India Win Against Zimbabwe: ಇಂದು ಐಕಾನಿಕ್ ಎಂಸಿಜಿಯಲ್ಲಿ ನಡೆದ ಕೊನೆಯ ಸೂಪರ್ 12 ಘರ್ಷಣೆಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತ್ತು. ಆದರೆ ಈ ಗುರಿ ಬೆನ್ನತ್ತಿದ ಜಿಂಬಾಬ್ವೆ ಹೀನಾಯ ಸೋಲು ಕಂಡಿದೆ.


COMMERCIAL BREAK
SCROLL TO CONTINUE READING

ಟೀಂ ಇಂಡಿಯಾದ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದು ತಂಡದ ಗೆಲುವಿಗೆ ಕಾರಣವಾಗಿದೆ. ಟೀಂ ಇಂಡಿಯಾ ಈಗಾಗಲೇ ಸೆಮಿ ಫೈನಲ್ ಪ್ರವೇಶಿಸಿದೆ.


ಇದನ್ನೂ ಓದಿ: ಟಿ-20 ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ರನ್ ಪೂರೈಸಿದ Suryakumar Yadav: ದಾಖಲೆಗೆ ಎಲ್ಲಿದೆ ಮಿತಿ!


ಇನ್ನು ಈ ಪಂದ್ಯಾವಳಿಯಲ್ಲಿ ಸ್ಟಾರ್ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಮತ್ತೊಂದು ಸೂಪರ್ ಇನ್ನಿಂಗ್ಸ್ ಆಡಿದ್ದಾರೆ. ಕೇವಲ 25 ಎಸೆತಗಳಲ್ಲಿ ಕ್ರಮವಾಗಿ 6 ​​ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡ 61 ರನ್ ಬಾರಿಸಿದ್ದರು. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ 1000 T20I ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇನ್ನೊಂದೆಡೆ ಕೆಎಲ್ ರಾಹುಲ್ ಕೂಡ ಅರ್ಧ ಶತಕ ಬಾರಿಸಿ ಟೀಂ ಇಂಡಿಯಾ ಉತ್ತಮ ಕೊಡುಗೆ ನೀಡಿದರು.


ಇದನ್ನೂ ಓದಿ: T20 World Cup 2022ರಲ್ಲಿ ವಿರಾಟ್ ಕಾರುಬಾರು: ಅಬ್ಬಬ್ಬಾ.. ಕೊಹ್ಲಿ ಹೆಸರಲ್ಲಿದೆ ಇಷ್ಟೊಂದು ದಾಖಲೆಗಳು!


ಆದರೆ ಜಿಂಬಾಬ್ವೆ ತಂಡದ ಪರವಾಗಿ ಅತೀ ಕಳಪೆ ಪ್ರದರ್ಶನ ಕಂಡುಬಂದಿದ್ದು, ಸೆಮಿ ಫೈನಲ್ ಕನಸು ನುಚ್ಚು ನೂರಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.