ನವದೆಹಲಿ: T20 ಕ್ರಿಕೆಟ್ ಆಟ ಜನರಿಗೆ ಭರ್ಜರಿ ಮನರಂಜನೆ ನೀಡುತ್ತದೆ. ಈ ಚುಟುಕು ಕ್ರಿಕೆಟ್‍ನಲ್ಲಿ ಬ್ಯಾಟ್ಸ್‌ಮನ್ ಸಿಕ್ಸರ್‌-ಬೌಂಡರಿ ಹೊಡೆದಾಗ ಪ್ರೇಕ್ಷಕರು ತುಂಬಾ ರೋಮಾಂಚನಗೊಳ್ಳುತ್ತಾರೆ. ಟೀಂ ಇಂಡಿಯಾ T20 ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯಂತ ಅಪಾಯಕಾರಿ ತಂಡವೆಂದು ಪರಿಗಣಿಸಲ್ಪಟ್ಟಿದೆ. ಭಾರತ ತಂಡವು ಅಪಾಯಕಾರಿ ಬೌಲರ್‍ಗಳಿಂದ ಹಿಡಿದು ಸ್ಫೋಟಕ ಬ್ಯಾಟ್ಸ್‌ಮನ್‍ಗಳನ್ನು ಹೊಂದಿದೆ. ಆದರೆ ಇದೀಗ ಪಾಕಿಸ್ತಾನ ತಂಡವು T20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶಿಷ್ಟವಾದ ದಾಖಲೆ ಮಾಡಿದೆ. ಇದು ಇಲ್ಲಿಯವರೆಗೆ ಜಗತ್ತಿನಲ್ಲಿ ಯಾರೂ ಮಾಡಲು ಸಾಧ್ಯವಾಗದ ದಾಖಲೆ ಮತ್ತು T20 ಕ್ರಿಕೆಟ್‌ನಲ್ಲಿ ಈ ದಾಖಲೆ ಮಾಡಿದ ಮೊದಲ ದೇಶ ಪಾಕಿಸ್ತಾನವಾಗಿದೆ. ಈ ವಿಶಿಷ್ಟ ದಾಖಲೆ ಯಾವುದು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಪಾಕಿಸ್ತಾನ ತಂಡದಿಂದ ವಿಶಿಷ್ಟ ದಾಖಲೆ  


ಪಾಕಿಸ್ತಾನ ತಂಡ ಇಂಗ್ಲೆಂಡ್ ಜೊತೆ 7 ಟಿ-20 ಪಂದ್ಯಗಳ ಸರಣಿ ಆಡುತ್ತಿದೆ. ಸದ್ಯ ಸರಣಿ 2-2ರಲ್ಲಿ ಸಮಬಲದಲ್ಲಿದೆ. ಸರಣಿಯ 4ನೇ ಟಿ-20 ಪಂದ್ಯವನ್ನು ಆಡುವ ಮೂಲಕ ಪಾಕಿಸ್ತಾನ ತಂಡವು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 200 ಟಿ-20 ಪಂದ್ಯಗಳನ್ನು ಆಡಿರುವ ಪಾಕಿಸ್ತಾನ 122 ಪಂದ್ಯಗಳನ್ನು ಗೆದ್ದಿದೆ. ಅದೇ ರೀತಿ 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಕ್ ತಂಡದ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅತ್ಯುತ್ತಮ ಫಾರ್ಮ್‌ನಲ್ಲಿ ಆಡುತ್ತಿದ್ದಾರೆ.


ಇದನ್ನೂ ಓದಿ: IND vs SA: ಟೀಂ ಇಂಡಿಯಾಗೆ ಭಾರೀ ಆಘಾತ: ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಬಿದ್ದ ಆಲ್ ರೌಂಡರ್!


ಭಾರತ ತಂಡ 2ನೇ ಸ್ಥಾನದಲ್ಲಿದೆ


ಅತಿಹೆಚ್ಚು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ತಂಡಗಳ ಪೈಕಿ ಟೀಂ ಇಂಡಿಯಾ 2ನೇ ಸ್ಥಾನದಲ್ಲಿದೆ. ಭಾರತ ಇದುವರೆಗೆ 182 ಟಿ-20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 116 ಪಂದ್ಯಗಳನ್ನು ಗೆದ್ದಿದೆ. 2007ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ ಟಿ-20 ವಿಶ್ವಕಪ್ ಟ್ರೋಫಿ ಗೆದ್ದಿದ್ದರೆ, 2009ರಲ್ಲಿ ಯೂನಸ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಟಿ-20 ವಿಶ್ವಕಪ್ ಗೆದ್ದಿತ್ತು. 171 ಪಂದ್ಯಗಳನ್ನು ಆಡಿರುವ ವೆಸ್ಟ್ ಇಂಡೀಸ್ ತಂಡ 3ನೇ ಸ್ಥಾನದಲ್ಲಿದೆ.


ಟಿ-20 ವಿಶ್ವಕಪ್‌ನಲ್ಲಿ ಹಣಾಹಣಿ


ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ 2 ಬಾರಿ ಮುಖಾಮುಖಿಯಾಗಿದ್ದವು. ಈ ಪೈಕಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು. ಇದೀಗ ಮತ್ತೆ ಈ ಎರಡೂ ತಂಡಗಳು 2022ರ T20 ವಿಶ್ವಕಪ್‌ನಲ್ಲಿ ಸೆಣಸಾಡಲಿವೆ. ಈ ಪಂದ್ಯವು ಅಕ್ಟೋಬರ್ 23ರಂದು ನಡೆಯಲಿದ್ದು, ಕೋಟ್ಯಂತರ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.


ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ಭಾರೀ ಹಿನ್ನಡೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.