T20 World Cup: ಇದುವರೆಗೂ ಬ್ರೇಕ್ ಮಾಡಲು ಸಾಧ್ಯವಾಗದ ವಿಶ್ವಕಪ್ ದಾಖಲೆಗಳಿವು: ಭಾರತೀಯರದ್ದೇ ಮೇಲುಗೈ

ಇದುವರೆಗೆ 7 ಸೀಸನ್‌ಗಳಲ್ಲಿ ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದೆ. ವೆಸ್ಟ್ ಇಂಡೀಸ್ ಹೊರತುಪಡಿಸಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ.

Written by - Bhavishya Shetty | Last Updated : Oct 17, 2022, 05:02 PM IST
    • ಭಾರತವು 2007 ರಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು
    • 7 ಸೀಸನ್‌ಗಳಲ್ಲಿ ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದೆ
    • ಟಿ20 ವಿಶ್ವಕಪ್‌ನ ರೋಚಕ ಸಂಗತಿಗಳು ಮತ್ತು ದಾಖಲೆಗಳು
T20 World Cup: ಇದುವರೆಗೂ ಬ್ರೇಕ್ ಮಾಡಲು ಸಾಧ್ಯವಾಗದ ವಿಶ್ವಕಪ್ ದಾಖಲೆಗಳಿವು: ಭಾರತೀಯರದ್ದೇ ಮೇಲುಗೈ  title=
T20 World Cup

T20 ವಿಶ್ವಕಪ್ 2022 ಈಗಾಗಲೇ ಪ್ರಾರಂಭವಾಗಿದೆ. ಭಾರತವು ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಆಡಬೇಕಾಗಿದೆ. T20 ವಿಶ್ವಕಪ್ ಬಗ್ಗೆ ಮಾತನಾಡುವುದಾದರೆ, ಭಾರತವು 2007 ರಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದುವರೆಗೆ 7 ಸೀಸನ್‌ಗಳಲ್ಲಿ ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದೆ. ವೆಸ್ಟ್ ಇಂಡೀಸ್ ಹೊರತುಪಡಿಸಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ.

ಇದನ್ನೂ ಓದಿ: ಕೇವಲ Instagramನಿಂದ ಕೊಹ್ಲಿ ಗಳಿಸಿದ್ದು 300 ಕೋಟಿ! ಹಾಗಾದ್ರೆ ಇವರ ತಿಂಗಳ ಆದಾಯವೆಷ್ಟು?

ಟಿ20 ವಿಶ್ವಕಪ್‌ನ ರೋಚಕ ಸಂಗತಿಗಳು ಮತ್ತು ದಾಖಲೆಗಳು:

1. ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು 32 ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದ ದಾಖಲೆಯನ್ನು ಮಹೇಂದ್ರ ಸಿಂಗ್ ಧೋನಿ ಹೊಂದಿದ್ದಾರೆ.

2. ವೆಸ್ಟ್ ಇಂಡೀಸ್ ತಂಡ ಎರಡು ಬಾರಿ (2012 ಮತ್ತು 2016) ಪಂದ್ಯಾವಳಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

3. ಎಬಿ ಡಿವಿಲಿಯರ್ಸ್ 23 ಕ್ಯಾಚ್‌ಗಳನ್ನು ಪಡೆದ ದಾಖಲೆ ಹೊಂದಿದ್ದಾರೆ.

4. ಟಿ20 ವಿಶ್ವಕಪ್‌ನಲ್ಲಿ ಎರಡು ಶತಕಗಳು ಕ್ರಿಸ್ ಗೇಲ್ ಹೆಸರಿನಲ್ಲಿದೆ. 2007 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಈ ದಾಖಲೆ ಮಾಡಿದ್ದಾರೆ

5. ಭಾರತದ ಪರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 26 ವಿಕೆಟ್ ಪಡೆದಿದ್ದಾರೆ.

6. ಆಸ್ಟ್ರೇಲಿಯಾವನ್ನು 2007 ರಲ್ಲಿ ಜಿಂಬಾಬ್ವೆ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋಲಿಸಿತ್ತು

7. ಶ್ರೀಲಂಕಾ 2007 ರಲ್ಲಿ ಕೀನ್ಯಾ ವಿರುದ್ಧ ಆರು ವಿಕೆಟ್‌ಗೆ 260 ರನ್ ಗಳಿಸುವ ಮೂಲಕ ಅತ್ಯಧಿಕ ತಂಡದ ಸ್ಕೋರ್‌ನ ದಾಖಲೆಯನ್ನು ಹೊಂದಿದೆ.

8. ಟಿ20 ವಿಶ್ವಕಪ್‌ನಲ್ಲಿ ಮಹೇಲಾ ಜಯವರ್ಧನೆ ಅತ್ಯಧಿಕ 1016 ರನ್ ಗಳಿಸಿದ್ದಾರೆ.

9. T20 ವಿಶ್ವಕಪ್‌ನಲ್ಲಿ ಮೊದಲ ಹ್ಯಾಟ್ರಿಕ್ ಆಸ್ಟ್ರೇಲಿಯಾದ ವೇಗದ ಬೌಲರ್ ಬ್ರೆಟ್ ಲೀ ಅವರು 2007 ರಲ್ಲಿ ಬಾಂಗ್ಲಾದೇಶದ ವಿರುದ್ಧ ಮಾಡಿದರು.

10. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಟಿ20 ವಿಶ್ವಕಪ್‌ನಲ್ಲಿ 41 ವಿಕೆಟ್ ಪಡೆದಿದ್ದಾರೆ.

11. ಟಿ20 ವಿಶ್ವಕಪ್‌ನಲ್ಲಿ ಕನಿಷ್ಠ ಸ್ಕೋರ್ 39 ರನ್ ಆಗಿದೆ, ಇದು 2014 ರಲ್ಲಿ ಶ್ರೀಲಂಕಾ ವಿರುದ್ಧ ನೆದರ್ಲ್ಯಾಂಡ್ಸ್ ಗಳಿಸಿತ್ತು.

ಇದನ್ನೂ ಓದಿ:  Virat Kohli: ಮೈದಾನದಲ್ಲಿ ಹಾರಿ ಒಂದು ಕೈಯಲ್ಲಿ ಕ್ಯಾಚ್ ಹಿಡಿದ ವಿರಾಟ್: ‘ಮಿಂಚಿನ ಆಟ’ದ ವಿಡಿಯೋ ನೋಡಿ

12. 2007 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ T20 ವಿಶ್ವಕಪ್‌ನಲ್ಲಿ ಏಕೈಕ ಬಾಲ್ ಔಟ್ ಆಗಿತ್ತು. ಅಂದು ಒಂದು ಓವರ್ ಎಲಿಮಿನೇಟರ್ ಅಥವಾ ಸೂಪರ್ ಓವರ್ ಆಡಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News