India clinched T20I series against New Zealand: ಇಂದು ನೇಪಿಯರ್ ಮೈದಾನದಲ್ಲಿ ನಡೆದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಮಳೆರಾಯ ಅಡ್ಡಿ ಮಾಡಿದ್ದು, ಡಿಎಲ್ ಎಸ್ ಸ್ಕೋರ್ ಆಧಾರದಲ್ಲಿ ಫಲಿತಾಂಶವನ್ನು ಘೋಷಿಸಲಾಗಿದೆ. ಸದ್ಯ ಟೀಂ ಇಂಡಿಯಾ 1-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  FIFA World Cup 2022: FIFA ಲೈವ್ ವರದಿ ಮಾಡುತ್ತಿದ್ದ ಪತ್ರಕರ್ತೆಯ ಬ್ಯಾಗ್ ಕಳ್ಳತನ: ದೂರು ಕೊಡಲು ಹೋದಾಕೆಗೆ ಕಾದಿತ್ತು ಆಶ್ಚರ್ಯ!


ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಇನ್ನು 160 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್ ಟೀಂ ಇಂಡಿಯಾವನ್ನು ಕಟ್ಟಿ ಹಾಕಲು ಮುಂದಾಗಿತ್ತು. ಆದರೆ ಮೊದಲಾರ್ಧದಲ್ಲಿಯೇ ಮಳೆ ಬಂದು ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.


ಭಾರತವು ಇಶಾನ್ ಕಿಶನ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 161 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ಟೀಂ ಇಂಡಿಯಾ ಕೊಂಚ ಎಡವಿತ್ತು. ಮೊಹಮ್ಮದ್ ಸಿರಾಜ್ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು.


ನ್ಯೂಜಿಲೆಂಡ್‌ ಪರವಾಗಿ ಡೆವೊನ್ ಕಾನ್ವೆ ಮತ್ತು ಗ್ಲೆನ್ ಫಿಲಿಪ್ಸ್ 50 ರನ್ ಬಾರಿಸಿದರು. ಫಿನ್ ಅಲೆನ್ ಅವರನ್ನು ಅರ್ಶ್‌ದೀಪ್ ಸಿಂಗ್ ಔಟ್ ಮಾಡಿದ್ದು, ನ್ಯೂಜಿಲ್ಯಾಂಡ್ ಗೆ ಆರಂಭಿಕ ಆಘಾತ ನೀಡಿದರು. ಇನ್ನೊಂದೆಡೆ ಸಿರಾಜ್ ಮಾರ್ಕ್ ಚಾಪ್‌ಮನ್ ಅವರನ್ನು ಔಟ್ ಮಾಡಿದರು.


ಇದನ್ನೂ ಓದಿ: Ind Vs NZ Final T20: ಇಂಡೋ-ನ್ಯೂಜಿಲ್ಯಾಂಡ್ ಅಂತಿಮ ಹಣಾಹಣಿಗೆ ವರುಣನ ಅಡ್ಡಿ: ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ


ಇದಕ್ಕೂ ಮುನ್ನ ನೇಪಿಯರ್‌ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ವಾಷಿಂಗ್ಟನ್ ಸುಂದರ್ ಬದಲಿಗೆ ಹರ್ಷಲ್ ಪಟೇಲ್ ಅವರನ್ನು ಭಾರತವು ತನ್ನ ಪ್ಲೇಯಿಂಗ್ XI ನಲ್ಲಿ ಒಂದು ಬದಲಾವಣೆ ಮಾಡಿತ್ತು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.