Ravichandran Ashwin On India vs Zimbabwe : ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ನವೆಂಬರ್ 6 ರಂದು ಅಂದರೆ ನಾಳೆ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಘಾತಕಾರಿ ಹೇಳಿಕೆ ನೀಡಿ ಜಿಂಬಾಬ್ವೆ ತಂಡಕ್ಕೆ ಶಾಕ್ ನೀಡಿದ್ದಾರೆ.
ಅಶ್ವಿನ್ ಹೇಳಿದ್ದು ಹೀಗೆ!
ಭಾರತ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಚಂದ್ರನ್ ಅಶ್ವಿನ್, 'ಟಿ20 ವಿಶ್ವಕಪ್‌ನಲ್ಲಿನ ಯಾವುದೇ ಸ್ಪರ್ಧೆಯಂತೆ, ಈ ಟಿ20 ವಿಶ್ವಕಪ್‌ನಲ್ಲೂ ಇದು ಗೆಲುವಿನ ಪಂದ್ಯವಾಗಿದೆ. ನಾವು ಆಟವನ್ನು ಎದುರು ನೋಡುತ್ತಿದ್ದೇವೆ. ಜಿಂಬಾಬ್ವೆ ತಂಡ ಶ್ರೇಷ್ಠ ಕ್ರಿಕೆಟ್ ಮ್ಯಾಚ್ ಗಳನ್ನು ಆಡಿದೆ. ಅವರು ಉತ್ತಮವಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುತ್ತಾರೆ, ಆದ್ದರಿಂದ ನಾವು ಅದನ್ನು ಗೌರವಿಸುತ್ತೇವೆ. ಆದ್ರೆ, ಅದನ್ನ ನಾವು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ : Virat Kohli: ಬರ್ತ್ ಡೇ ಖುಷಿಯಲ್ಲಿ ಗಬಗಬನೇ ಕೇಕ್ ತಿಂದ ಕೊಹ್ಲಿ: ಫಿಟ್ನೆಸ್ ಮರೆತ್ರಾ ರನ್ ಮಷಿನ್!
ಇಲ್ಲಿಯವರೆಗಿನ ಪಯಣ ಸುಲಭವಾಗಿರಲಿಲ್ಲ
ಇನ್ನು ಈ ಬಗ್ಗೆ ಮಾತನಾಡಿದ ರವಿಚಂದ್ರನ್ ಅಶ್ವಿನ್, 'ನಾವು ಸುಲಭವಾಗಿ ಇಲ್ಲಿಗೆ ತಲುಪಿಲ್ಲ. ನಾವು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿರುದ್ಧ ಕೆಲವು ಕಠಿಣ ಪಂದ್ಯಗಳನ್ನು ಆಡಿದ್ದೇವೆ, ಅದು ಕೊನೆಯವರೆಗೂ ಸಾಗಿದೆ. ಪಂದ್ಯವನ್ನು ವೀಕ್ಷಿಸಿದ ಮತ್ತು ತಮ್ಮ ತಜ್ಞರ ಅಭಿಪ್ರಾಯವನ್ನು ನೀಡುವವರು ಇನ್ನೂ ಕಲಿಯುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಪಂದ್ಯವು ಸಣ್ಣ ಅಂತರದಿಂದ ನಿರ್ಧರಿಸಲ್ಪಡುತ್ತದೆ.
ಮಂಕಾಡಿಂಗ್‌ನಲ್ಲಿ ಮಾತನಾಡಿದ ಅಶ್ವಿನ್
ರವಿಚಂದ್ರನ್ ಅಶ್ವಿನ್ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯಕ್ಕೂ ಮುನ್ನ ಮಂಕಡಿಂಗ್ ಕುರಿತು ಮಾತನಾಡುತ್ತಾ, 'ಇದು ಹೊರಬರಲು ಒಂದು ಮಾರ್ಗವಾಗಿದೆ ಮತ್ತು ಇದು ಕಾನೂನುಬದ್ಧವಾಗಿದೆ. ಈ ಬಗ್ಗೆ ಅನೇಕ ವಾದಗಳನ್ನು ಮಂಡಿಸಲಾಗಿದೆ. ಹೀಗೆ ಯಾರಾದರೂ ಹೊರಗೆ ಹೋದಾಗ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವವರು ಬರುತ್ತಾರೆಈ ಡನು ಹೇಳಿದ್ದಾರೆ.
ಇದನ್ನೂ ಓದಿ : ಶಾಹಿದ್ ಅಫ್ರಿದಿಗೆ ತಕ್ಕ ಉತ್ತರ ನೀಡಿದ ಬಿಸಿಸಿಐ ಚೀಫ್ ರೋಜರ್ ಬಿನ್ನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.