FIFA World Cup 2022: FIFA ಲೈವ್ ವರದಿ ಮಾಡುತ್ತಿದ್ದ ಪತ್ರಕರ್ತೆಯ ಬ್ಯಾಗ್ ಕಳ್ಳತನ: ದೂರು ಕೊಡಲು ಹೋದಾಕೆಗೆ ಕಾದಿತ್ತು ಆಶ್ಚರ್ಯ!

FIFA World Cup Qatar 2022:  ಮಿರರ್ ವರದಿ ಪ್ರಕಾರ, ಅಧಿಕಾರಿಗಳ ಬಳಿ ಸಹಾಯ ಕೇಳಲು ಹೋದ ಪತ್ರಕರ್ತೆಗೆ ಅವರು ನೀಡಿದ ಪ್ರತಿಕ್ರಿಯೆ ಕಂಡು ಆಶ್ಚರ್ಯವಾಗಿದೆ. ಇಡೀ ಘಟನೆಯನ್ನು ವಿವರಿಸಿದ ಪತ್ರಕರ್ತೆ, 'ನಾನು ಪೊಲೀಸ್ ಠಾಣೆಗೆ ಹೋದೆ. ಅಲ್ಲಿ ಸಾಂಸ್ಕೃತಿಕ ಭಿನ್ನತೆಗಳು ಪ್ರಾರಂಭವಾದವು.

Written by - Bhavishya Shetty | Last Updated : Nov 22, 2022, 02:13 PM IST
    • ಅರ್ಜೆಂಟೀನಾದ ಪತ್ರಕರ್ತೆಯೊಬ್ಬರ ಬ್ಯಾಗ್ ಕಳ್ಳತನ
    • 2022 ರ ಫಿಫಾ ವಿಶ್ವಕಪ್ ಅನ್ನು ವರದಿ ಮಾಡುವಾಗ ನಡೆದ ಘಟನೆ
    • ಪೊಲೀಸರ ಬಳಿ ತೆರಳಿ ಸಹಾಯ ಕೇಳಿದ ಆಕೆಗೆ ಕಾದಿತ್ತು ಶಾಕ್
FIFA World Cup 2022: FIFA ಲೈವ್ ವರದಿ ಮಾಡುತ್ತಿದ್ದ ಪತ್ರಕರ್ತೆಯ ಬ್ಯಾಗ್ ಕಳ್ಳತನ: ದೂರು ಕೊಡಲು ಹೋದಾಕೆಗೆ ಕಾದಿತ್ತು ಆಶ್ಚರ್ಯ!  title=
Journalist's bag stolen

FIFA World Cup Qatar 2022: ಅರ್ಜೆಂಟೀನಾದ ಪತ್ರಕರ್ತೆಯೊಬ್ಬರು ಕತಾರ್‌ನಲ್ಲಿ ನಡೆಯುತ್ತಿರುವ 2022 ರ ಫಿಫಾ ವಿಶ್ವಕಪ್ ಅನ್ನು ವರದಿ ಮಾಡುವಾಗ ಅವರ ಕೈ ಚೀಲವನ್ನು ಯಾರೋ ಕಳ್ಳತನ ಮಾಡಿದ್ದಾರೆ. ಡೊಮಿನಿಕ್ ಮೆಟ್ಜರ್ ಎಂಬ ಪತ್ರಕರ್ತೆ ನೇರ ಪ್ರಸಾರದಲ್ಲಿ ನಿರತರಾಗಿದ್ದಾಗ ಆಕೆಯ ಕೈಚೀಲವನ್ನು ಕದ್ದಿದ್ದಾರೆ. ಇದಾದ ಬಳಿಕ ಪೊಲೀಸರ ಬಳಿ ತೆರಳಿ ಸಹಾಯ ಕೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಸೋಲಿನಿಂದ ಮನನೊಂದು ನಾಯಕತ್ವ ತ್ಯಜಿಸಿದ ಆಟಗಾರ

ಮಿರರ್ ವರದಿ ಪ್ರಕಾರ, ಅಧಿಕಾರಿಗಳ ಬಳಿ ಸಹಾಯ ಕೇಳಲು ಹೋದ ಪತ್ರಕರ್ತೆಗೆ ಅವರು ನೀಡಿದ ಪ್ರತಿಕ್ರಿಯೆ ಕಂಡು ಆಶ್ಚರ್ಯವಾಗಿದೆ. ಇಡೀ ಘಟನೆಯನ್ನು ವಿವರಿಸಿದ ಪತ್ರಕರ್ತೆ, 'ನಾನು ಪೊಲೀಸ್ ಠಾಣೆಗೆ ಹೋದೆ. ಅಲ್ಲಿ ಸಾಂಸ್ಕೃತಿಕ ಭಿನ್ನತೆಗಳು ಪ್ರಾರಂಭವಾದವು. ಪೋಲೀಸರು ನನಗೆ ಹೀಗೆ ಹೇಳಿದರು: ನಾವು ಎಲ್ಲೆಡೆ ಹೈಟೆಕ್ ಕ್ಯಾಮೆರಾಗಳನ್ನು ಇಟ್ಟಿದ್ದೇವೆ. ನಾವು ಮುಖ ಗುರುತಿಸುವಿಕೆಯೊಂದಿಗೆ ಕಳ್ಳನನ್ನು ಪತ್ತೆ ಮಾಡಲಿದ್ದೇವೆ. ನಿಮಗೆ ಯಾವ ನ್ಯಾಯ ಬೇಕು?” ಎಂದು ಗೊಂದಲಮಯ ಪ್ರಶ್ನೆಯನ್ನು ಕೇಳಿದರು.

ಡೊಮಿನಿಕ್ ಮೆಟ್ಜರ್ ಹೆಚ್ಚಿನ ಸ್ಪಷ್ಟೀಕರಣವನ್ನು ಕೇಳಿದಾಗ, ಪೊಲೀಸರು, 'ನಿಮಗೆ ಯಾವ ನ್ಯಾಯ ಬೇಕು? ನಾವು ಅವನನ್ನು ಶಿಕ್ಷಿಸಬೇಕೆಂದು ನೀವು ಬಯಸುತ್ತೀರಾ? ಅವನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ನೀವು ಬಯಸುತ್ತೀರಾ? ಆತನನ್ನು ಗಡಿಪಾರು ಮಾಡಬೇಕೆ?' ಎಂದರು. ಅದಕ್ಕೆ ಡೊಮಿನಿಕ್ ಮೆಟ್ಜ್ಗರ್ ತನ್ನ ಕಾಣೆಯಾದ ವಸ್ತುಗಳನ್ನು ಮತ್ತೆ ಪಡೆಯಲು ಸಹಾಯ ಮಾಡಲು ತಂಡವನ್ನು ವಿನಂತಿಸಿದರು.  

Marca.com ನಲ್ಲಿನ ವರದಿಯ ಪ್ರಕಾರ, ಪತ್ರಕರ್ತೆ ತನ್ನ ಅನುಭವವನ್ನು ಟಿವಿಯಲ್ಲಿ ಹಂಚಿಕೊಂಡಿದ್ದಾರೆ. 'ನಾವು ನೇರ ಪ್ರಸಾರ ಮಾಡುವಾಗ ನನ್ನ ಕೈಚೀಲವನ್ನು ಕದ್ದಿದ್ದಾರೆ. ವರದಿ ಸಲ್ಲಿಸಲು ಪೊಲೀಸರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ಬ್ಯಾಗ್‌ನಲ್ಲಿರುವ ದಾಖಲೆಗಳು ಮತ್ತು ಕಾರ್ಡ್‌ಗಳ ಬಗ್ಗೆ ನನ್ನ ಭಯವಿರುವುದು. ಉಳಿದವುಗಳ ಬಗ್ಗೆ ನಾನು ಹೆದರುವುದಿಲ್ಲ” ಎಂದು ಆಕೆ ಹೇಳಿದ್ದಾರೆ.

ಭದ್ರತಾ ಅಂಶವು ಕತಾರ್‌ನಲ್ಲಿ ಹೆಚ್ಚು ಚರ್ಚಿಸಲಾದ ವಿಷಯಗಳಲ್ಲಿ ಒಂದಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಕತಾರ್‌ನ ಪಂದ್ಯಾವಳಿಯ ಭದ್ರತಾ ಸಮಿತಿಯ ಅಧಿಕಾರಿಗಳು ನೂರಾರು ಪುರುಷರನ್ನು ನೇಮಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಯಾವುದೇ ಅನುಭವವಿಲ್ಲದವರಾಗಿದ್ದು, ಅವರನ್ನು ಕ್ರೀಡಾಂಗಣದೊಳಗಿನ ಪ್ರೇಕ್ಷಕರನ್ನು ಮೇಲ್ವಿಚಾರಣೆ ಮಾಡಲು ವಹಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಫಿಫಾ ಮೈದಾನದಲ್ಲಿ ರಾಷ್ಟ್ರಗೀತೆ ಹಾಡದೆ ಪ್ರತಿಭಟನೆಗೆ ಬೆಂಬಲ ನೀಡಿದ ಇರಾನ್

ಆರಂಭಿಕ ಪಂದ್ಯದಲ್ಲಿ, ಆತಿಥೇಯ ರಾಷ್ಟ್ರವು ಅಲ್ ಬೇಟ್ ಸ್ಟೇಡಿಯಂನಲ್ಲಿ ಈಕ್ವೆಡಾರ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದೆ. ಆದರೆ ಕತಾರ್ ಪಂದ್ಯವನ್ನು 0-2 ರಲ್ಲಿ ಕಳೆದುಕೊಂಡಿತು. ವಿಶ್ವಕಪ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಸೋತ ಮೊದಲ ತವರು ತಂಡವಾಯಿತು. ಕತಾರ್ ತನ್ನ ಎರಡನೇ ಪಂದ್ಯವನ್ನು ಸೆನೆಗಲ್ ವಿರುದ್ಧ ಶುಕ್ರವಾರ ಆಡಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News