ODI World Cup, Indian Cricket Team: ಭಾರತ ತಂಡವು ಈ ವರ್ಷ ಅಕ್ಟೋಬರ್-ನವೆಂಬರ್‌ ನಲ್ಲಿ ODI ವಿಶ್ವಕಪ್ (ODI - World Cup 2023) ಆಡಬೇಕಾಗಿದೆ. ಟೀಂ ಇಂಡಿಯಾ ಆಟಗಾರರು ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಅಂತಿಮ (ಡಬ್ಲ್ಯುಟಿಸಿ ಫೈನಲ್-2023) ಪಂದ್ಯವನ್ನು ಆಡುತ್ತಿದ್ದಾರೆ. ಇದರಲ್ಲಿ ಅವರು ಆಸ್ಟ್ರೇಲಿಯಾವನ್ನು ಎದುರಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಒಬ್ಬ ಪ್ಲೇಯರ್ ತನ್ನ ಅದ್ಭುತ ಶಕ್ತಿ ಪ್ರದರ್ಶನ ಮಾಡಿದ್ದು, ಈ ಮೂಲಕ ಇಬ್ಬರು ಆಟಗಾರರ ಸ್ಥಾನವನ್ನು ತುಂಬುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾನೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಬಳಿಕ ಮದುವೆಗೂ ಮೊದಲೇ “ತಂದೆಯಾಗುತ್ತಿದ್ದೇನೆ” ಎಂದು ಘೋಷಿಸಿದ ಸ್ಟಾರ್ ಕ್ರಿಕೆಟಿಗ! ಯಾರಾತ?


ಲಂಡನ್‌ ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟ್ರಾವಿಸ್ ಹೆಡ್ (163) ಮತ್ತು ಸ್ಟೀವ್ ಸ್ಮಿತ್ (121) ಅವರ ಅಮೋಘ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಗಳಿಸಿತು. ಹೆಡ್ 174 ಎಸೆತಗಳಲ್ಲಿ 25 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು. ಸ್ಮಿತ್ 268 ಎಸೆತಗಳಲ್ಲಿ 19 ಬೌಂಡರಿಗಳ ಸಹಾಯದಿಂದ 121 ರನ್ ಗಳಿಸಿದರು. ಟೀಂ ಇಂಡಿಯಾ ಪರ ವೇಗಿ ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ 2-2 ವಿಕೆಟ್ ಪಡೆದರು. ಆಲ್ ರೌಂಡರ್ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.


ನಾವಿಂದು ಮಾತನಾಡುತ್ತಿರುವುದು ವಿಕೆಟ್ ಕೀಪರ್ ಶ್ರೀಕರ್ ಭರತ್ (ಕೆಎಸ್ ಭರತ್) ಬಗ್ಗೆ. ಆಸ್ಟ್ರೇಲಿಯದ 3 ಬ್ಯಾಟ್ಸ್‌ ಮನ್‌ಗಳನ್ನು ಪೆವಿಲಿಯನ್‌ ಗೆ ಕಳುಹಿಸುವಲ್ಲಿ ಭರತ್ ಕೊಡುಗೆ ನೀಡಿದ್ದಾರೆ. ಓಪನರ್ ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ ಹೊರತುಪಡಿಸಿ, ಶತಕವೀರ ಟ್ರಾವಿಸ್ ಹೆಡ್ ಕ್ಯಾಚ್ ಪಡೆದಿದ್ದಾರೆ.


29 ವರ್ಷದ ಶ್ರೀಕರ್ ಭರತ್ ಇನ್ನೂ ODI ಮತ್ತು T20 ಅಂತರಾಷ್ಟ್ರೀಯ ಸ್ವರೂಪಗಳಲ್ಲಿ ಪಾದಾರ್ಪಣೆ ಮಾಡಿಲ್ಲ, ಆದರೆ ಅವರು ಆಯ್ಕೆದಾರರು ಮತ್ತು ನಾಯಕ ರೋಹಿತ್ ಅವರ ಮೆಚ್ಚುಗೆಗೆ ಪಾತ್ರವಾದರೆ, ಅದಕ್ಕೂ ಎಂಟ್ರಿಕೊಡಬಹುದು. ಸದ್ಯ ದೇಶೀಯ ಕ್ರಿಕೆಟ್‌ನಲ್ಲಿ ಆಂಧ್ರಪ್ರದೇಶವನ್ನು ಪ್ರತಿನಿಧಿಸುತ್ತಾರೆ. ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 9 ಶತಕ ಮತ್ತು 27 ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. ಟ್ರಿಪಲ್ ಶತಕ ಕೂಡ ಅವರ ಹೆಸರಿನಲ್ಲಿದೆ.


ಇದನ್ನೂ ಓದಿ:ಹೆಸರಿಗೆ ಇವರು ದಿಗ್ಗಜರು… ಆದ್ರೆ ಈ ನಾಲ್ವರಿಂದ ಟೆಸ್ಟ್ ಇತಿಹಾಸದಲ್ಲೇ ಕಳಪೆ ದಾಖಲೆ ಬರೆಯಿತು Team India!


ಕೆಎಸ್ ಭರತ್ ವಿಶ್ವಕಪ್ ನಲ್ಲಿ ಆಡಿದರೆ ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಅವರ ಸ್ಥಾನಕ್ಕೆ ಕುತ್ತು ಬರುವುದು ಖಂಡಿತ. ಇದುವರೆಗೆ ಪಂತ್ ಮೈದಾನಕ್ಕೆ ಮರಳುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಮತ್ತೊಂದೆಡೆ ಕೆಎಲ್ ರಾಹುಲ್ ಕೂಡ ಶಸ್ತ್ರಚಿಕಿತ್ಸೆಯ ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಿರುವಾಗ ಈ ಆಟಗಾರರಿಗೆ ಸರಿಸಮಾನವಾಗಿ ನಿಲ್ಲಬಲ್ಲ ಆಟಗಾರರಲ್ಲಿ ಭರತ್ ಕೂಡ ಒಬ್ಬರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ