ಭಾರತ ತಂಡ ಜಿಂಬಾಬ್ವೆ ವಿರುದ್ಧದ ಸರಣಿಯನ್ನು ಅಬ್ಬರದ ಶೈಲಿಯಲ್ಲಿ ಗೆದ್ದುಕೊಂಡಿದೆ. ಟೀಂ ಇಂಡಿಯಾದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಆಗಸ್ಟ್ 22ರಂದು ಜಿಂಬಾಬ್ವೆಯ ಹರಾರೆ ಕ್ಲಬ್ ನಲ್ಲಿ ನಡೆದ ಮೂರು ದಿನಗಳ ಏಕದಿನ ಪಂದ್ಯದಲ್ಲಿ ಮೂರೂ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದುಕೊಂಡು ಜಿಂಬಾಬ್ವೆ ತಂಡವನ್ನು ಕ್ಲೀನ್ ಔಟ್ ಮಾಡಿದೆ. ಈ ಗೆಲುವಿನ ಸಂಭ್ರಮದಲ್ಲಿ ಬ್ಲೂ ಬಾಯ್ಸ್ ಡ್ರೆಸ್ಸಿಂಗ್ ರೂಂ ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನು ಕ್ಯೂ ನಿಲ್ಲೋದು ತಪ್ಪುತ್ತಾ? ಸಚಿವರು ಕೊಟ್ಟ ಭರವಸೆ ಏನು?
ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶುಭಮನ್ ಗಿಲ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಮೂರನೇ ಏಕದಿನ ಪಂದ್ಯದಲ್ಲಿ ಭಾರತ 13 ರನ್‌ಗಳ ರೋಚಕ ಗೆಲುವು ದಾಖಲಿಸಿದ್ದು, ಈ ಮೂಲಕ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಅದ್ಭುತ ಸರಣಿ ಗೆಲುವಿನ ನಂತರ ಇಡೀ ತಂಡವು ಬಹಿರಂಗವಾಗಿ ನೃತ್ಯ ಮಾಡುವ ವೀಡಿಯೊವನ್ನು ಶಿಖರ್ ಧವನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಎಲ್ಲಾ ಆಟಗಾರರು ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಇದರಲ್ಲಿ ಭಾರತೀಯ ಆಟಗಾರರು 'ಕಾಲಾ ಚಷ್ಮಾ' ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋವನ್ನು ಕೆಎಲ್ ರಾಹುಲ್ ಆರಂಭಿಸಿದ್ದು, ಬಳಿಕ ಶಿಖರ್ ಧವನ್, ಇಶಾನ್ ಕಿಶನ್ ಸೇರಿದಂತೆ ಉಳಿದ ಆಟಗಾರರು ಹೆಜ್ಜೆ ಹಾಕಿ ಕುಣಿದಾಡಿದ್ದಾರೆ.
ವಿಡಿಯೋದಲ್ಲಿ ಶಿಖರ್ ಧವನ್ ಕೂಡ ಕಪ್ಪು ಕನ್ನಡಕ ಧರಿಸಿದ್ದು, ಎಲ್ಲಾ ಆಟಗಾರರು ತುಂಬಾ ಖುಷಿಯಾಗಿ ಕಾಣುತ್ತಿದ್ದಾರೆ. ಕೆಎಲ್ ರಾಹುಲ್, ಇಶಾನ್ ಕಿಶನ್, ಶುಭಮನ್ ಗಿಲ್, ಕುಲದೀಪ್ ಯಾದವ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಶಹಬಾಜ್ ಅಹ್ಮದ್, ರಾಹುಲ್ ತ್ರಿಪಾಠಿ ಮತ್ತು ರಿತುರಾಜ್ ಗಾಯಕ್ವಾಡ್ ಕೂಡ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಪ್ರಿಯರಿಗೆ ಇವರ ಡ್ಯಾನ್ಸ್ ರಸದೌತಣ ನೀಡಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಭಾರತ 13 ರನ್‌ಗಳ ಜಯ ಸಾಧಿಸಿದೆ. ಸಿಕಂದರ್ ರಝಾ ಜಿಂಬಾಬ್ವೆ ಪರ ತಮ್ಮ ಉತ್ತಮ ಪ್ರದರ್ಶನ ನೀಡಿದ್ದರು. ಆರನೇ ಇನ್ನಿಂಗ್ಸ್‌ನಲ್ಲಿ ತಮ್ಮ ಮೂರನೇ ಶತಕವನ್ನು ಗಳಿಸಿ ಜಿಂಬಾಬ್ವೆಯನ್ನು ಗೆಲುವಿನತ್ತ ಕೊಂಡೊಯ್ದರು, ಆದರೆ ಭಾರತ ನೀಡಿದ್ದ ಗುರಿಯನ್ನು ಮುಟ್ಟಲು ಜಿಂಬಾಬ್ವೆಗೆ ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಭೂಕಂಪದ ಅನುಭವ
ಇನ್ನು ಶುಭಮನ್ ಗಿಲ್ ಭಾರತದ ಪರ ಬಿರುಸಿನ ಇನ್ನಿಂಗ್ಸ್ ಆಡಿದ್ದಾರೆ. 97 ಎಸೆತಗಳಲ್ಲಿ 130 ರನ್ ಗಳಿಸಿದ ಅವರು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕವನ್ನು ಬಾರಿಸಿದ್ದಾರೆ. ಇನ್ನೊಂದೆಡೆ ಇಶಾನ್ ಕಿಶನ್ ಅವರು 50 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.