ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿಕೆಯೊಂದು  ದೊಡ್ಡ ಸಂಚಲನ ಮೂಡಿಸಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ನಾಯಕತ್ವದ ಟಿ-20 ತಂಡವು ರೋಹಿತ್ ಶರ್ಮಾ ನಾಯಕತ್ವದ ಹಿರಿಯ ಟೀಂ ಇಂಡಿಯಾಕ್ಕಿಂತಲೂ ಉತ್ತಮವಾಗಿ ಕಾಣುತ್ತಿದೆ ಎಂದ ರವಿಶಾಸ್ತ್ರಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಪಾಂಡ್ಯ ಅತ್ಯುತ್ತಮ ನಾಯಕತ್ವ ಗುಣಗಳನ್ನು ಪ್ರದರ್ಶಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಭಾರತಕ್ಕೆ 1-0 ಅಂತರದ ಜಯ ತಂದುಕೊಟ್ಟರು.


ರೋಹಿತ್‌ಗಿಂತ ಪಾಂಡ್ಯ ಟೀಂ ಉತ್ತಮವಾಗಿದೆ


ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕೋಚ್ ರವಿಶಾಸ್ತ್ರಿ ದೊಡ್ಡ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಟಿ-20 ತಂಡದ ಫೀಲ್ಡಿಂಗ್ ಮಟ್ಟ ಹಲವು ಯುವ ಆಟಗಾರರ ಸೇರ್ಪಡೆಯಿಂದ ಉತ್ತಮವಾಗಿದೆ ಎಂದು ಹೇಳಿದ್ದಾರೆ. ‘ಹಾರ್ದಿಕ್ ಪಾಂಡ್ಯ ಅವರ ಈ ತಂಡದಲ್ಲಿ ಯುವ ಆಟಗಾರರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಇದು ಖಂಡಿತವಾಗಿಯೂ ಫೀಲ್ಡಿಂಗ್ ಮಟ್ಟವನ್ನು ಸುಧಾರಿಸಿದೆ’ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Lionel Messi In Shock: ಲಿಯೋನೆಲ್ ಮೆಸ್ಸಿಗೆ ಆಘಾತ ನೀಡಿದ ಸೌದಿ ಅರೇಬಿಯಾ: ಬದಲಾಯಿಸಲಾಗದ ಇತಿಹಾಸಕ್ಕೆ ಬ್ರೇಕ್!


ಶಾಸ್ತ್ರಿ ಹೇಳಿಕೆಯಿಂದ ತಲ್ಲಣ  


ಮಾಜಿ ಕೋಚ್ ರವಿಶಾಸ್ತ್ರಿ ಪ್ರಕಾರ, ‘ಹಾರ್ದಿಕ್ ಪಾಂಡ್ಯರ ಟಿ-20 ತಂಡವನ್ನು 2ನೇ ದರ್ಜೆಯ ತಂಡವೆಂದು ಕರೆಯಲಾಗುವುದಿಲ್ಲ. ಏಕೆಂದರೆ ಇದರಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಇರುವುದಿಲ್ಲ. ಇದಲ್ಲದೇ ತಂಡದಲ್ಲಿ ಹಲವು ಅಪಾಯಕಾರಿ ಆಟಗಾರರಿದ್ದಾರೆ. 2022ರ ಟಿ-20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಅವರಂತಹ ಹಿರಿಯ ಆಟಗಾರರ ಉಪಸ್ಥಿತಿಯಿಂದಾಗಿ ಫೀಲ್ಡಿಂಗ್ ಮಟ್ಟವು ಸ್ವಲ್ಪ ದುರ್ಬಲವಾಗಿತ್ತು’ ಅಂತಾ ಹೇಳಿದ್ದಾರೆ.


ಹಾರ್ದಿಕ್ ಪಾಂಡ್ಯ ಆಕ್ರಮಣಕಾರಿ ನಾಯಕ  


ಹಾರ್ದಿಕ್ ಪಾಂಡ್ಯ ಐಪಿಎಲ್ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ನಾಯಕ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ-20 ವಿಶ್ವಕಪ್‌ನಲ್ಲಿ ಭಾರತದ ಸೆಮಿಫೈನಲ್ ಸೋಲಿನ ನಂತರ ಪಾಂಡ್ಯರನ್ನು ನಾಯಕರನ್ನಾಗಿ ಮಾಡಲಾಯಿತು. ಹಾರ್ದಿಕ್ ನಾಯಕರಾಗಿ ಮುಂದುವರಿಯುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಆತ ಆಕ್ರಮಣಕಾರಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ತಂಡವನ್ನು ರಕ್ಷಣಾತ್ಮಕ ರೀತಿಯಲ್ಲಿ ಮುನ್ನಡೆಸುವುದು ಮತ್ತು ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವುದು ಪಾಂಡ್ಯರ ನಾಯಕತ್ವದ ಅತ್ಯುತ್ತಮ ಗುಣಗಳಾಗಿವೆ.  


ಇದನ್ನೂ ಓದಿ: Virat Kohli: ಈ ಸ್ಟಾರ್ ಆಟಗಾರನಿಂದ ವಿರಾಟ್ ಕೊಹ್ಲಿಗೆ ಬೆದರಿಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.