Team India: ‘ನನಗೆ 35 ವರ್ಷ, 75 ಅಲ್ಲ…’ ಟೀ ಇಂಡಿಯಾದಲ್ಲಿ ಸಿಗದ ಅವಕಾಶಕ್ಕೆ ಆಕ್ರೋಶ..!
ಟೀಂ ಇಂಡಿಯಾದಲ್ಲಿ ಅವಕಾಶ ಸಿಗದಿದ್ದಕ್ಕಾಗಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಈ ಆಟಗಾರ ತನ್ನ 35ನೇ ವಯಸ್ಸಿನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ನವದೆಹಲಿ: ಟೀಂ ಇಂಡಿಯಾದಲ್ಲಿ ಯುವ ಆಟಗಾರರು ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಪ್ರತಿ ಸರಣಿಯಲ್ಲೂ ಯುವ ಆಟಗಾರರ ಮೇಲೆ ಟೀಂ ಇಂಡಿಯಾದ ಆಯ್ಕೆಗಾರರು ಆತ್ಮವಿಶ್ವಾಸ ತೋರಿಸುತ್ತಿದ್ದಾರೆ. ಇದೆಲ್ಲದರ ನಡುವೆ ಭಾರತದ ಆಟಗಾರರೊಬ್ಬರು ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ವಯಸ್ಸಾಗುತ್ತಿರುವ ಕಾರಣ ತಂಡದಲ್ಲಿ ಅವಕಾಶ ಸಿಗುತ್ತಿಲ್ಲವೆಂಬುದು ಈ ಆಟಗಾರನ ಆಕ್ರೋಶಕ್ಕೆ ಕಾರಣವಾಗಿದೆ. ಈ ಆಟಗಾರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದು, 2022ರ ಐಪಿಎಲ್ ಟೂರ್ನಿಯಲ್ಲಿಯೂ ಆಡಿದ್ದಾರೆ.
ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಆಕ್ರೋಶ
ನ್ಯೂಜಿಲೆಂಡ್‌ನ A ತಂಡ ಸೆಪ್ಟೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ ಸ್ಥಾನ ಪಡೆದಿಲ್ಲ.ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದ ಕಾರಣ ಶೆಲ್ಡನ್ ಜಾಕ್ಸನ್ ಇದೀಗ ಆಯ್ಕೆಗಾರರ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಶೆಲ್ಡನ್ ಜಾಕ್ಸನ್ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಐಪಿಎಲ್‌ನಲ್ಲಿಯೂ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ.
ಇದನ್ನೂ ಓದಿ: ICC ODI Rankings : ಐಸಿಸಿ ODI ರಾಂಕಿಂಗ್ ಪಟ್ಟಿ ಪ್ರಕಟ : ಭರ್ಜರಿಯಾಗಿ ಮಿಂಚಿದ ಶುಭಮನ್ ಗಿಲ್!
35ನೇ ವಯಸ್ಸಿನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದೇನೆ!
ಈ ಬಗ್ಗೆ ಟ್ವೀಟ್ ಮಾಡಿರುವ ಶೆಲ್ಡನ್ ಜಾಕ್ಸನ್, ‘ನಾನು 3 ಸೀಸನ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೆ, ನನಗೆ ಕನಸು ಮತ್ತು ಭರವಸೆ (ಆಯ್ಕೆಯ) ಹಕ್ಕಿದೆ. ನನ್ನ ಕಾರ್ಯಕ್ಷಮತೆಯ ಆಧಾರದ ಮೇಲೆ ನನ್ನನ್ನು ಆಯ್ಕೆ ಮಾಡಬಹುದು ಮತ್ತು ವಯಸ್ಸಿನ ಆಧಾರದ ಮೇಲೆ ಅಲ್ಲ. ನಾನು ಉತ್ತಮ ಆಟಗಾರ ಮತ್ತು ಪ್ರದರ್ಶನಕಾರ ಎಂದು ಕೇಳಲು ತುಂಬಾ ಬೇಸರವಾಗಿದೆ. ಆದರೆ ನನಗೆ ವಯಸ್ಸಾಗಿದೆ. ನನಗೆ ಈಗ 35 ವರ್ಷವಷ್ಟೇ 75 ವರ್ಷ ವಯಸ್ಸಾಗಿಲ್ಲ’ ಅಂತಾ ಬೇಸರ ತೋಡಿಕೊಂಡಿದ್ದಾರೆ. ಶೆಲ್ಡನ್ ಜಾಕ್ಸನ್ ಈ ವರ್ಷ ಐಪಿಎಲ್‌ನಲ್ಲಿ 5 ಪಂದ್ಯಗಳನ್ನು ಆಡಿದ್ದು, 5.75 ಸರಾಸರಿಯಲ್ಲಿ ಕೇವಲ 23 ರನ್ ಗಳಿಸಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆ
ಶೆಲ್ಡನ್ ಜಾಕ್ಸನ್ 2011ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ದೇಶೀಯ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಅನ್ನೋ ಹೆಗ್ಗಳಿಕೆ ಹೊಂದಿದ್ದಾರೆ. ಶೆಲ್ಡನ್ ಜಾಕ್ಸನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 79 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 19 ಶತಕಗಳ ಜೊತೆಗೆ 50.39ರ ಸರಾಸರಿಯಲ್ಲಿ 5,947 ರನ್ ಗಳಿಸಿದ್ದಾರೆ. ಸೌರಾಷ್ಟ್ರ ಆಟಗಾರ ಈ ವರ್ಷದ ರಣಜಿ ಟ್ರೋಫಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದು, ಕೇವಲ 3 ಪಂದ್ಯಗಳಲ್ಲಿ 78.25 ಸರಾಸರಿಯಲ್ಲಿ 313 ರನ್ ಗಳಿಸಿದ್ದಾರೆ.
ಇದನ್ನೂ ಓದಿ: Virat Kohli : ಕಳಪೆ ಫಾರ್ಮ್ ಹಿಂದಿನ ಕಾರಣ ಬಿಚ್ಚಿಟ್ಟ ಕಿಂಗ್ ಕೊಹ್ಲಿ!
ಇದಲ್ಲದೆ ಶೆಲ್ಡನ್ ಜಾಕ್ಸನ್ 2006ರಲ್ಲಿ ಲಿಸ್ಟ್-ಎ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ 67 ಪಂದ್ಯಗಳಲ್ಲಿ 8 ಶತಕ ಮತ್ತು 12 ಅರ್ಧ ಶತಕಗಳ ನೆರವಿನಿಂದ ಒಟ್ಟು 2,346 ರನ್ ಗಳಿಸಿದ್ದಾರೆ. ದೇಶೀಯ ಅಂಗಳದಲ್ಲಿ ಕಳೆದ 3 ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ವಯಸ್ಸಿನ ಕಾರಣ ತನನ್ನು ತಂಡಕ್ಕೆ ಆಯ್ಕೆ ಮಾಡದಿರುವ ಬಗ್ಗೆ ಶೆಲ್ಡನ್ ಜಾಕ್ಸನ್ ಅಸಮಾಧಾನ ಹೊರಹಾಕಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.