T20 ವಿಶ್ವಕಪ್ ಕ್ರಿಕೆಟ್ : ಅಭ್ಯಾಸ ಪಂದ್ಯದಲ್ಲಿ ಆಸಿಸ್ ಪಡೆ ಬಗ್ಗು ಬಡಿದ ಟೀಂ ಇಂಡಿಯಾ
T20 ವಿಶ್ವಕಪ್ ಕ್ರಿಕೆಟ್ ಅಭ್ಯಾಸ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ರನ್‌ಗಳ ರೋಚಕ ಜಯ ಗಳಿಸಿದೆ. ಆಸ್ಟ್ರೇಲಿಯಾ ವಿರುದ್ಧ ಮೈದಾನದಲ್ಲಿ ಅಬ್ಬರಿಸಿದ ಮಹಮದ್ ಶಮಿ ಮಾರಕ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿಯ ಅದ್ಭುತ ಫೀಲ್ಡಿಂಗ್ ಟೀಂ ಇಂಡಿಯಾ ಜಯಕ್ಕೆ ಕಾರಣವಾಯ್ತು.
T20 world cup 2022 : T20 ವಿಶ್ವಕಪ್ ಕ್ರಿಕೆಟ್ ಅಭ್ಯಾಸ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ರನ್‌ಗಳ ರೋಚಕ ಜಯ ಗಳಿಸಿದೆ. ಆಸ್ಟ್ರೇಲಿಯಾ ವಿರುದ್ಧ ಮೈದಾನದಲ್ಲಿ ಅಬ್ಬರಿಸಿದ ಮಹಮದ್ ಶಮಿ ಮಾರಕ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿಯ ಅದ್ಭುತ ಫೀಲ್ಡಿಂಗ್ ಟೀಂ ಇಂಡಿಯಾ ಜಯಕ್ಕೆ ಕಾರಣವಾಯ್ತು.
ಟೀಂ ಇಂಡಿಯಾದ 187 ಟಾರ್ಗೆಟ್ ಬೆನ್ನತ್ತಿದ್ದ ಆಸ್ಟ್ರೇಲಿಯಾ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತು. ಆ್ಯರನ್ ಫಿಂಚ್ ಮತ್ತು ಮಿಚೆಲ್ ಮಾರ್ಷ್ ಜೊಡಿ 41ರನ್ ಕಲೆಹಾಕಿತು. ನಂತರ 18 ಎಸೆತಗಳಲ್ಲಿ ಮಾರ್ಶ್ 2 ಸಿಕ್ಸ್ ಮತ್ತು 4 ಬೌಂಡರಿ ಟೀಂ ಭಾರತಕ್ಕೆ ಆಘಾತ ಉಂಟುಮಾಡಿತ್ತು. ಇನ್ನು ವಿಕೇಟ್ ಮೇಲೆ ವಿಕೇಟ್ ಉರುಳುತ್ತಿದ್ದರೆ ಫಿಂಚ್ ಬ್ಯಾಟಿಂಗ್ ಅಬ್ಬರ ಮುಂದುವರೆದಿತ್ತು.
ಇದನ್ನೂ ಓದಿ: T20 World Cup: ಇದುವರೆಗೂ ಬ್ರೇಕ್ ಮಾಡಲು ಸಾಧ್ಯವಾಗದ ವಿಶ್ವಕಪ್ ದಾಖಲೆಗಳಿವು: ಭಾರತೀಯರದ್ದೇ ಮೇಲುಗೈ
54 ಎಸೆತಗಳಲ್ಲಿ ಫಿಂಚ್ 76 ರನ್ ಕಲೆಹಾಕಿದ್ದರು. ಆದ್ರೆ ಫಿಂಚ್ ಆರ್ಭಟಕ್ಕೆ ಹರ್ಷಲ್ ಪಟೇಲ್ ಬೌಲಿಂಗ್ ತಣ್ಣೀರು ಎರಚಿತು. 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಜಯದ ಹಾದಿಯಲ್ಲಿದ್ದ ಆಸಿಸ್ ಪಡೆಗೆ ಡೇವಿಸ್ ರನೌಟ್ ಮತ್ತು ಪ್ಯಾಟ್ ಕಮ್ಮಿನ್ಸ್ ಕ್ಯಾಚ್ ಪಂದ್ಯಕ್ಕೆ ರೋಚಕ ತಿರುವು ನೀಡಿತು. ಒಂದು ರೀತಿ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ ಪಂದ್ಯದ ದಿಕ್ಕನ್ನೆ ಬದಲಾಯಿಸಿತು.
ಇನ್ನು ಶಮಿ ಎಸೆದ ಕೊನೆಯ ಓವರ್‌ನ ಮೂರನೇ ಬಾಲ್‌ನಲ್ಲಿ ಕಮಿಸ್ ಕೊಹ್ಲಿ ಹಿಡಿದ ಒಂಟಿ ಕೈ ಕ್ಯಾಚ್‌ಗೆ ಬಲಿಯಾದ್ರೆ, ಮರು ಎಸೆತದಲ್ಲಿ ಆಸ್ಟನ್ ಅಗರ್ ರನೌಟ್ ಆಗಿ ಪಿವಿಲಿಯನ್ ಸೇರಿದರು. ಶಮಿ ಬೌಲಿಂಗ್ ಮಿಂಚಿಗೆ ಜೋಸ್ ಇಂಗ್ಲಿಸ್‍ನ್ನು ಬೌಲ್ಡ್ ಔಟ್ ಆದ್ರೆ, ಕೊನೆಯ ಎಸೆತದಲ್ಲಿ ರಿಚರ್ಡ್ಸ್‌ನ್ ಬೋಲ್ಡ್ ಆಗುವ ಮೂಲಕ ರೋಚಕ ಪಂದ್ಯ ಅಂತ್ಯಗೊಂಡಿತು. ಆಸ್ಟ್ರೇಲಿಯಾ ಗೆಲುವಿಗೆ 7 ರನ್‌ಗಳ ಅವಶ್ಯಕತೆ ಇತ್ತು, ಆದ್ರೆ 6 ರನ್‌ಗಳ ಅಂತರದೊಂದಿಗೆ ಜಯ ಭಾರತದ ಪಾಲಾಯಿತು. ಶಮಿ ಹೊರತುಪಡಿಸಿ ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಪಡೆದಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.