T20 World Cup 2022: ಶ್ರೀಲಂಕಾ ಗೆಲುವಿನ ಮೇಲೆ ನಿಂತಿದ ಆಸ್ಟ್ರೇಲಿಯಾದ ಸೆಮೀಸ್ ಭವಿಷ್ಯ..!

ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಗೆಲುವು ಸಾಧಿಸಿದರೆ ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶಿಸಲಿದೆ.

Written by - Puttaraj K Alur | Last Updated : Nov 5, 2022, 09:39 AM IST
  • ಇಂದು ಬಲಿಷ್ಠ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ರಣರೋಚಕ ಸೆಣಸಾಟ
  • ಆಂಗ್ಲರ ವಿರುದ್ಧ ಶ್ರೀಲಂಕಾ ಗೆಲುವು ಸಾಧಿಸಿದರೆ ಆಸ್ಟ್ರೇಲಿಯಾಗೆ ಸುವರ್ಣಾವಕಾಶ
  • ಲಂಕಾ ಗೆಲುವಿಗಾಗಿ ಪಾರ್ಥಿಸುತ್ತಿರುವ ಆಸೀಸ್ ಆಟಗಾರರು ಮತ್ತು ಅಭಿಮಾನಿಗಳು
T20 World Cup 2022: ಶ್ರೀಲಂಕಾ ಗೆಲುವಿನ ಮೇಲೆ ನಿಂತಿದ ಆಸ್ಟ್ರೇಲಿಯಾದ ಸೆಮೀಸ್ ಭವಿಷ್ಯ..! title=
ಇಂಗ್ಲೆಂಡ್ vs ಶ್ರೀಲಂಕಾ ಸೆಣಸಾಟ

ನವದೆಹಲಿ: ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ಮಧ್ಯಾಹ್ನ 1.30ಕ್ಕೆ ಆರಂಭವಾಗಲಿರುವ ಈ ಪಂದ್ಯದ ಫಲಿತಾಂಶದ ಮೇಲೆಯೇ ಆಸ್ಟ್ರೇಲಿಯಾದ ಸೆಮಿಫೈನಲ್ ಭವಿಷ್ಯ ನಿಂತಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆಸೀಸ್ ತನ್ನ ಸೆಮೀಸ್ ಕನಸನ್ನು ಜೀವಂತವಾಗಿರಿಸಿದೆ.

ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಗೆಲುವು ಸಾಧಿಸಿದರೆ ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶಿಸಲಿದೆ. ಅದೇ ರೀತಿ ಲಂಕಾ ಮತ್ತು ಇಂಗ್ಲೆಂಡ್ ಟೂರ್ನಿಯಿಂದ ಹೊರಬೀಳಲಿವೆ. ಒಂದು ವೇಳೆ ಇಂಗ್ಲೆಂಡ್ ಗೆದ್ದರೆ ಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ನಿರಾಸೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಇಂದಿನ ಪಂದ್ಯವು ತೀವ್ರ ಕುತೂಹಲ ಮೂಡಿಸಿದ್ದು, ರೋಚಕ ಸೆಣಸಾಟದ ನಿರೀಕ್ಷೆ ಇದೆ.

ಇದನ್ನೂ ಓದಿ: Team India : ಸೂರ್ಯಕುಮಾರ್ ಯಾದವ್'ನನ್ನು ಹಾಡಿಹೊಗಳಿದ ಗೌತಮ್ ಗಂಭೀರ್!

ಗ್ರೂಪ್-1ರಲ್ಲಿ ಆಡಿದ 5 ಪಂದ್ಯಗಳ ಪೈಕಿ 3 ಗೆಲುವು ಸಾಧಿಸಿರುವ ನ್ಯೂಜಿಲ್ಯಾಂಡ್ ತಂಡ 7 ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿ(NRR +2.113)ಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಈ 5 ಪಂದ್ಯಗಳ ಪೈಕಿ 1 ಪಂದ್ಯ ರದ್ದಾಗಿದ್ದರಿಂದ ಕವೀಸ್‍ಗೆ 1 ಅಂಕ ನೀಡಲಾಗಿದೆ. ಅದೇ ರೀತಿ ಆಸ್ಟ್ರೇಲಿಯಾ ಸಹ ಆಡಿದ 5 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 1 ಪಂದ್ಯ ರದ್ದಾಗಿದ್ದರಿಂದ 7 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಆಸೀಸ್ ನೆಟ್ ರನ್‍ರೇಟ್‍ -0.173 ಆಗಿರುವುದೇ ದೊಡ್ಡ ಸಮಸ್ಯೆಯಾಗಿದೆ.

ಇನ್ನು ಇಂಗ್ಲೆಂಡ್ ಆಡಿದ 4 ಪಂದ್ಯಗಳ ಪೈಕಿ 2 ಗೆಲುವು ಸಾಧಿಸಿದ್ದು, 1 ಪಂದ್ಯ ರದ್ದಾಗಿದ್ದರಿಂದ 5 ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆದರೆ ಆಂಗ್ಲರ ನೆಟ್‍ ರನ್‍ರೇಟ್ +0.547 ಇರುವುದೇ ಪ್ಲಸ್‍ ಪಾಯಿಂಟ್ ಆಗಿದೆ. ಶ್ರೀಲಂಕಾ ಆಡಿದ 4 ಪಂದ್ಯಗಳ ಪೈಕಿ 2 ಗೆಲುವು, 2 ಸೋಲು ಕಂಡಿದ್ದು, 4 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ + ರನ್‍ರೇಟ್‍ನಿಂದ 2ನೇ ಸ್ಥಾನಕ್ಕೇರಿ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಪಡೆಯಲಿದೆ. ಅದೇ ರೀತಿ – ರನ್‍ರೇಟ್ ಹೊಂದಿರುವ ಆಸ್ಟ್ರೇಲಿಯಾ ನಿರಾಸೆ ಅನುಭವಿಸಲಿದೆ.

ಇದನ್ನೂ ಓದಿ: Virat Kohli : ಬೆಸ್ಟ್ ಫಾರ್ಮ್‌ಗೆ ಮರಳಿದ 'ಕಿಂಗ್ ಕೊಹ್ಲಿ' : ಈ ಪವಾಡವಾಗಿದ್ದು ಹೀಗೆ!

ಹೀಗಾಗಿ ಆಸೀಸ್ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಇಂದು ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ಸೋಲಿಸಿ ಶ್ರೀಲಂಕಾ ಜಯಭೇರಿ ಬಾರಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಲಕ್ ಚೆನ್ನಾಗಿದ್ದು ಲಂಕಾ ಗೆದ್ದರೆ ಆಸ್ಟ್ರೇಲಿಯಾದ ಮೊಗದಲ್ಲಿ ಮಂದಹಾಸ ಮೂಡಲಿದೆ, ಬ್ಯಾಡ್‍ಲಕ್‍ ಇದ್ದರೆ ತವರು ನೆಲದಲ್ಲಿಯೇ ಆಸ್ಟ್ರೇಲಿಯಾ ದೊಡ್ಡ ನಿರಾಸೆ ಅನುಭವಿಸಲಿದೆ. ಹೀಗಾಗಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯವು ರೋಚಕ ಸೆಣಸಾಟಕ್ಕೆ ಸಾಕ್ಷಿಯಾಗುವ ಸಾಧ‍್ಯತೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News