ಇಂದು ನಡೆದ ಟೀಮ್ ಇಂಡಿಯಾದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಕೇವಲ 19 ರನ್‌ಗಳಿಗೆ ಔಟಾಗಿರಬಹುದು. ಆದರೆ ಭಾರತದ ಮಾಜಿ ನಾಯಕ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಆಟದ ಬಣ್ಣವನ್ನು ಬದಲಾಯಿಸಿದರು. ಮೊದಲಿಗೆ, ಅವರು ಮೈದಾನದಲ್ಲಿ ಉತ್ತಮ ಚಾಣಾಕ್ಷತೆಯನ್ನು ತೋರಿಸಿದರು ಎನ್ನಬಹುದು.
ಇದನ್ನೂ ಓದಿ: ನರ್ವಾಲ್, ಸುರೇದಂರ್ ಮಿಂಚಿನ ಆಟ:ಯೋಧಾಸ್‌ಗೆ ಶರಣಾದ ಬೆಂಗಳೂರು ಬುಲ್ಸ್
ಅಂತಿಮ ಓವರ್‌ನಲ್ಲಿ ಆಸ್ಟ್ರೇಲಿಯಾಕ್ಕೆ 11 ರನ್‌ಗಳ ಅಗತ್ಯವಿದ್ದಾಗ, ವಿರಾಟ್ ಕೊಹ್ಲಿ ಲಾಂಗ್-ಆನ್‌ನಲ್ಲಿ ಮತ್ತೊಂದು ಅದ್ಭುತ ಪ್ರಯತ್ನದೊಂದಿಗೆ ಬಂದರು. ಪ್ಯಾಟ್ ಕಮ್ಮಿನ್ಸ್‌ರನ್ನು ಮರಳಿ ಪೆವಿಲಿಯನ್ ಗೆ ಕಳುಹಿಸುವ ಅವರ ಪ್ರಯತ್ನ ಯಶಸ್ವಿಯಾಯಿತು.
VIRAT KOHLI STOP IT!! Takes catch of the tournament.. in a warm up 😂🔥 #T20WorldCup pic.twitter.com/KosXyZw8lm
— Liam Clarke (@Clarkeyy23) October 17, 2022
ಮೊಹಮ್ಮದ್ ಶಮಿ ಎಸೆತಕ್ಕೆ ಕಮ್ಮಿನ್ಸ್ ಬ್ಯಾಟ್ ಬೀಸಿದ್ದರು. ಆದರೆ ಆ ಚೆಂಡನ್ನು ಬೌಂಡರಿ ದಾಟದಂತೆ ತಡೆದ ಕೊಹ್ಲಿ ಲಾಂಗ್ ಆನ್ ಜಿಗಿತದಲ್ಲಿ ಒಂದು ಕೈಯಿಂದ ಕ್ಯಾಚ್ ಹಿಡಿದು, ಕಮ್ಮಿನ್ಸ್ ರನ್ನು ಔಟ್ ಮಾಡಿದರು. ಕ್ಯಾಚ್‌ನ ಅದ್ಭುತವೇನೆಂದರೆ, ಡಗ್-ಔಟ್‌ನಲ್ಲಿ ಕುಳಿತು ಆಸ್ಟ್ರೇಲಿಯಾದ ಆಟಗಾರರು ಸಹ ಕೊಹ್ಲಿಯನ್ನು ಶ್ಲಾಘಿಸಿದರು.
ಅಂತಿಮ ಓವರ್‌ನಲ್ಲಿ ಶಮಿ ಅದ್ಭುತವಾಗಿ ಆಟವಾಡಿದ್ದಾರೆ. ಅಂತಿಮ ಓವರ್‌ನಲ್ಲಿ ಕೇವಲ ನಾಲ್ಕು ರನ್‌ಗಳನ್ನು ಬಿಟ್ಟುಕೊಟ್ಟ ಅವರು ಟೀಂ ಇಂಡಿಯಾದ ಗೆಲುವಿಗೆ ಕಾರಣವಾದರು.
ಇದನ್ನೂ ಓದಿ: IND vs AUS : ಅಭ್ಯಾಸ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ರೋಹಿತ್ : ಇನ್ನೂ ವಿಶ್ವಕಪ್ ಹೇಗೆ?
ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಅವರ ಅರ್ಧಶತಕಗಳ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 186/7 ಸ್ಕೋರ್ ಮಾಡಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ