IND vs ENG: ಕನ್ನಡಿಗ ಕೆ.ಎಲ್.ರಾಹುಲ್ ‘ಶತಕ’ಕ್ಕೆ ಮನಸೋತ ಗೆಳತಿ ಅಥಿಯಾ ಶೆಟ್ಟಿ..!

ಅಥಿಯಾ ಇತ್ತೀಚೆಗೆ ರಾಹುಲ್ ಜೊತೆ ಬ್ರ್ಯಾಂಡ್ ಫೋಟೋಶೂಟ್ ಚಿತ್ರವನ್ನು ಹಂಚಿಕೊಂಡಿದ್ದರು.

Written by - Puttaraj K Alur | Last Updated : Aug 14, 2021, 10:30 AM IST
  • ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭರ್ಜರಿ ಶತಕ ಸಿಡಿಸಿದ ಕೆ.ಎಲ್.ರಾಹುಲ್
  • ಕೆ.ಎಲ್.ರಾಹುಲ್ ಶತಕ ಭಾರಿಸಿದ್ದಕ್ಕೆ ಕನ್ನಡಿಗನಿಗೆ ಶುಭಾಶಯ ತಿಳಿಸಿದ ನಟಿ ಅಥಿಯಾ ಶೆಟ್ಟಿ
  • ವಿಶೇಷ ರೀತಿಯಲ್ಲಿ ಕೆ.ಎಲ್.ರಾಹುಲ್ ಗೆ ವಿಶ್ ಮಾಡಿದ ಅಥಿಯಾ ಶೆಟ್ಟಿ ಮತ್ತು ಸುನಿಲ್ ಶೆಟ್ಟಿ
IND vs ENG: ಕನ್ನಡಿಗ ಕೆ.ಎಲ್.ರಾಹುಲ್ ‘ಶತಕ’ಕ್ಕೆ ಮನಸೋತ ಗೆಳತಿ ಅಥಿಯಾ ಶೆಟ್ಟಿ..! title=
ಕೆ.ಎಲ್.ರಾಹುಲ್ ಶತಕಕ್ಕೆ ಮನಸೋತ ಗೆಳತಿ ಅಥಿಯಾ ಶೆಟ್ಟಿ

ನವದೆಹಲಿ: ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್(KL Rahul) ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಶತಕ ಭಾರಿಸುವ ಮೂಲಕ ರಾಹುಲ್ ದಾಖಲೆ ನಿರ್ಮಿಸಿದ್ದಾರೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ ತಾಳ್ಮೆಯುತ ಆಟವಾಡುವ ಮೂಲಕ ಆಂಗ್ಲ ಬೌಲರ್ ಗಳಿಗೆ ಬೆವರಿಳಿಸಿದ್ದಾರೆ.    

83 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ, ಜೇಮ್ಸ್ ಆಂಡರ್ಸನ್ ಬೌಲಿಂಗ್ ನಲ್ಲಿ ಔಟಾದರು. ಮೊದಲ ವಿಕೆಟ್ ಗೆ ಕೆ.ಎಲ್.ರಾಹುಲ್ ಜೊತೆ ಸೇರಿ 126 ರನ್ ಗಳ ಜೊತೆಯಾಟವಾಡಿದ್ದ ರೋಹಿತ್ ಶರ್ಮಾ ಕೇವಲ 17 ರನ್ ಗಳಿಂದ ಶತಕ ವಂಚಿತರಾದರು. ನಂತರ ಇಂಗ್ಲೆಂಡ್ ಬೌಲರ್ ಗಳನ್ನು ಬೆಂಡೆತ್ತಿದ ರಾಹುಲ್(129) ಭರ್ಜರಿ ಶತಕ ಸಿಡಿಸಿ ಲಾರ್ಡ್ಸ್ ಮೈದಾನದಲ್ಲಿ ಸಂಭ್ರಮಿಸಿದರು.

ಇದನ್ನೂ ಓದಿ: PR Sreejesh: ಗೋಲ್‌ಕೀಪರ್ ಶ್ರೀಜೇಶ್‌ಗೆ 2 ಕೋಟಿ ರೂ., ಜೊತೆಗೆ ಬಡ್ತಿಯನ್ನೂ ಘೋಷಿಸಿದ ಕೇರಳ ಸರ್ಕಾರ

ಕೆ.ಎಲ್.ರಾಹುಲ್(KL Rahul) ಅಮೋಘ ಶತಕ ಸಿಡಿಸಿದ್ದಕ್ಕೆ ಕನ್ನಡಿಗರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಅದರಂತೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ, ನಟಿ ಅಥಿಯಾ ಶೆಟ್ಟಿ ಕೂಡ ಕೆ.ಎಲ್.ರಾಹುಲ್ ಶತಕ ಸಂಭ್ರಮಕ್ಕೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಾಹುಲ್ ಶತಕ ಸಂಭ್ರಮದ ವಿಡಿಯೋ ಹಂಚಿಕೊಂಡಿರುವ ಅಥಿಯಾ ಶೆಟ್ಟಿ ‘ಹೃದಯ’ದ ಇಮೋಜಿಗಳನ್ನು ಬಳಸಿ ಶುಭಾಶಯ ತಿಳಿಸಿದ್ದಾರೆ. ಅಥಿಯಾ ಮಾತ್ರವಲ್ಲದೇ ಅವರ ತಂದೆ ಸುನಿಲ್ ಶೆಟ್ಟಿ(Suniel Shetty) ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ರಾಹುಲ್ ಶತಕ ಭಾರಿಸಿರುವ ವಿಡಿಯೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

Athiya Shetty cheers for rumoured boyfriend KL Rahul  

5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನವೇ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ(Athiya Shetty) ಒಟ್ಟಾಗಿ ಇಂಗ್ಲೆಂಡಿನಲ್ಲಿ ಕಾಲ ಕಳೆದಿದ್ದಾರೆ. ಅವರ ಅಭಿಮಾನಿಗಳು ಕೂಡ ಜೋಡಿಯ ಈ ಸುತ್ತಾಟವನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. ತಮ್ಮಿಬ್ಬರ ಸಂಬಂಧದ ಬಗ್ಗೆ ರಾಹುಲ್ ಮತ್ತು ಅಥಿಯಾ ಮೌನವಾಗಿದ್ದಾರೆ. ಇಬ್ಬರು ಪ್ರೀತಿಸುತ್ತಿದ್ದಾರೆ ಎಂದು ಅನೇಕ ವದಂತಿಗಳು ಹರಡಿದ್ದರೂ ಇದುವರೆಗೂ ಈ ಜೋಡಿ ಅದನ್ನು ದೃಢಪಡಿಸಿಲ್ಲ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: IPL 2021: ಐಪಿಎಲ್‌ಗೂ ಮೊದಲು ಧೋನಿಯ ಆಕರ್ಷಕ ಎಂಟ್ರಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಅಭಿಮಾನಿಗಳು ಕೂಡ ರಾಹುಲ್(KL Rahul) ಮತ್ತು ಅಥಿಯಾ ಪ್ರೇಮಸಂಬಂಧದ ಬಗ್ಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿರುತ್ತಾರೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆಂದು 2019ರಲ್ಲಿಯೇ ವದಂತಿಗಳು ಶುರುವಾಗಿದ್ದವು. ಅಥಿಯಾ ಇತ್ತೀಚೆಗೆ ರಾಹುಲ್ ಜೊತೆ ಬ್ರ್ಯಾಂಡ್ ಫೋಟೋಶೂಟ್ ಚಿತ್ರವನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಮಾತ್ರ ಈ ಜೋಡಿ ಪ್ರೀತಿಸುತ್ತಿದೆ, ಸದ್ಯ ಡೇಟಿಂಗ್ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ದೃಢಪಡಿಸುವ ಸಾಧ್ಯತೆ ಇದೆ ಅಂತಾ ಅಭಿಪ್ರಾಯ ವ್ಯಕ್ತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News