IND vs BAN: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ನಾಳೆ ಅಂದರೆ ಡಿಸೆಂಬರ್ 10 ರಂದು ನಡೆಯಲಿದೆ. ಭಾರತ ಇದೀಗ ಕ್ಲೀನ್ ಸ್ವೀಪ್ ನಿಂದ ತಪ್ಪಿಸಿಕೊಳ್ಳಲು ಹೋರಾಡುವಂತಾಗಿದೆ. ಆತಿಥೇಯರು ಆರಂಭಿಕ ಎರಡೂ ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ. ಚಿತ್ತಗಾಂಗ್ ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಶುಕ್ರವಾರ ಅಭ್ಯಾಸ ಸೆಷನ್ ಆಯೋಜಿಸಲಾಗಿದ್ದು, ಇದರಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಭಾಗವಹಿಸಿದ್ದರು. ಆದರೆ ಗಮನ ಮಾತ್ರ ಕೇವಲ ಈ 2 ಆಟಗಾರರ ಮೇಲೆ ಬಿದ್ದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Australia vs West Indies: ಬಾಲ್ ಎಸೆದ ರಭಸಕ್ಕೆ ಕಾಲಲ್ಲಿದ್ದ ಶೂ ಮಾರುದ್ದ ಹಾರಿಹೋಯ್ತು: ಕ್ರಿಕೆಟ್ ಮೈದಾನದ ಫನ್ನಿ ದೃಶ್ಯ ನೋಡಿ


ವಿಕೆಟ್‌ ಕೀಪರ್‌ನ ಪಾತ್ರ ನಿರ್ವಹಿಸುತ್ತಿರುವ ಕೆಎಲ್ ರಾಹುಲ್ ಈಗ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಸಮಸ್ಯೆಯಿಂದ ರೋಹಿತ್ ಶರ್ಮಾ ಮೂರನೇ ಏಕದಿನ ಪಂದ್ಯದ ಭಾಗವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರಾಹುಲ್‌ಗೆ ತಂಡದ ನಾಯಕತ್ವವನ್ನು ನೀಡಲಾಗಿದೆ. ರೋಹಿತ್ ಹೊರತಾಗಿ, ಸ್ಟಾರ್ ವೇಗಿ ದೀಪಕ್ ಚಹಾರ್ ಮತ್ತು ಯುವ ವೇಗದ ಬೌಲರ್ ಕುಲದೀಪ್ ಸೇನ್ ಕೂಡ ಗಾಯದಿಂದಾಗಿ ಸರಣಿಯ ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಶರ್ಮಾ ಹೆಬ್ಬೆರಳಿಗೆ ಗಂಭೀರ ಗಾಯವಾಗಿತ್ತು. ಮಂಡಿನೋವಿನ ಕಾರಣದಿಂದಾಗಿ ದೀಪಕ್ ಕೂಡ ಮೈದಾನವನ್ನು ತೊರೆದರು. ಇನ್ನೊಂದೆಡೆ ಕುಲದೀಪ್ ಸೇನ್ ಬೆನ್ನಿನ ನೋವಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.


ಶುಕ್ರವಾರ ಚಿತ್ತಗಾಂಗ್‌ನಲ್ಲಿ ನಡೆದ ನೆಟ್ಸ್‌ನಲ್ಲಿ ಕೆಎಲ್ ರಾಹುಲ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಶಾನ್ ಕಿಶನ್ ಮತ್ತು ರಾಹುಲ್ ತ್ರಿಪಾಠಿ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ. ರೋಹಿತ್ ಶರ್ಮಾ ಗಾಯಗೊಂಡಿರುವ ಕಾರಣ, ಶಿಖರ್ ಧವನ್ ಜೊತೆಯಲ್ಲಿ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಓಪನಿಂಗ್ ಅವಕಾಶ ಸಿಗಬಹುದು. ಆದರೆ, ಇಶಾನ್ ಕಿಶನ್ ಈಗಾಗಲೇ ಈ ಜವಾಬ್ದಾರಿಯನ್ನು ನಿರ್ವಹಿಸಿರುವ ಕಾರಣ ಸಾಧ್ಯತೆ ಹೆಚ್ಚು. ಜಾರ್ಖಂಡ್ ಮೂಲದ 24 ವರ್ಷದ ಕಿಶನ್ ಭಾರತ ಪರ 9 ODI ಮತ್ತು 21 T20 ಪಂದ್ಯಗಳನ್ನು ಆಡಿದ್ದಾರೆ. ODIಗಳಲ್ಲಿ ಅವರ ಒಟ್ಟಾರೆ ಸ್ಟ್ರೈಕ್ ರೇಟ್ 90.5 ಆಗಿದೆ.


ಬಾಂಗ್ಲಾದೇಶ ವಿರುದ್ಧದ ಸರಣಿಯ ಕೊನೆಯ ಏಕದಿನ ಪಂದ್ಯಕ್ಕೆ ಬಿಸಿಸಿಐ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕುಲದೀಪ್ ಯಾದವ್ 2022 ರ ಟಿ 20 ವಿಶ್ವಕಪ್‌ಗಿಂತ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಕುಲದೀಪ್ ಈ ಹಿಂದೆ ಯುಪಿ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದರು.


ಇದನ್ನೂ ಓದಿ:IND vs BAN: ಟೀಂ ಇಂಡಿಯಾದಲ್ಲಿ ಮತ್ತೆ ಈ ಆಟಗಾರನ ಕೆಟ್ಟ ದಿನಗಳು ಶುರು: ಆ ತಪ್ಪಿನಿಂದ ಹಾಳಾಗುತ್ತಾ ಕರಿಯರ್!


ಮೂರನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ನಾಯಕ), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.