Australia vs West Indies 2nd Test: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯ ಅಡಿಲೇಡ್‌ನಲ್ಲಿ ನಡೆಯುತ್ತಿದೆ. ಆತಿಥೇಯರು ಅಮೋಘ ಆರಂಭ ಮಾಡಿ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 330 ರನ್ ಗಳಿಸಿದ್ದಾರೆ. ಇದರ ನಂತರ, ಎರಡನೇ ದಿನ ಅಂದರೆ ಶುಕ್ರವಾರ ಈ ಸ್ಕೋರ್ ಅನ್ನು ಮೊದಲ ಸೆಷನ್‌ನಲ್ಲಿ 430 ರನ್ ದಾಟುವಂತೆ ಮಾಡಿದ್ದಾರೆ. ಮಾರ್ನಸ್ ಲಬುಶೆನ್ ಮತ್ತು ಟ್ರಾವಿಸ್ ಹೆಡ್ ಶತಕ ಗಳಿಸಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸಖತ್ ಫನ್ನಿಯಾಗಿದೆ. ಇದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ: IND vs BAN: ಇಂಡೋ-ಬಾಂಗ್ಲಾ 3ನೇ ಪಂದ್ಯದ ಮೇಲೆ ವರುಣನ ವಕ್ರದೃಷ್ಟಿ: ಚಿತ್ತಾಗಾಂಗ್ ಹವಾಮಾನ ವರದಿ ಹೀಗಿದೆ
ಈ ವಿಡಿಯೋದಲ್ಲಿ ವೆಸ್ಟ್ ಇಂಡೀಸ್ ವೇಗಿ ಡೆವೊನ್ ಥಾಮಸ್ ಇನಿಂಗ್ಸ್ ನ 113ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ಇದು ಅವರ 12ನೇ ಓವರ್ ಆಗಿತ್ತು. ಅವರ ಮುಂದೆ 168 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಟ್ರಾವಿಸ್ ಹೆಡ್ ಇದ್ದರು. ಥಾಮಸ್ ಚೆಂಡನ್ನು ಎಸೆದರು. ಆದರೆ ಈ ಸಂದರ್ಭದಲ್ಲಿ ಬಾಲ್ ಅತ್ತಕಡೆ ಹೋಗುತ್ತಿದ್ದಂತೆ, ಇತ್ತ ಕಡೆ ಅವರ ಶೂ ಕಿತ್ತು ಬಂತು. ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಕಾಲಿಗೆ ಹಾಕಿ ಲೇಸ್‌ಗಳನ್ನು ಕಟ್ಟಿದರು.
Over, under, in and out!
That's what shoe-tying's all about #AUSvWI pic.twitter.com/Y2A7o6kldo
— cricket.com.au (@cricketcomau) December 9, 2022
ಈ ದೃಶ್ಯವನ್ನು ಕಂಡು ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಆನಂದಿಸಿದೆ. ಈ ವೀಡಿಯೊವನ್ನು ಟ್ವೀಟ್ ಮಾಡಿದ ಸಿಎ, 'ಓವರ್, ಅಂಡರ್, ಇನ್ ಮತ್ತು ಔಟ್' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೋಗೆ ಹಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: IPLನಿಂದ ವಿದೇಶಿ ಆಟಗಾರರಿಗೆ ಬಿಗ್ ಶಾಕ್: ಈ ನಿಯಮದ ಪ್ರಕಾರ ತಂಡಕ್ಕೆ ಸೇರ್ಪಡೆಯಿಲ್ಲ!!
ಈ ಪಂದ್ಯದ ಕುರಿತು ಮಾತನಾಡಿರುವ ಆಸ್ಟ್ರೇಲಿಯಾದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಲಬುಶೆನ್ 305 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 163 ರನ್ ಗಳಿಸಿದರು. ಆರಂಭಿಕ ಉಸ್ಮಾನ್ ಖವಾಜಾ 62 ರನ್ ಕೊಡುಗೆ ನೀಡಿದರು. ಆಗ ಟ್ರಾವಿಸ್ ಹೆಡ್ ಶತಕ ಬಾರಿಸಿದರು. ಹೆಡ್ ಮತ್ತು ಲಬುಶೆನ್ ನಾಲ್ಕನೇ ವಿಕೆಟ್‌ಗೆ 297 ರನ್ ಜೊತೆಯಾಟ ನಡೆಸಿದರು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 164 ರನ್‌ಗಳಿಂದ ಗೆದ್ದು 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.