Shreyas Iyer – Shraddha Kapoor: ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ವಿಫಲರಾದ ಇವರನ್ನು ಮುಂದಿನ ಪಂದ್ಯಗಳಿಗೆ ಕೈ ಬಿಡಲಾಗಿತ್ತು.. 


COMMERCIAL BREAK
SCROLL TO CONTINUE READING

ಇಷ್ಟೇ ಅಲ್ಲ.. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಖಡಕ್‌ ವಾರ್ನಿಂಗ್‌ ಮಧ್ಯವೂ ರಣಜಿ ಟ್ರೋಫಿಯಲ್ಲಿ ಆಡಲು ನಿರಾಕರಿಸಿದ್ದರು.. ಇದರ ಪರಿಣಾಮವಾಗಿ ಬಿಸಿಸಿಐ ತನ್ನ ಕೇಂದ್ರ ಗುತ್ತಿಗೆಯಿಂದ ಶ್ರೇಯಸ್ ಅಯ್ಯರ್‌ ಅವರನ್ನು ಕೈ ಬಿಟ್ಟಿದೆ.. 


ಇದನ್ನೂ ಓದಿ-TATA IPL 2024ರ ಜಾಹೀರಾತಿಗಾಗಿ ಜೊತೆಗೂಡಿದ ಜಿಯೋಸಿನೆಮಾ ಮತ್ತು ಕ್ಯಾಪ್ಟನ್‌ ಕೂಲ್‌, ವಿಶಿಷ್ಟ ದ್ವಿಪಾತ್ರದಲ್ಲಿ ಧೋನಿ


ಕೆರಿಯರ್ ವಿಚಾರದಲ್ಲಿ ಇತ್ತೀಚಿನವರೆಗೂ ಸುದ್ದಿಯಾಗಿದ್ದ ಅಯ್ಯರ್ ಈಗ ವೈಯಕ್ತಿಕ ವಿಚಾರದಲ್ಲೂ ಮುಂಚೂಣಿಗೆ ಬಂದಿದ್ದಾರೆ. ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು ಖ್ಯಾತ ಬಾಲಿವುಡ್ ಹೀರೋಯಿನ್ ಜೊತೆ ಶುರುವಾದ ಸ್ನೇಹ ಪ್ರೀತಿಗೆ ತಿರುಗಿದೆ ಅನ್ನೋದು ಈ ಸುದ್ದಿಯ ಸಾರಾಂಶವಾಗಿದ್ದು.. ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಜೊತೆ ಶ್ರೇಯಸ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ-IPL 2024ರಲ್ಲಿ ವಿರಾಟ್’ಗಿಂತ ಹೆಚ್ಚು ಸಂಭಾವನೆ ಪಡೀತಾರೆ ಈ ಮೂವರು ಆಟಗಾರರು: ಒಬ್ಬ ಕೊಹ್ಲಿಯ ನೆಚ್ಚಿನ ಗೆಳೆಯನೇ…!!


ಈ ಸುದ್ದೊಇಗೆ ಕಾರಣವೇನೆಂದರೇ ಇತ್ತೀಚೆಗೆ ಇವರಿಬ್ಬರು ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದರು.. ಹೀಗಾಗಿ ಇವರಿಬ್ಬರು ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದು, ಮತ್ತೊಬ್ಬರು ಪರಸ್ಪರರ ಸಾಮಾಜಿಕ ಜಾಲತಾಣ ಖಾತೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.. 


ಆದರೆ, ಈ ಸುದ್ದಿಗೆ ಶ್ರೇಯಸ್ ಅಯ್ಯರ್ ಅಥವಾ ಶ್ರದ್ಧಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ, ಇವರಿಬ್ಬರು ಒಟ್ಟಿಗೆ ಹೋಗಿದ್ದಕ್ಕೆ ಯಾವುದೇ ದಾಖಲೆ ಇಲ್ಲ. ಇದು ಕೇವಲ ವದಂತಿ ಎನ್ನಲಾಗುತ್ತಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ