ನವದೆಹಲಿ: 2022ನೇ ಸಾಲಿನ ಟಿ-20 ವಿಶ್ವಕಪ್ ಟೂರ್ನಿ(T20 World Cup 2022) ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಇದಕ್ಕಾಗಿ ಟೀಂ ಇಂಡಿಯಾ ಸಾಕಷ್ಟು ಶ್ರಮಿಸುತ್ತಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ(Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಅತ್ಯುತ್ತಮ ಫಾರ್ಮ್‌ನಲ್ಲಿ ಸಾಗುತ್ತಿದೆ. ಸತತ ಮೂರು ಟಿ-20 ಸರಣಿ ಗೆದ್ದಿದ್ದರೂ ಟಿ-20 ವಿಶ್ವಕಪ್ ಗೆ ಇಬ್ಬರು ಆಟಗಾರರ ಸ್ಥಾನ ಅಪಾಯದಲ್ಲಿದೆಯಂತೆ. ಈ ಆಟಗಾರರು ಬಹಳ ಸಮಯದಿಂದ ತಂಡದಿಂದ ಹೊರಗುಳಿಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಮ್ಯಾಚ್ ವಿನ್ನರ್ ಗಳ ಸ್ಥಾನ ಅಪಾಯದಲ್ಲಿ!


ಟೀಂ ಇಂಡಿಯಾ ಅನೇಕ ಮ್ಯಾಚ್ ವಿನ್ನರ್ ಆಟಗಾರರನ್ನು ಒಳಗೊಂಡಿದೆ. ಈ ಆಟಗಾರರು ಪಂದ್ಯದ ಗತಿಯನ್ನೇ ಸಂಪೂರ್ಣವಾಗಿ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ ಆಯ್ಕೆದಾರರು ಮೊಹಮ್ಮದ್ ಶಮಿ(Mohammed Shami) ಮತ್ತು ರವಿಚಂದ್ರನ್ ಅಶ್ವಿನ್(R Ashwin) ಅವರನ್ನು 2022ರ T20 ವಿಶ್ವಕಪ್ ಟೂರ್ನಿಯಿಂದ ಹೊರಗಿಡಬಹುದು ಎನ್ನಲಾಗುತ್ತಿದೆ.


ಇದನ್ನೂ ಓದಿ: IPL 2022 ರಲ್ಲಿ ಬುಮ್ರಾಗಿಂತ ಬಲಿಷ್ಠ ಈ 3 ಬ್ಯಾಟ್ಸ್‌ಮನ್‌ಗಳು, ಇವರಿದ್ದರೆ ಬೌಂಡರಿ - ಸಿಕ್ಸರ್‌ಗಳ ಮಳೆನೆ


ಯುಎಇಯಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿ ಇವರಿಬ್ಬರಿಗೂ ಚೆನ್ನಾಗಿರಲಿಲ್ಲ, ಏಕೆಂದರೆ ಆ ಟೂರ್ನಿಯಲ್ಲಿ ಈ ಇಬ್ಬರಿಂದ ಯಾವುದೇ ಪವಾಡ ನಡೆಯಲಿಲ್ಲ. ಬ್ಯಾಟ್ಸ್ ಮನ್ ಗಳು ಇವರಿಬ್ಬರ ಬೌಲಿಂಗ್ ಅನ್ನು ಧೂಳಿಪಟ ಮಾಡಿದ್ದರು. ವಿಕೆಟ್ ಗಳಿಸುವುದಿರಲಿ ಚೆನ್ನಾಗಿ ಬೌಲಿಂಗ್ ಮಾಡುವುದೇ ಇವರಿಗೆ ದೊಡ್ಡ ಸವಾಲಾಗಿತ್ತು. ಕೆಲವು ಪಂದ್ಯಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ಟೀಕೆಗೂ ಗುರಿಯಾಗಬೇಕಾಯಿತು. ಹೀಗಾಗಿ ಈ ಹಿಂದೆ ಮ್ಯಾಚ್ ವಿನ್ನರ್ ಗಳಾಗಿದ್ದ ಇವರಿಗೆ ಈ ಬಾರಿ ಆಯ್ಕೆದಾರರು ಗೇಟ್ ಪಾಸ್ ನೀಡಬಹುದು ಎನ್ನಲಾಗುತ್ತಿದೆ.   


ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿರುವ ಆಟಗಾರರು


ರವಿಚಂದ್ರನ್ ಅಶ್ವಿನ್(R.ashwin) 4 ವರ್ಷಗಳ ನಂತರ ಪುನರಾಗಮನ ಮಾಡಿದ್ದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಅವರಿಗೆ ಗೇಟ್ ಪಾಸ್ ನೀಡಲಾಯಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ತಂಡದ ಸಾಮಾನ್ಯ ಸದಸ್ಯರಾಗಿದ್ದರೆ, ವೈಟ್ ಬಾಲ್‌ನಲ್ಲಿ ಯಶಸ್ವಿ ಬೌಲರ್ ಎನಿಸಿಲ್ಲ. ಎಂ.ಎಸ್.ಧೋನಿ ಟೀಂ ಇಂಡಿಯಾದ ನಾಯಕರಾಗಿದ್ದಾಗ ಅಶ್ವಿನ್ ಸ್ಪಿನ್ ಬೌಲಿಂಗ್ ಅನ್ನು ಮುನ್ನಡೆಸುತ್ತಿದ್ದರು. ಆದರೆ ನಂತರ ಆಯ್ಕೆದಾರರು ಅವರ ಬಗ್ಗೆ ಭ್ರಮನಿರಸನಗೊಂಡರು. ಮತ್ತೊಂದೆಡೆ ಮೊಹಮ್ಮದ್ ಶಮಿ ಟಿ-20 ವಿಶ್ವಕಪ್ ನಂತರ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಇಬ್ಬರೂ ಆಟಗಾರರು ಐಪಿಎಲ್ 2022ರಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾಗುತ್ತದೆ. ಒಂದು ವೇಳೆ ಇವರು ಕಳಪೆ ಪ್ರದರ್ಶನ ನೀಡಿದರೆ ತಂಡಕ್ಕೆ ಸೇರುವ ದಾರಿ ಬಂದ್ ಆಗಲಿದೆ.  


ಇದನ್ನೂ ಓದಿ: IPL 2022: ಲಕ್ನೋ ತಂಡಕ್ಕೆ ಬಿಗ್ ಶಾಕ್, ಐಪಿಎಲ್ ನಿಂದ ಹೊರಕ್ಕೆ ಬಿದ್ದ ಈ ಆಟಗಾರ..!


ಯುವ ಬಳಗಕ್ಕೆ ಹೆಚ್ಚು ಪ್ರಾಶಸ್ತ್ಯ


ಶಮಿ ODI ವೃತ್ತಿಜೀವನವು ಹೆಚ್ಚು ಉತ್ತಮ ಸ್ಥಿತಿಯಲ್ಲಿದೆ. ಆದರೆ ಟಿ-20 ವಿಶ್ವಕಪ್‌ಗೆ ಸ್ಥಾನ ಪಡೆಯಲು ಅವರು ಐಪಿಎಲ್(IPL 2022) ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಾಗಿದೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಯುವ ಬಳಗಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಹೀಗಾಗಿಯೇ ದೀಪಕ್ ಚಹಾರ್, ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ತಂಡದಲ್ಲಿ ಸುಲಭವಾಗಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಯುಜ್ವೇಂದ್ರ ಚಹಾಲ್ ಮತ್ತು ರವಿ ವಿಷ್ಣೋಯ್ ಸ್ಪಿನ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದೇ ಸಾಲಿನಲ್ಲಿ ರಾಹುಲ್ ಚಹಾರ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.


8 ವರ್ಷಗಳಿಂದ ಐಸಿಸಿ ಪ್ರಶಸ್ತಿ ಗೆಲ್ಲದ ಟೀಂ ಇಂಡಿಯಾ


ಭಾರತ 2013ರಲ್ಲಿ ಕೊನೆಯದಾಗಿ ಐಸಿಸಿ ಪ್ರಶಸ್ತಿ ಗೆದ್ದಿತ್ತು. ನಂತರ ಧೋನಿ(MS Dhoni) ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಭಾರತ ಒಂದೇ ಬಾರಿ ಟಿ-20 ವಿಶ್ವಕಪ್ ಕಿರೀಟವನ್ನು ಧರಿಸಿದೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾ ರಣತಂತ್ರ ರೂಪಿಸುತ್ತಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಿ ಬಲಿಷ್ಠ ತಂಡವನ್ನು ಕಣಕ್ಕಿಳಿಸುವ ಪ್ಲಾನ್ ಮಾಡಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.