ಹಾರ್ದಿಕ್ ಪಾಂಡ್ಯ ಬಳಿಕ ಮದುವೆಗೂ ಮೊದಲೇ “ತಂದೆಯಾಗುತ್ತಿದ್ದೇನೆ” ಎಂದು ಘೋಷಿಸಿದ ಸ್ಟಾರ್ ಕ್ರಿಕೆಟಿಗ! ಯಾರಾತ?

England Cricketer Bairstow: ಇಂಗ್ಲೆಂಡ್‌ ನ ಸ್ಟಾರ್ ಬ್ಯಾಟ್ಸ್‌ ಮನ್ ಜಾನಿ ಬೈರ್‌ಸ್ಟೋವ್ ಮದುವೆಗೂ ಮುನ್ನವೇ ತಂದೆಯಾದ ಆಟಗಾರ. ಇವರು ಕೆಲ ಸಮಯದ ಹಿಂದೆ ಗಾಯಗೊಂಡ ಕಾರಣ ಚಿಕಿತ್ಸೆ ಪಡೆಯುತ್ತಿದ್ದರು, ಇದೀಗ ತಂಡಕ್ಕೆ ಮರಳಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಅವರು, ಇನ್‌ ಸ್ಟಾಗ್ರಾಮ್ ಸ್ಟೋರಿ ಮೂಲಕ ತಂದೆಯಾಗುತ್ತಿರುವ ಶುಭ ಸುದ್ದಿಯನ್ನು ನೀಡಿದ್ದಾರೆ.

Written by - Bhavishya Shetty | Last Updated : Jun 9, 2023, 11:08 AM IST
    • ಹಾರ್ದಿಕ್ ಪಾಂಡ್ಯ ಅವರಂತೆ ಈಗ ಮತ್ತೊಬ್ಬ ಅಂತಾರಾಷ್ಟ್ರೀಯ ಆಟಗಾರ ಮದುವೆಗೂ ಮುನ್ನವೇ ತಂದೆಯಾಗಿದ್ದಾರೆ
    • ಪೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಈ ಶುಭ ಸುದ್ದಿ ನೀಡಿದ್ದಾರೆ.
    • ಇಂಗ್ಲೆಂಡ್‌ ನ ಸ್ಟಾರ್ ಬ್ಯಾಟ್ಸ್‌ ಮನ್ ಜಾನಿ ಬೈರ್‌ಸ್ಟೋವ್ ಮದುವೆಗೂ ಮುನ್ನವೇ ತಂದೆಯಾದ ಆಟಗಾರ
ಹಾರ್ದಿಕ್ ಪಾಂಡ್ಯ ಬಳಿಕ ಮದುವೆಗೂ ಮೊದಲೇ “ತಂದೆಯಾಗುತ್ತಿದ್ದೇನೆ” ಎಂದು ಘೋಷಿಸಿದ ಸ್ಟಾರ್ ಕ್ರಿಕೆಟಿಗ! ಯಾರಾತ? title=
England Cricketer Bairstow

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಮೈದಾನದಲ್ಲಿ ಎಷ್ಟು ಪ್ರಸಿದ್ಧಿ ಪಡೆದಿದ್ದಾರೋ, ಅಷ್ಟೇ ಪ್ರಸಿದ್ಧಿಯನ್ನು ತಮ್ಮ ವೈಯಕ್ತಿಕ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ. ನತಾಶಾ ಮತ್ತು ಹಾರ್ದಿಕ್ ಪಾಂಡ್ಯ ದಂಪತಿ ತಮ್ಮ ಮದುವೆಗೂ ಮುಂಚಿತವಾಗಿ ಮಗುವಿಗೆ ಪೋಷಕರಾದವರು. ಇವರ ಮಗನ ಹೆಸರು ಅಗಸ್ತ್ಯ. ಜುಲೈ 30, 2020 ರಂದು ಜನಿಸಿದನು.

ಇದನ್ನೂ ಓದಿ: ಶಾಸಕರಿಗೆ ಲೋಕಸಭೆ ಚುನಾವಣೆಯ ಗುರಿ ನೀಡುವ‌ ಕುರಿತು ಚರ್ಚೆ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇನ್ನು ಹಾರ್ದಿಕ್ ಪಾಂಡ್ಯ ಅವರಂತೆ ಈಗ ಮತ್ತೊಬ್ಬ ಅಂತಾರಾಷ್ಟ್ರೀಯ ಆಟಗಾರ ಮದುವೆಗೂ ಮುನ್ನವೇ ತಂದೆಯಾಗಿದ್ದಾರೆ. ಈ ಆಟಗಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಈ ಶುಭ ಸುದ್ದಿ ನೀಡಿದ್ದಾರೆ.

ಇಂಗ್ಲೆಂಡ್‌ ನ ಸ್ಟಾರ್ ಬ್ಯಾಟ್ಸ್‌ ಮನ್ ಜಾನಿ ಬೈರ್‌ಸ್ಟೋವ್ ಮದುವೆಗೂ ಮುನ್ನವೇ ತಂದೆಯಾದ ಆಟಗಾರ. ಇವರು ಕೆಲ ಸಮಯದ ಹಿಂದೆ ಗಾಯಗೊಂಡ ಕಾರಣ ಚಿಕಿತ್ಸೆ ಪಡೆಯುತ್ತಿದ್ದರು, ಇದೀಗ ತಂಡಕ್ಕೆ ಮರಳಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಅವರು, ಇನ್‌ ಸ್ಟಾಗ್ರಾಮ್ ಸ್ಟೋರಿ ಮೂಲಕ ತಂದೆಯಾಗುತ್ತಿರುವ ಶುಭ ಸುದ್ದಿಯನ್ನು ನೀಡಿದ್ದಾರೆ.

ಜಾನಿ ಬೈರ್‌ಸ್ಟೋವ್ ಇನ್‌ ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹೀಗೆ ಬರೆದಿದ್ದಾರೆ; “ನನ್ನ ಗೆಳತಿ ಮತ್ತು ನಾನು 'ಎಡ್ವರ್ಡ್ ಬೈರ್‌ಸ್ಟೋ' ಅವರಿಗೆ ಜನ್ಮ ನೀಡಿದ್ದೇವೆ. ಈ ಒಳ್ಳೆಯ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ” ಎಂದು ಹೇಳಿದ್ದಾರೆ.

ಜಾನಿ ಬೈರ್‌ಸ್ಟೋ ಹಂಚಿಕೊಂಡ ಫೋಟೋದಲ್ಲಿ, ತನ್ನ ಮಗುವನ್ನು ಬೇಬಿ ಚೇರ್ ನಲ್ಲಿ ಕುಳ್ಳಿರಿಸಿಕೊಂಡು ಹೊರಗಡೆ ಸುತ್ತಾಡುತ್ತಿರುವುದನ್ನು ಕಾಣಬಹುದು.  

ಇದನ್ನೂ ಓದಿ: Crime News: ಟ್ಯಾಕ್ಟರ್ ಆರ್ಭಟಕ್ಕೆ ಪುಟ್ಟ ಕಂದಮ್ಮ ಬಲಿ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಸರಣಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಆಶಸ್ 2023 ಜೂನ್ 16 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಜಾನಿ ಬೈರ್‌ಸ್ಟೋವ್ ಇಂಗ್ಲೆಂಡ್ ತಂಡದ ಭಾಗವಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News