Ind Vs NZ Final T20: ಇಂಡೋ-ನ್ಯೂಜಿಲ್ಯಾಂಡ್ ಅಂತಿಮ ಹಣಾಹಣಿಗೆ ವರುಣನ ಅಡ್ಡಿ: ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ

Ind Vs NZ Final T20: ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಎರಡನೇ ಟಿ20ಯಲ್ಲಿ ಭಾರತ ಗೆಲುವು ಸಾಧಿಸಿದೆ. ಕೊನೆಯ ಪಂದ್ಯವಾಗಿದ್ದರೂ ಎರಡೂ ತಂಡಗಳು ಮೂರನೇ ಟಿ20 ಗೆಲ್ಲಲು ಕಣಕ್ಕೆ ಇಳಿದಿದೆ. ಈ ಪಂದ್ಯ ನೇಪಿಯರ್ ನಲ್ಲಿ ನಡೆಯುತ್ತಿದೆ.

Written by - Bhavishya Shetty | Last Updated : Nov 22, 2022, 01:28 PM IST
    • ಭಾರತ-ನ್ಯೂಜಿಲೆಂಡ್ ಅಂತಿಮ T20 ಪಂದ್ಯ
    • ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಕಾತುರ
    • ಇನ್ನೊಂದೆಡೆ ಟೀಂ ಇಂಡಿಯಾ ಈಗಾಗಲೆ ಒಂದು ಪಂದ್ಯ ಗೆದ್ದು ಮುನ್ನಡೆ ಸಾಧಿಸಿದೆ
Ind Vs NZ Final T20: ಇಂಡೋ-ನ್ಯೂಜಿಲ್ಯಾಂಡ್ ಅಂತಿಮ ಹಣಾಹಣಿಗೆ ವರುಣನ ಅಡ್ಡಿ: ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ title=
Cricket News

Ind Vs NZ Squad: ಭಾರತ-ನ್ಯೂಜಿಲೆಂಡ್ ತಂಡಗಳು ಅಂತಿಮ T20 ಪಂದ್ಯವನ್ನಾಡುತ್ತಿದ್ದು, ಈಗಾಗಲೇ ನ್ಯೂಜಿಲ್ಯಾಂಡ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಂಡಿದೆ. ಇನ್ನೊಂದೆಡೆ ಟೀಂ ಇಂಡಿಯಾ ಈಗಾಗಲೆ ಒಂದು ಪಂದ್ಯ ಗೆದ್ದು ಮುನ್ನಡೆ ಸಾಧಿಸಿದ್ದು, ಈ ಪಂದ್ಯದಲ್ಲೂ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ.

ಇದನ್ನೂ ಓದಿ:  FIFA World Cup 2022: ಕಾಲೇ ಇಲ್ಲದ ವ್ಯಕ್ತಿ ಕಾಲ್ಚೆಂಡಿನ ಲೋಕದ ರಾಯಭಾರಿ!

ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಎರಡನೇ ಟಿ20ಯಲ್ಲಿ ಭಾರತ ಗೆಲುವು ಸಾಧಿಸಿದೆ. ಕೊನೆಯ ಪಂದ್ಯವಾಗಿದ್ದರೂ ಎರಡೂ ತಂಡಗಳು ಮೂರನೇ ಟಿ20 ಗೆಲ್ಲಲು ಕಣಕ್ಕೆ ಇಳಿದಿದೆ. ಈ ಪಂದ್ಯ ನೇಪಿಯರ್ ನಲ್ಲಿ ನಡೆಯುತ್ತಿದೆ.

ಸದ್ಯ ಈ ಪಂದ್ಯದಲ್ಲಿ ಬದಲಾವಣೆಯೊಂದಿಗೆ ಟೀಂ ಇಂಡಿಯಾ ಕಣಕ್ಕೆ ಇಳಿದಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ಹರ್ಷಲ್ ಪಟೇಲ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ವೈದ್ಯಕೀಯ ನೇಮಕಾತಿಯಿಂದಾಗಿ ಕಿವೀಸ್ ನಿಯಮಿತ ನಾಯಕ ವಿಲಿಯಮ್ಸನ್ ಈ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಈಗಾಗಲೆ ಪಂದ್ಯ ಆರಂಭವಾಗಿದ್ದು, ನ್ಯೂಜಿಲ್ಯಾಂಡ್ 2 ವಿಕೆಟ್ ನಷ್ಟಕ್ಕೆ 49 ರನ್ ಕಲೆ ಹಾಕಿದೆ. ಭಾರತ ಫೀಲ್ಡಿಂಗ್ ಮಾಡುತ್ತಿದ್ದು, ಸದ್ಯ ಉತ್ತಮವಾಗಿಯೇ ಆಟವಾಡುತ್ತಿದೆ.

ಕಣಕ್ಕಿಳಿದಿರುವ ಆಟಗಾರರು ಇವರೇ:

ಭಾರತ: ಇಶಾನ್ ಕಿಶನ್, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್

ಇದನ್ನೂ ಓದಿ: ಮತ್ತೆ ಬಂದ ಮೃತ ವ್ಯಕ್ತಿ…ದೆವ್ವದ ಜೊತೆ ಮಾತನಾಡಿದ ಸಿಬ್ಬಂದಿ..ಕ್ಯಾಮರಾದಲ್ಲಿ ವಿಡಿಯೋ ಸೆರೆ

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಇಶ್ ಸೋಧಿ, ಟಿಮ್ ಸೌಥಿ (ನಾಯಕ), ಲ್ಯೂಕಿ ಫರ್ಗುಸನ್.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News