಸ್ತಾನ ತಂಡಗಳು ಇವೆ. 4 ತಂಡಗಳು ಮಾತ್ರ ಸೂಪರ್ 12ರ ಹಂತಕ್ಕೆ ಪ್ರವೇಶಿಸಲಿದ್ದು, ಇದು ಅಕ್ಟೋಬರ್ 23ರಿಂದ ಆರಂಭವಾಲಿದೆ.


ಇದನ್ನೂ ಓದಿ: ಲಾರ್ಡ್ಸ್ ನಲ್ಲಿ ಲಾರ್ಡ್ ಗಳಾದ ಟೀಮ್ ಇಂಡಿಯಾ ಬೌಲರ್ ಗಳು, ಭಾರತಕ್ಕೆ ಭರ್ಜರಿ ಜಯ


ಅಕ್ಟೋಬರ್ 24ರಂದು ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯದಲ್ಲಿ ಸೆಣಸಾಡಲಿದೆ.  ಬಳಿಕ ಅಕ್ಟೋಬರ್ 31ರಂದು ದುಬೈನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದ್ದು, ನವೆಂಬರ್ 3ರಂದು ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ನವೆಂಬರ್ 5 ಮತ್ತು 8ರಂದು ಎರಡು ಕ್ವಾಲಿಫೈಯರ್ ಪಂದ್ಯಗಳನ್ನು ಟೀಂ ಇಂಡಿಯಾ ದುಬೈನಲ್ಲಿ ಆಡಲಿದೆ. ದುಬೈ ಮತ್ತು ಅಬುಧಾಬಿಯಲ್ಲಿ ಒಟ್ಟು 4 ಪಂದ್ಯಗಳನ್ನು ಭಾರತ ತಂಡ ಆಡುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಟೀಂ ಇಂಡಿಯಾದ ಯಾವುದೇ ಸೂಪರ್ 12ರ ಪಂದ್ಯಗಳು ಶಾರ್ಜಾ ಮೈದಾನದಲ್ಲಿ ನಿಗದಿಯಾಗಿಲ್ಲ.


Ball tampering: ಲಾರ್ಡ್ಸ್ ಟೆಸ್ಟ್ ನಲ್ಲಿ ಆಂಗ್ಲರ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ..!


ಟಿ-20 ವಿಶ್ವಕಪ್: ಭಾರತದ ಪಂದ್ಯಗಳು(ಸ್ಥಳೀಯ ಕಾಲಮಾನ)


ಭಾರತ vs ಪಾಕಿಸ್ತಾನ - ಅಕ್ಟೋಬರ್ 24 - 6 PM - ದುಬೈ


ಭಾರತ vs ನ್ಯೂಜಿಲ್ಯಾಂಡ್ - ಅಕ್ಟೋಬರ್ 31 - 6 PM – ದುಬೈ


ಭಾರತ vs ಅಫ್ಘಾನಿಸ್ತಾನ - ನವೆಂಬರ್ 3 - 6 PM - ಅಬುಧಾಬಿ


ಭಾರತ vs B1 (ಕ್ವಾಲಿಫೈಯರ್) - ನವೆಂಬರ್ 5 - 6 PM- ದುಬೈ


ಭಾರತ vs A2 (ಕ್ವಾಲಿಫೈಯರ್) - ನವೆಂಬರ್ 8 - 6 PM – ದುಬೈ


ಇದನ್ನೂ ಓದಿ: IND vs ENG: ಕನ್ನಡಿಗ ಕೆ.ಎಲ್.ರಾಹುಲ್ ‘ಶತಕ’ಕ್ಕೆ ಮನಸೋತ ಗೆಳತಿ ಅಥಿಯಾ ಶೆಟ್ಟಿ..!


ಟಿ-20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ:


ಸೂಪರ್ 12: ಗ್ರೂಪ್ 1ರ ಪಂದ್ಯಗಳ ವೇಳಾಪಟ್ಟಿ


ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ – ಅಕ್ಟೋಬರ್ 23 – 3:30 PM


ಇಂಗ್ಲೆಂಡ್ vs ವೆಸ್ಟ್​ ಇಂಡೀಸ್ – ಅಕ್ಟೋಬರ್ 23 – 7:30 PM


A1 vs B2 – ಅಕ್ಟೋಬರ್ 24  – 3:30 PM


ದಕ್ಷಿಣ ಆಫ್ರಿಕಾ vs ವೆಸ್ಟ್​ ಇಂಡೀಸ್ – ಅಕ್ಟೋಬರ್ 26 – 3:30 PM


ಇಂಗ್ಲೆಂಡ್ vs B2 – ಅಕ್ಟೋಬರ್ 24 – 3:30 PM


ಆಸ್ಟ್ರೇಲಿಯಾ vs A2 – ಅಕ್ಟೋಬರ್ 28 – 7:30 PM


ವೆಸ್ಟ್​ ಇಂಡೀಸ್ vs B2 – ಅಕ್ಟೋಬರ್ 29 – 3:30 PM


ದಕ್ಷಿಣ ಆಫ್ರಿಕಾ vs A1 – ಅಕ್ಟೋಬರ್ 30 – 3:30 PM


ಇಂಗ್ಲೆಂಡ್ vs ಆಸ್ಟ್ರೇಲಿಯಾ – ಅಕ್ಟೋಬರ್ 30 – 7:30 PM


ಇಂಗ್ಲೆಂಡ್ vs A1 – ನವೆಂಬರ್ 1 – 7:30 PM


ದಕ್ಷಿಣ ಆಫ್ರಿಕಾ vs B2 – ನವೆಂಬರ್ 2 – 3:30 PM


ಆಸ್ಟ್ರೇಲಿಯಾ vs B2 – ನವೆಂಬರ್ 4 – 3:30 PM


ವೆಸ್ಟ್​ ಇಂಡೀಸ್ vs A1 – ನವೆಂಬರ್ 4- 7:30 PM


ಆಸ್ಟ್ರೇಲಿಯಾ vs ವೆಸ್ಟ್​ ಇಂಡೀಸ್ – ನವೆಂಬರ್ 6 – 3:30 PM


ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ – ನವೆಂಬರ್ 6 – 7:30 PM


ಇದನ್ನೂ ಓದಿ: ENG vs IND 2 ನೇ ಟೆಸ್ಟ್: ಕೆಎಲ್ ರಾಹುಲ್ ಮೇಲೆ ಬಿಯರ್ ಕಾರ್ಕ್ ಎಸೆದ ಇಂಗ್ಲೆಂಡ್ ಫ್ಯಾನ್ಸ್!


ಸೂಪರ್ 12: ಗ್ರೂಪ್ 2ರ ಪಂದ್ಯಗಳ ವೇಳಾಪಟ್ಟಿ


ಭಾರತ vs ಪಾಕಿಸ್ತಾನ – ಅಕ್ಟೋಬರ್ 24 – 7:30 PM


ಅಫ್ಘಾನಿಸ್ತಾನ vs B1 – ಅಕ್ಟೋಬರ್ 25 – 7:30 PM


ಪಾಕಿಸ್ತಾನ vs ನ್ಯೂಜಿಲ್ಯಾಂಡ್ – ಅಕ್ಟೋಬರ್ 26 – 7:30 PM


B1 vs A2 – ಅಕ್ಟೋಬರ್ 27  – 7:30 PM


ಅಫ್ಘಾನಿಸ್ತಾನ vs ಪಾಕಿಸ್ತಾನ – ಅಕ್ಟೋಬರ್ 29 – 7:30 PM


ಅಫ್ಘಾನಿಸ್ತಾನ vs A2 – ಅಕ್ಟೋಬರ್ 31 – 3:30 PM


ಭಾರತ vs ನ್ಯೂಜಿಲ್ಯಾಂಡ್ – ಅಕ್ಟೋಬರ್ 31 – 7:30 PM


ಪಾಕಿಸ್ತಾನ vs A2 – ನವೆಂಬರ್ 2  – 7:30 PM


ನ್ಯೂಜಿಲ್ಯಾಂಡ್ vs  B1 – ನವೆಂಬರ್ 3 – 3:30 PM


ಭಾರತ vs ಅಫ್ಘಾನಿಸ್ತಾನ – ನವೆಂಬರ್ 3 – 7:30 PM


ನ್ಯೂಜಿಲ್ಯಾಂಡ್ vs A2 – ನವೆಂಬರ್ 5 – 3:30 PM


ಭಾರತ vs B1 – ನವೆಂಬರ್ 5 – 7:30 PM


ನ್ಯೂಜಿಲ್ಯಾಂಡ್ vs ಅಫ್ಘಾನಿಸ್ತಾನ – ನವೆಂಬರ್ 7– 3:30 PM


ಪಾಕಿಸ್ತಾನ vs B1 – ನವೆಂಬರ್ 7 – 7:30 PM


ಭಾರತ vs A2 – ನವೆಂಬರ್ 8  – 7:30 PM


ಸೆಮಿ ಫೈನಲ್ ಪಂದ್ಯಗಳು:


ಸೆಮಿ ಫೈನಲ್ 1 – A1 vs B2 – ನವೆಂಬರ್ 10  


ಸೆಮಿ ಫೈನಲ್ 2- A2 vs B1 – ನವೆಂಬರ್ 11  


ಫೈನಲ್ ಪಂದ್ಯ: ನವೆಂಬರ್ 14  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ